ಕಾವ್ಯಸಂಗಾತಿ
ಮನ್ಸೂರ್ ಮುಲ್ಕಿ
ಅಮ್ಮನ ಉಸಿರು

ಮೂಡುವ ಚಂದಿರ ಕಾಣುತ ಪುಟ್ಟನು
ಲಗು ಬಗೆ ನಗುವನು ಬೀರುವನು
ಮೋಡದ ಮರೆಯಲಿ ನಲಿಯುವ ಚಂದಿರ
ನೋಡುತ ಪುಟ್ಟನು ಕುಣಿಯುವನು
ಕಂದನ ನಗುವನು ಕಾಣುವ ಅಮ್ಮ
ಪಟ ಪಟ ಚಪ್ಪಾಳೆ ತಟ್ಟುವಳು
ಕಂದನ ಖುಷಿಯನು ಸವಿಯುವ ಅಮ್ಮ
ಮುದ್ದಾಡಿ ಮುತ್ತನು ನೀಡುವಳು
ಬೆಳದಿಂಗಳ ಚಂದಿರ ಕಾಣಲು ಸುಂದರ
ಪಳ ಪಳ ಹೊಳೆಯುವನು
ಕುಣಿಯುವ ಕಂದನ ಚಂದಿರ ಕಾಣುತ
ಬಾನಲೆ ನಗುವನು ಬಿರುವನು
ಅಮ್ಮನ ಕರುಣೆಗೆ ಸರಿಸಮವಿಲ್ಲ
ಈ ಜಗದೊಳಗಿನ ಸೃಷ್ಟಿಯಲಿ
ಉಸಿರಿನ ತನಕವು ನೆಮ್ಮದಿ ಇರಲು
ಬದುಕು ಅಮ್ಮನ ಜೊತೆಯಲ್ಲಿ
ಮನ್ಸೂರ್ ಮುಲ್ಕಿ
——————–

ಮನ್ಸೂರ್ ಮುಲ್ಕಿ



