ಕಾವ್ಯ ಸಂಗಾತಿ
ಡಾ.ಸುಧಾ.ಚ.ಹುಲಗೂರ-
ಗಂಡು ಮಕ್ಕಳ ದಿನಾಚರಣೆ


ಗಂಡು ಮಕ್ಕಳೆ ನೀವು ಕಮ್ಮಿಎನಲ್ಲ
ಹೆಣ್ಣು ಮಕ್ಕಳ ಮನದಿ ನೀವುಳಿದಿರಲ್ಲ
ತಂದೆಯಾಗಿ ನೀವೆ ಕುಟುಂಬಕೆಲ್ಲ
ಆಧಾರದಾಸ್ತಂಭ ಎಂದು ನಾವ್ ತಿಳಿದೆವಲ್ಲ
ಅಣ್ಣನೆಂಬ ಸ್ತಾನಕೆ ನೀವೇ ಹೀರೋ ನಮಗೆ
ತಮ್ಮನಾ ಪ್ರೀತಿಯನು ಅಕ್ಕನಿಂದ ಪಡೆದಿ
ನಿಮಗಾಗಿ ಕರಮುಗಿದು ದೇವರಲ್ಲಿ ಬೇಡುವಳು ನಿತ್ಯ
ನಿಮ್ಮ ಕ್ಷೇಮಕ್ಕಾಗಿ ದೇವನನು ಜಪಿಸುವಳು .ಸತ್ಯ
ಹೆಣ್ಣು ಮಕ್ಕಳು ತಂದೆಯನ್ನು ದೇವನೆಂದು ಪೂಜಿಸಿ
ಅಣ್ಣತಮ್ಮರನ್ನು ಹೆಮ್ಮೆಯಿಂದ ಗೌರವಿಸಿ
ಮನೆಯ ಭದ್ರತೆಗೆ ಎಲ್ಲ ಕಾಯಕಕೆ ಆಧಾರವಾಗಿರುವ ನಿಮಗೆ
ದೇವರಲ್ಲಿ ಬೇಡುವಳು ನಿಮ್ಮ ಆಯುರಾರೋಗ್ಯಕ್ಕಾಗಿ
ಮದುವೆಯ ನಂತರ ಗಂಡನೇ ಅವಳಿಗೆ ಎಲ್ಲ
ತವರು ಮನೆಯೆ ಅವಳ ಗಂಡನಾಗಿರುವನಲ್ಲ
ಇದಕಿಂತ ಸೊಭಾಗ್ಯ ಅವಳಿಗೆ ಎಲ್ಲೂ ಇಲ್ಲ
ಅವಳ ಆತ್ಮದ ಸಂತೋಷ ಭರವಸೆ ತನ್ನ ಗಂಡ ಎಂಬುದು ಅವಳು ಮರೆಯುವುದಿಲ್ಲ
ಒಬ್ಬ ಗೃಹಿಣಿ ಕರಮುಗಿದು ದೇವನಲ್ಲಿ ತನಗಾಗಿ ಏನೂ ಬೇಡುವುದಿಲ್ಲ
ತನ್ನ ಮನೆ ಗುರುಹಿರಿಯರು
ಗಂಡ ಮನೆ ಮಕ್ಕಳ ಯೋಗ ಕ್ಷೇಮಕೆ ಜಪತಪ ಮಾಡುವಳಲ್ಲಿ
ಅವಳಿಗೆ ನಿತ್ಯವೂ ಗಂಡು ಮಕ್ಕಳ ದಿನಾಚರಣೆಯನು
ಅವಳು ತನ್ನ ದ್ಯಾನ ಮೌನದಲಿ ಆಚರಿಸಿದಳಲ್ಲ
ಬಾಯಿಬಿಚ್ಟಿ ಎಂದೂ ಹೇಳಿದವಳಲ್ಲ.
ಡಾ.ಸುಧಾ.ಚ.ಹುಲಗೂರ




