ಕಾವ್ಯ ಸಂಗಾತಿ
ಪ್ರೊ ರಾಜೇಶ್ವರಿ ಶೀಲವಂತ ಪುಣೆ
“ಇದುವೇ ಜೀವನ”

ನಾನು ನನ್ನ ನಲ್ಲ
ತುಂಬಾ ಕನಸು
ಹೊತ್ತೇವಲ್ಲ
ನಿರ್ಮಿಸಿದೆವೊಂದು
ಸುಂದರ ನಿಲಯ
ಆ ಪುಟ್ಟ ಗೂಡಿನಲಿ
ಎರಡು ಮುದ್ದು ಮಕ್ಕಳ
ಆಗಮನ
ಸಂತಸ ವಿಧಿಗೆ
ಸಹಿಸಲಾಗಲಿಲ್ಲ
ಸಂಭ್ರಮ ನೆಮ್ಮದಿ
ಮುದುಡಿದವು ಮೂಲೆಯಲಿ
ಕಿತ್ತುಕೊಂಡಿತು ಸಂತಸ
ಉಳಿಯಿತು ಭ್ರಮೆ ನೀರಸ
ಬರಡು ಭೂಮಿ
ಇದುವೇ ಜೀವನ.
ಇದುವೇ ಕಥನ

ಪ್ರೊ ರಾಜೇಶ್ವರಿ ಶೀಲವಂತ ಪುಣೆ




Excellent poem