ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ಮಾದರಿ ಪ್ರಜೆ”

ಈ ದೇಶ ಭಾರತ,
ನಮ್ಮ ತಾಯಿ ಭಾರತ,
ಜಾತ್ಯಾತೀತ ದೇಶವು ಭಾರತ,
ಶಾಂತಿ ಸದಾ ನಾವು ಬಯಸುತ,!
ಹಿಂದು ಮುಸ್ಲಿಂ ಕ್ರೈಸ್ತರು,
ಜೈನ ಬುದ್ದ ಸಿಕ್ಕ್ ಮರಾಠರು,
ಸಿಂಧಿ ಗುಜರಾತಿ ಪಂಜಾಬಿಗರು,
ದೇಶಾಭಿವೃದ್ದಿಯ ಸದಾ ಬಯಸುತ,!
ಶಾಂತಿಯ ಹೂ ತೋಟವಿದು,
ವಿವಿಧತೆಯಲಿ ಏಕತೆ ತಾಣವಿದು,
ಬಹುಸಂಸ್ಕೃತಿಗಳ ನಮ್ಮ ದೇಶವಿದು,
ಒಗ್ಗಟ್ಟಿಂದ ಬಾಳಲು ಸದಾ ಬಯಸುತ,!
ದಿಕ್ಕಾರವಿರಲಿ, ದಿಕ್ಕಾರ…,
ಕೋಮುವಾದಿಗಳಿಗೆ ದಿಕ್ಕಾರ,
ದ್ವೇಷ ರಾಜಕಾರಣಿಗೂ ದಿಕ್ಕಾರ,
ಮತೀಯ ದ್ವೇಷ ಅಳಿಸ ಬಯಸುತ,!
ಬನ್ನಿ ಪ್ರೀತಿಯ ಹಂಚೋಣ,
ಬನ್ನಿ ಅರಾಜಕತೆ ಅಳಿಸೋಣ,
ಬನ್ನಿ ಸಾಮರಸ್ಯವನು ಬೆಳೆಸೋಣ,
ವಿಶ್ವಕ್ಕೆ “ಮಾದರಿ ಪ್ರಜೆ” ನಾವಾಗೋಣ.!
————————-
ಹಮೀದ್ ಹಸನ್ ಮಾಡೂರು.





ಶ್ರೀ ಮಾನ್ಯರೆ ಹಮಿದ್ ಹಾಸನ್ ರವರಿಗೆ ನಮಸ್ಕಾರ ಹಾಗುಅಬಿನಂಧನೇಗಳು ನಿಮ್ಮ ಮಾದರಿ ಪ್ರಜೆ#ಶ್ರೀ ಸಿಕೆ ಚೆನಾಗಿದೆ ಶುಭಾವಾಗಳಿ ಸದಾ
ಸದಾ ಪುಷ್ಪಾ ಕೋಟೆಕಾರ್ ಮಾಡುರೂ ಮಂಗಳೂರು (ಇನೂಸಾಹಿತಿವಾಗಿಮುಂದುವರಿಯಿರಿ)_