ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಮೆರವಣಿಗೆ”

ಅದೆಷ್ಟೋ ದಶಕಗಳು
ಉರುಳಿದವು
ಹೀಗೆ ರಿಬ್ಬನ್ ಉಂಡೆ
ಉರುಳಿದಂತೆ
ನಿಂತಿಲ್ಲ ಘೋಷಣೆ ಕೂಗು
ಗುಂಪಿನಲ್ಲಿ ನಮ್ಮಲ್ಲಿರುವ
ನಮ್ಮ ಸೈತಾನ ಶಕ್ತಿ
ನನ್ನೊಳಗಿನ ಅಂತರಂಗದ
ಒಬ್ಬ ಸಂತನನ್ನು
ಬರ್ಬರವಾಗಿ ಕೊಲ್ಲುತ್ತೇವೆ
ಬೀದಿಗಳಲ್ಲಿ ಮೆರವಣಿಗೆ
ಪಥ ಸಂಚಲನ
ಬುದ್ಧ ಬಸವ ಬಾಪು
ಅಂಬೇಡ್ಕರವರ ಫೋಟೋ ಹೊತ್ತು
ನಿತ್ಯ ಸತ್ಯ ಸಮಾಧಿ ಮಾಡುತ್ತೇವೆ
ಹುಟ್ಟಿ ಕೊಳ್ಳುತ್ತಾರೆ
ಹಿಟ್ಲರ್ ಮುಸಲೋನಿ
ಅಧಿಕಾರವೇರುತ್ತಾರೆ
ರಕ್ತ ಬಿಜಾಸುರರ ಆಡಳಿತ
ನಾವು ಘೋಷಣೆ ಕೂಗುತ್ತಲಿದ್ದೇವೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಅಬ್ಬಾ ಅತ್ಯುತ್ತಮ ಕವನ ಸರ್
ಎಂಥ ಮಾತು. ಎದೆ ಒಮ್ಮೆ ನಡುಗಿತು. ಮನ ತಲ್ಲಣಿಸಿತು. ಎದೆಬಡಿತ ನಗಾರಿಯಂತೆ. ಇನ್ನೂ ಅದರ ತಪ್ಪಿದ ತಾಳ ಸರಿಯಾಗುತ್ತಿಲ್ಲ. ನಿಮಗೆ ನೀವೇ ಸಾಟಿ.
ಸರ್,ತಮ್ಮ ಕವನ ವಾಸ್ತವಕ್ಕೆ ಕನ್ನಡಿ. ಧನ್ಯವಾದ ಗಳು
ಡಾ ಬೀ ಎಂ ಪಾಟೀಲ ರಾಯಬಾಗ
ಕವಿತೆ ಅರ್ಥಪೂರ್ಣವಾಗಿ ಮೂಡಿ ಬಂದಿದೆ ಸರ್
ಪ್ರಭಾವತಿ ದೇಸಾಯಿ ವಿಜಯಪುರ
ಅತ್ಯಂತ ಮನೋಜ್ಞ ಸುಂದರ ಕವಿತೆ
ವಾವ್ ಈಗಲೂ ಇಂತಹ ವೈಚಾರಿಕ ಕವಿ ಮನಸ್ಸುಗಳು ಇವೆ ಎಂದು.ಖುಷಿ ಆಯ್ತು
ಸಾಮಾಜಿಕ ಕಳಕಳಿ ಹೊತ್ತ ಕವನ. ಸುತ್ತಮುತ್ತಲೂ ದಿನನಿತ್ಯ ನಡೆಯುತ್ತಿರುವ ವಿವಿಧ ಘಟನೆಗಳು, ಅವುಗಳಿಗೆಲ್ಲ ನಾವು ಸುಮ್ಮನೆ ಗುಂಪಿನಲ್ಲಿ ಅರಚುತ್ತಿದ್ದೇವೆ ಎನ್ನುವ ಬೇಸರ…ಆಕ್ರೋಶ ತಮ್ಮ ಕವನದಲ್ಲಿ ಎದ್ದು ಕಾಣುತ್ತಿದೆ ಸರ್
ಸುಧಾ ಪಾಟೀಲ
ಬೆಳಗಾವಿ
ಒಂದು ಒಳ್ಳೆಯ ಸಂದೇಶ ಕೊಟ್ಟಿರುವಿರಿ.
ಈ ಕವಿತೆ ಓದಿ ನಾವು ಯಾವ ಕಡೆಗೆ ಹೋಗುತ್ತಿದ್ದೇವೆ ಎನ್ನುವುದೇ ಅರ್ಥವಾಗದೆ ಮನಸ್ಸು ಗಲಿಬಿಲಿಗೊಳ್ಳುತ್ತದೆ. ನಾವು ಹಿಡಿದ ದಾರಿ ಸರಿಯಿದ್ದರೂ ನಮಗೇಕೆ ಸೋಲಾಗುತ್ತಿದೆ ? ತಪ್ಪು ದಾರಿ ಹಿಡಿದವರೇ ನಮಗಿಂತಲೂ ಹೆಚ್ಚು ಏಕೆ ಸಂಘಟಿತರಾಗುತ್ತಿದ್ದಾರೆ ? ನಮ್ಮ ಸಂಘಟನೆ ಏಕೆ ಕುಸಿಯುತ್ತಿದೆ ? ಸತ್ಯಕ್ಕಿಂತಲೂ ಸುಳ್ಳೇ ಏಕೆ ವಿಜೃಂಭಿಸುತ್ತಿದೆ ಎಂಬ ಪ್ರಶ್ನೆಗಳು ಕಾಡುತ್ತಿವೆ. ಒಮ್ಮೊಮ್ಮೆ ನಮ್ಮದು ಅರಣ್ಯ ರೋದನ ಅನ್ನಿಸಿ ಅಧೀರತೆ ಮೂಡುತ್ತದೆ. ಅದಕ್ಕೇ ಈ ಮೊದಲು ಹೇಳಿದಂತೆ ಜೀವ ತಲ್ಲಣಿಸುತ್ತದೆ. ಯಾಕೋ ಯಾವುದೂ ಸರಿಯಿಲ್ಲ ಎಂದು ತಲೆ ಕೊಡವಿಕೊಳ್ಳಬೇಕೆನ್ನಿಸುತ್ತದೆ.

ಹನುಮಾಕ್ಷಿ ಗೋಗಿ
ಹುಬ್ಬಳ್ಳಿ ಧಾರವಾಡ
ಸರ್ ಖರೇನ ಉತ್ತಮ ಕವನ
ತಮ್ಮ ಆಂತರಿಕ ಕವಿ ಭಾವ ಉತ್ತಮವಾಗಿ ಮೂಡಿಬಂದಿದೆ
ಸತ್ಯದ ಸುಂದರ ಅನಾವರಣ .ನಿಮ್ಮ ಕವನ ಸೊಗಸಾಗಿದೆ ಸರ್.
ನಿಜಕ್ಕೂ ಅರ್ಥಪೂರ್ಣ ಕಾವ್ಯ ಸರ್
ಜಯಶ್ರೀ ಬೆಂಡಿಗೇರಿ
ಅರ್ಥಪೂರ್ಣ ಕಾವ್ಯ ಸರ್
ಸುಮಾ ಉಗರಗೋಳ
ಸತ್ಯ ಸಾರುವ ಕವಿತೆ
ಸುಂದರ ಕವಿತೆ ಸರ್