ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾರತ ದೇಶದ ಮೊದಲ ಮುಸ್ಲಿಂ ಮಹಿಳಾ ಮುಖ್ಯಮಂತ್ರಿ ಸೈಯದಾ ಅನ್ವರ್ ತೈಮೂರ್. ಇನ್ನೂವರೆಗೆ ಯಾರು ಕೂಡ ಮುಸ್ಲಿಂ ಮುಖ್ಯಮಂತ್ರಿಯಾಗಿರುವುದಿಲ್ಲ. ಹಾಗೆಯೇ ಆಸ್ಸಾಂ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗುವುದರ ಜೊತೆಗೆ ಮೊದಲ ಮಹಿಳಾ ಮುಸ್ಲಿಂ ಮುಖ್ಯಮಂತ್ರಿ ಕೂಡ ಆಗಿದ್ದಾರೆ. ಇದು ನಮ್ಮ ದೇಶದ ಇತಿಹಾಸದ ಪುಟದಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಿರಿಸುವ ಐತಿಹಾಸಿಕ ಘಟನೆಯಾಗಿದೆ.

ಸೈಯದಾ ತೈಮೂರ್ ಅವರು ೨೪ ನೆವ್ಹೆಂಬರ್ ೧೯೩೬ ರಂದು ಆಸ್ಸಾಂನಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಆಸ್ಸಾಂನಲ್ಲಿ ಮುಗಿಸಿದರು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತç ವಿಷಯದಲ್ಲಿ ಪದವಿ ಪಡೆದರು. ತಮ್ಮ ಶಿಕ್ಷಣವನ್ನು ಮುಗಿಸಿದ ನಂತರ ೧೯೫೬ರಲ್ಲಿ ಜೋರ್ಹತನ ದೇವಿ ಚರಣ ಬುರುವಾ ಬಾಲಕಿಯರ ಕಾಲೇಜೀನಲ್ಲಿ ಅರ್ಥಶಾಸ್ತçದ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿಕೊಂಡರು. ನಂತರದ ದಿನಗಳಲ್ಲಿ ಉಪನ್ಯಾಸ ವೃತ್ತಿಯನ್ನು ತೊರೆದು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು.

 ಸೈಯದಾ ತೈಮೂರ್ ರಾಜಕೀಯ ಎಲ್ಲ ತೊಡಕುಗಳನ್ನು ಮೀರಿ ಬೆಳೆಯುತ್ತಾರೆ. ಇವರು ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಪಕ್ಷ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪಕ್ಷಗಳ ಮೂಲಕ ತಮ್ಮ ರಾಜಕೀಯ ಜೀವನದ ಉನ್ನತ ಸ್ಥಾನಗಳನ್ನು ಅಲಂಕರಿಸಿದರು.  ಐದನೇ ವಿಧಾನ ಸಭೆಗೆ ಆಯ್ಕೆಯಾಗಿ ೧೯೭೫ ರಿಂದ ೧೯೭೮ರ ವರೆಗೆ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದರು. ನಂತರ ೬ ಡಿಸೆಂಬರ್ ೧೯೮೦ ರಿಂದ ೩೦ ಜೂನ ೧೯೮೧ರ ವರೆಗೆ ಆಸ್ಸಾಂನ ೮ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವಿಕರಿಸಿ ಕೆಲಸ ಮಾಡಿದರು. ಇವರ ಅವಧಿಯಲ್ಲಿಯೇ ರಾಷ್ಟçಪತಿ ಆಡಳಿತಗೆ ಒಳಪಡಿಸಿದಾಗ ಇವರ ಅಧಿಕಾರ ಅವಧಿ ಮುಗಿಯಿತು.  

೧೯೮೩ರಲ್ಲಿ ನಡೆದ ಏಳನೇ ಆಸ್ಸಾಂ ವಿಧಾನ ಸಭೆಗೆ ಆಯ್ಕೆಯಾಗಿ ಲೋಕೊಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸಿದರು. ೧೯೮೮ ರಿಂದ ೯೦ರಲ್ಲಿ ರಾಜ್ಯ ಸಭೆಗೆ ನಾಮನಿರ್ದೇಶನಗೊಂಡರು. ನಂತರ ೧೯೯೧ ರಿಂದ ೧೯೯೬ ವರೆಗೆ ಕೃಷಿ, ಹಜ್ ಮತ್ತು ವಕ್ಫ ಆಸ್ತಿ ಸಚಿವರಾಗಿ ಕಾರ್ಯನಿರ್ವಹಿಸಿದರು. ೨೦೦೪ ರಿಂದ ೨೦೧೦ರವರೆಗೆ ರಾಜ್ಯ ಸಭಾಗೆ ಆಂಯ್ಕೆಯಾಗಿದ್ದಾಗ  ಪೇರ‍್ಸ್ ಲೆಡ್ ಆನ್ ದ ಟೆಬಲ್ ಕಮಿಟಿಯ ಅಧ್ಯಕ್ಷರಾಗಿದ್ದರು. ನಗರ ಅಭಿವೃದ್ಧಿ ಕಮಿಟಿಯ ಸದಸ್ಯರಾಗಿದ್ದರು. ಮಹಿಳಾ ಸಶಕ್ತಿಕರಣ ಸಮಿತಿಯ ಸದಸ್ಯರಾಗಿದ್ದರು. ಹಾಗೇನೆ ಜನರಲ್ ಪರಪಸ್ ಕಮಿಟಿಯ ಸದಸ್ಯರಾಗಿದ್ದರು. ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಮೂಹ ಸಮಿತಿಯ ಸದಸ್ಯರಾಗಿದ್ದರು. ಇಂಡಿಯಾ-ಬಾಂಗ್ಲಾದೇಶ ಪಾರ್‌ಲಿಮೆಂಟರಿ ಪ್ರಂಡ್ಸ್ಶಿಫ್ ಗ್ರೂಪ್‌ನ ಉಪಾದ್ಯಕ್ಷರಾಗಿದ್ದರು. ಹಾಗೇನೆ ನ್ಯಾಷನಲ್ ಅಡ್ವೆಸರಿ ಕಮಿಟಿ ಆಫ್ ಮೈನಾರಟಿ ಡಿಪಾರ್ಟಮೆಂಟ್‌ನ ಸದಸ್ಯರಾಗಿದ್ದರು. ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮ ಸೇವೆಗಳನ್ನು ಸಲ್ಲಿಸಿದ್ದಾರೆ.  ಸೈಯದಾ ತೈಮೂರ್ ಅವರು ೨೮ ಸೆಪ್ಟೆಂಬರ್ ೨೦೨೦ ರಂದು ತಮ್ಮ ಮಗನ ಮನೆಯಲ್ಲಿ ಆಸ್ಟೇಲಿಯಾದಲ್ಲಿ ಹೃದಯಾಘಾತವಾಗಿ ಮರಣವನ್ನಪ್ಪಿದರು.


About The Author

Leave a Reply

You cannot copy content of this page

Scroll to Top