ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ


ವರ್ಣನೆ ವರ್ಣಾತೀತವಾದುದು ನಿನ್ನದು
ಕಲ್ಪನೆ ಕಲ್ಪನಾತೀತವಾದುದು ನಿನ್ನದು
ಬಣ್ಣಿಸಲಾಗದೆ ಸೋತಿರುವೆನು ನಾನು
ರಂಜನೆ ರಂಜನಾತೀತವಾದುದು ನಿನ್ನದು
ಕುಂಚವೆ ಬೆರಗಾಗಿ ನೋಡುತ್ತಿದೆಯಲ್ಲ
ಬಣ್ಣನೆ ಶೃಂಗಾರತೀತವಾದುದು ನಿನ್ನದು
ಕೊಂಚವು ರೆಪ್ಪೆ ಮುಚ್ಚಲಾರೆ ನಾನೀಗ
ಆಕರ್ಷಣೆ ಆಕರ್ಷಣಾತೀತವಾದುದು ನಿನ್ನದು
ಮಾದಕತೆ ಕಂಗಳ ಕಣ್ಮಣಿಯೇ ಇವಳು
ವಿಸ್ಮಯ ವಿಸ್ಮಯಾತೀತವಾದುದು ನಿನ್ನದು
ಮಾಜಾನ್ ಮಸ್ಕಿ





Nice gazal
Wow super