ಕಾವ್ಯ ಸಂಗಾತಿ
ಕಲಾವತಿಮಧುಸೂದನ
“ಆಶಯ..!”

ಯಾವುದೇ ಉಪಟಳಕು ಮೌನದಲೆ ನಮಿಸಿಬಿಡು ಮಾವಿನಂತೆ ಸವಿಸುತ
ಬೀಜವಾಗಿ ಪೀಳಿಗೆಗೆ ಸಿದ್ಧವಾಗಿ ಕಾವಿನಲೆ ಮೊಳೆಯುತಲಿ
ಏಳಿಗೆಗೆ ಶ್ರಮಿಸುವ
ನಾವೆಯಲಿ ನಾಳೆಗಳ ಹುಟ್ಟಾಗಿಸು
ಯಾವ ಶಕ್ತಿ ಹಣತೆಯು ಭಕ್ತಿಯನ್ನು ಬಿತ್ತಿತೊ
ಯಾವ ಬೀಜದೆಣ್ಣೆಯು
ಬತ್ತಿ ತೋಯ್ಸಿತೊ
ಮಾವ ಭಕ್ತಿ ಹಣ್ಣಲಿ
ಬೀಜವಾಗಿ ಉಳಿದುದೊ
ದೇವ ಶಕ್ತಿ ಮೂಲವು ಮಧುಕರೇಶ
ಕಾಮನೆಗಳ ನೀಗುವ
ಧೇನುವೇ ನೀನೆಂದು
ಕಾಮಿಯಾಗೆ ನಿತ್ಯವು ಬೇಡದಂತಿರಿಸು
ನೇಮಿಯಾಗಿ ಮಿತಿಯೊಳೆ ಇರುತಿರಲು ದಯೆತೋರಿ
ನಾಮಕೇ ಹಾರದಿಹ
ಪರಾರ್ಥಗಳ ಹಣತೆಗೆ
ನೇಮಿ ಕಣವಾಗಿರಲಿ ಮಧುಕರೇಶ

ಕಲಾವತಿಮಧುಸೂದನ,ಹಾಸನ



