ಕಾವ್ಯ ಸಂಗಾತಿ
ಸುಧಾ ಪಾಟೀಲ
“ಬದುಕು ಜವಳಿ ಅಂಗಡಿ”

ಬದುಕು ಜವಳಿ ಅಂಗಡಿಯಂತೆ
ಬಣ್ಣ ಬಣ್ಣದ ತಂತು ತುಂಬಿದೆ
ಒಂದು ನಗೆ ಒಂದು ನಿಟ್ಟುಸಿರು
ಎರಡೂ ಸೇರಿ ಬಟ್ಟೆ ನೇಯ್ದಿದೆ
ಸಂತೋಷದ ರೇಷ್ಮೆ ಹೊಳೆಯು ತಿದೆ
ದುಃಖದ ಹತ್ತಿ ಹೊದೆಯುತಿದೆ
ಪ್ರತಿ ದಿನದ ನೂಲು ಬದಲಾಗುತ
ಮನದ ನೇಯ್ಗೆಯಲ್ಲಿ ಬಟ್ಟೆ ಮೂಡುತಿದೆ
ಯಾರಿಗೊ ಹೂವಿನ ಮಾದರಿ
ಯಾರಿಗೊ ಬೂದು ಬಣ್ಣ
ಕಾಲದ ಕೈಯಲ್ಲಿ ಎಲ್ಲರೂ ತಿರುಗುತ್ತಿದ್ದಾರೆ ಆಟಿಕೆಗಳಂತೆ
ನೆರಳು ಬೆಳಕಿನ ನೇಯ್ಗೆಯಲಿ ಹೆಣೆದಿದೆ ಜೀವನದ ಪಟ್ಟಿ
ಕೊನೆಯಲ್ಲಿ ಉಳಿಯುವುದು ಏನು
ಒಂದು ನೆನಪಿನ ಗಟ್ಟಿ
—————-
ಸುಧಾ ಪಾಟೀಲ





ಮ್ಯಾಮ್