ಕಾವ್ಯ ಸಂಗಾತಿ
ಸಂಪಿಗೆ ವಾಸು ಅವರ ನಿಸರ್ಗ ಕುರಿತಾದ ಒಂದಿಷ್ಟು
ಹಾಯ್ಕುಗಳು

*ಸೂರ್ಯ*
ಜಗಕೊಬ್ಬನೇ
ಸೂರ್ಯ ಬೆಳಗುವನು
ಅನವರತ
*ಚಂದ್ರ*
ಹುಣ್ಣಿಮೆಯಂದು
ಸಂಪೂರ್ಣ ಬೆಳಗುವ
ಚಂದ್ರ ಸುಂದರ
*ಮಿಂಚು*
ಮಿಂಚುಸಹಿತ
ಮಳೆಗೆ ಈ ಇಳೆಯು
ತತ್ತರಿಸಿತು
*ಮಳೆ*
ಮಳೆಯಾದರೆ
ಬೆಲೆ ಹುಲುಸದು
ಸಸ್ಯಶಾಮಲ
*ಹಸಿರು*
ವರ್ಷಾಕಾಲದಿ
ಭೂರಮೆಯ ಹಸಿರು
ನಯನಾನಂದ
*ಇಳೆ*
ಈ ಇಳೆ ಒಂದು
ಅಚ್ಚರಿಯ ತಾಣವು
ನಮ್ಮ ನಿವಾಸ
———————————————————————————–
ಸಂಪಿಗೆ ವಾಸು ಬಳ್ಳಾರಿ




