ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೀಪವನು ಹಚ್ಚುತಲಿ ಸಾಗುವರು ಮಹಿಳೆಯರು ಶಾಪವನು ತೊರೆವಂತೆ ಬದುಕಿನಲ್ಲಿ
ದೂಪವನು ಹಾಕುತಲಿ ದೇವರಿಗೆ ನಮಿಸುತಲಿ
ಕೋಪವನು ದೂರವಿಡು ಲಕ್ಷ್ಮಿದೇವಿ……

ದೀಪಾವಳಿ ಹಬ್ಬದ ಪ್ರಯುಕ್ತ ಮನೆಗಳಲ್ಲಿ ನಡೆಯುವ ದೇವರ ಪೂಜೆ ವಿಶೇಷವಾಗಿದ್ದು.  ದೀಪವನ್ನು ಹಚ್ಚುತ್ತಾ ಅಂಗಣಗಳಲ್ಲಿ ದೀಪಗಳನ್ನು ಇಟ್ಟು ಪೂಜಿಸುವುದು, ಸಕಲ ಸಂಪತ್ತನ್ನು ಬಯಸುವುದು ಸರ್ವೆ ಸಾಮಾನ್ಯವಾದದ್ದು. ಯಾವುದೇ ಶಾಪವಿರಲಿ ಅದನ್ನ ತೊರೆಯುವಂತೆ ಬೇಡಿಕೊಳ್ಳುತ್ತಾ ಬದುಕಲ್ಲಿ ಸಂತೋಷ ಕಾಣಲು ದೇವರಿಗೆ ಧೂಪವನ್ನು ಹಾಕುತ್ತಾ ನಮಿಸುತ್ತಾರೆ. ಕೋಪವನ್ನು ದೂರ ಬಿಡುವಂತೆ ಕೇಳಿಕೊಳ್ಳುತ್ತಾ ಒಳ್ಳೆಯ ಬೆಳಕು ಬದುಕಿನಲ್ಲಿ ಮೂಡುವಂತೆ ಮಾಡು ಎಂದು ಪ್ರಾರ್ಥಿಸುತ್ತಾರೆ. ದೇವರಿಗೆ ಅಭಿಷೇಕ ಮಾಡುವ ಮೂಲಕ ಐಶ್ವರ್ಯ ಮತ್ತು ಸಮೃದ್ಧಿಗಾಗಿ ಆಶೀರ್ವಾದವನ್ನು ಪಡೆಯಲು ಪೂಜಿಸುತ್ತಾರೆ.
ಕುಟುಂಬದಲ್ಲಿ ಯಾವುದೇ ಶುಭ ಆರಂಭ,ಐಶ್ವರ್ಯ, ಆರೋಗ್ಯ, ಸಮೃದ್ಧಿ, ಯೋಗಕ್ಷೇಮ ಎಲ್ಲವನ್ನು ಕರುಣಿಸುವಂತೆ ಕೇಳಿಕೊಳ್ಳುತ  ಈ ದೀಪಾವಳಿಯ ಹಬ್ಬವನ್ನು  ಸಂಭ್ರಮದಲ್ಲಿ ಆಚರಿಸುವುದುಂಟು . ಕುಟುಂಬದವರ ಪರವಾಗಿ ಹಿರಿಯ ಜೀವಗಳು  ವಿಶೇಷವಾದ ಪೂಜೆ ಪ್ರಾರ್ಥನೆ ಅಭಿಷೇಕವನ್ನು ಮಾಡಿ ಒಳ್ಳೆಯದಾಗಲು ದೇವರಲ್ಲಿ ಪ್ರಾರ್ಥನೆ ಮಾಡಿ ಕೇಳಿಕೊಳ್ಳುವರು.
ನೀವು ಏನು ಬೇಕು ಅದನ್ನು ಪೂಜೆಯ ಮುಕಾಂತರ ಕುಟುಂಬ ಸದಸ್ಯರು  ಸೇರಿ ಹಬ್ಬವನ್ನು ದೀಪ ಹಚ್ಚಿ ಆಚರಿಸುತ್ತಾರೆ.
ಬೆಳಕು ಮೂಡಿಸುವ ಹಬ್ಬ ದೀಪಾವಳಿ ಹಬ್ಬ ಎಂಬ ಅರಿವು ಎಲ್ಲರಿಗೂ ಇದೆ. ಭಾರತದ ಎಲ್ಲೆಡೆಯೂ ಸಂಭ್ರಮದಿಂದ ಆಚರಿಸುವಂತಹ ಹಬ್ಬವಾಗಿದ್ದು ಇದು ಹಿಂದೂಗಳ ಪವಿತ್ರವಾದ ಹಬ್ಬವಾಗಿದೆ. ದೀಪಗಳನ್ನು ಹಚ್ಚಿ ಹಬ್ಬವನ್ನು ಆಚರಿಸುವುದು ನಮ್ಮ ಸ್ತ್ರೀಯರ ವಾಡಿಕೆ. ಮನೆಯಲ್ಲಿ ಆರೋಗ್ಯ ಐಶ್ವರ್ಯ ತುಂಬಿ ತುಳುಕಲು ಈ ಹಬ್ಬವನ್ನು ಆಚರಿಸುತ್ತಾರೆ. ಭಾರತದ ಉತ್ತರ ಮತ್ತು ದಕ್ಷಿಣ  ಭಾಗದಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುವುದುಂಟು. ಆಚರಿಸುವ  ವಿಧಿ- ವಿಧಾನಗಳು ಸಹ ಸರ್ವೇ ಸಾಮಾನ್ಯವಾಗಿ ಒಂದೇ ತರನಾಗಿರುತ್ತದೆ.  ಸಾಮಾನ್ಯವಾಗಿ 14 ವರ್ಷ ವನವಾಸದ ನಂತರದಲ್ಲಿ ಶ್ರೀ ರಾಮನು ಗೃಹಪ್ರವೇಶ ಮಾಡಿದ ದಿನವನ್ನು ಹಾಗೂ ರಾವಣನ ಮೇಲೆ ವಿಜಯವನ್ನು ಸಾಧಿಸಿದ ದಿನವನ್ನು ಈ ದೀಪಾವಳಿಯ ಹಬ್ಬದ ಸಂಭ್ರಮದಲ್ಲಿ ಆಚರಿಸುವ ಪ್ರತೀತಿ ಇದೆ. ದಕ್ಷಿಣ ಭಾಗದಲ್ಲಿ ಶ್ರೀ ಕೃಷ್ಣನು ಅಸುರ ನರಕಾಸುರನನ್ನು ವದೆ ಮಾಡಿದ ನೆನಪಿಗೆ ಆಚರಿಸುವುದು ಎಲ್ಲರಿಗೂ ತಿಳಿದಿದೆ. ಅಷ್ಟೇ ಅಲ್ಲದೆ  ಕೆಲವೇ  ಬಾಲಿ ವಿರುದ್ಧದ ಅದ್ಭುತ ವಿಜಯಕ್ಕಾಗಿ  ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ. ದಂತೇರಸ್ ನಿಂದ ಆರಂಭವಾಗಿ ನಂತರ ನರಕ ಚತುರ್ದಶಿ ಅಶ್ವಿಜ ಕೃಷ್ಣ ಅಮಾವಾಸ್ಯೆ. ಕೇದಾರ ಗೌರಿ ವ್ರತ ಮತ್ತು ಬಲಿ ಪ್ರತಿಪದೆ ಯಲ್ಲಿ ಹಬ್ಬವನ್ನು ಸಂಪನ್ನಗೊಳಿಸಲು ಲಕ್ಷ್ಮಿ ಪೂಜೆಗಾಗಿ ವಿವಿಧ ಪ್ರೀತಿಯ ಯೋಚನೆಗಳನ್ನು  ಮಾಡಿ ಸಂಪನ್ನಗೊಳಿಸುವುದು. ಈ ದಿನದಲ್ಲಿ ಕೆಟ್ಟ ಪ್ರಭಾವಗನ್ನು ಹೋಗಲಾಡಿಸಿ ಒಳ್ಳೆಯ ಗೆಲುವನ್ನು ಪಡೆಯುವ ಸೂಚನೆಯನ್ನು ಹೊಂದಿರುವುದರಿಂದ  ಗೆಲುವಿಗಾಗಿ ಹಪಹಪಿಸುತ್ತಾ ಪೂಜೆಗಳನ್ನು ಹಿಂದೂಗಳು ಮಾಡುವುದು ವಿಶೇಷ.  ಹಿಂದೂ ಧರ್ಮದಲ್ಲಿ ಈ ದಿನದ ಮಹತ್ವ ಅಪಾರವಾದದ್ದು  ಎಂದು ತಿಳಿದು ರಾಮನ ವಿಜಯವನ್ನು ನೆನೆದು ಸಂಭ್ರಮದಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಸರ್ವೇ ಸಾಮಾನ್ಯವಾಗಿ ದೀಪಾವಳಿ ಎಂಬ ಪದವು ಹಿಂದಿ ಪದವಾಗಿರುವುದನ್ನು  ತಿಳಿದ ವಿಚಾರ ಅದರ ಅರ್ಥ ವನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡಿದ್ದಾರೆ. ಬೆಳಕು ಮೂಡಿಸುವಂತಹ ದೀಪ ಹಚ್ಚುವುದರ ಮುಖಾಂತರ ಈ ಹಬ್ಬವನ್ನು ಸಂತೋಷ ದಿಂದ ಆಚರಿಸುವುದುಂಟು. ರಾಮನು ರಾವಣನನ್ನು  ಸದೆಬಡೆದ ದಿನವಿದು. ಕೆಟ್ಟ  ಹುಳುವಾದ ರಾವಣವನ್ನು ಸಂಹರಿಸಿ ಮನೆಗೆ ಗೃಹಪ್ರವೇಶವನ್ನು ಮಾಡುವ ದಿನವನ್ನು ವಿಶೇಷವಾಗಿ ದೀಪಾವಳಿ ಹಬ್ಬವೆಂದು ಆಚರಿಸುವುದುಂಟು. ರಾಮನು ವಿಜಯವನ್ನು ಸಾಧಿಸಿ ಅಯೋಧ್ಯೆಗೆ ಬರುವಾಗ ಜನರು ಸ್ವಾಗತವನ್ನು ಮಾಡಿ ವಿಜಯದ ಪತಾಕೆ ಯೊಂದಿಗೆ ದೀಪಗಳನ್ನು ಬೆಳಗಿಸಿ ಕೆಟ್ಟದರ ಮೇಲೆ ಒಳಿತಿನ ವಿಜಯವನ್ನು ಘೋಷಿಸಿದ ಸಂಭ್ರಮದ ದಿನವದು ದೀಪಾವಳಿಯ ಮುನ್ನಾ ದಿನದಂದು ಜನರು ಲಕ್ಷ್ಮಿ ದೇವತೆ ಹಾಗೂ ಗಣೇಶನನ್ನು ಸಂಭ್ರಮದಲ್ಲಿ ಪೂಜಿಸುತ್ತಾರೆ. ಬರುವ ಸಂಕಷ್ಟಗಳು ಅಡೆತಡೆಗಳು ನಾಶವಾಗಲೆಂದು ಈ ಪೂಜೆಯನ್ನು ಆಚರಿಸುವುದು. ಹಬ್ಬದಂದು ಬುದ್ಧಿವಂತಿಕೆ ಜ್ಞಾನಾಭಿವೃದ್ಧಿಗಾಗಿ ಪೂಜಿಸುತ್ತಾ ಸಂಪತ್ತು ಲಕ್ಷ್ಮಿಯನ್ನು ನೀಡೆಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದುಂಟು ದೀಪಾವಳಿಯ ಪೂಜೆ ಎಂದು ಎಲ್ಲಾ ದೇವತೆಗಳ ಆಶೀರ್ವಾದ ಸಿಕ್ಕುವುದೆಂಬ ನಂಬಿಕೆ ಇದೆ. ಒಟ್ಟಾರೆ ಹಲವಾರು ಜನರು  ಈ ದೀಪಾವಳಿ ಹಬ್ಬವನ್ನು ಪವಿತ್ರವಾದ ಹಿಂದೂಗಳ ಹಬ್ಬವೆಂದು  ಮನೆ ಮತ್ತು ಅಂಗಡಿಗಳನ್ನು ಶುಚಿಗೊಳಿಸಿ ಸಂಭ್ರಮದಲ್ಲಿ ಆಚರಿಸುತ್ತಾರೆ. ಕತ್ತಲೆಯನ್ನು ತೊಲಗಿಸಿ ಬೆಳಕಿನ ವಿಜಯವನ್ನು, ಗೆಲುವನ್ನು ತೋರಿಸುವ ಹಬ್ಬವಿದು. ಮನ ಮನೆಗಳಲ್ಲಿ ಬೆಳಕು ಮೂಡಿಸುವ ಹಬ್ಬವಿದು. ಎಲ್ಲರೊಂದಿಗೆ ಒಟ್ಟುಗೂಡಿ  ಸಂಭ್ರಮದಲ್ಲಿ ಆಚರಿಸುವ ಹಬ್ಬವಿದು.
 ಹಬ್ಬದ  ವಿಚಾರವನ್ನು ಕೆಲವು ಪದಗಳ ರೂಪ ಹೇಳಬೇಕೆಂದರೆ
ಜ್ಞಾನವ ಮೂಡಿಸುತ
ಒಳ್ಳೆಯತನವ ನೀಡುತ
ವಿಜಯ ಸಾಧಿಸಿದ ಹಬ್ಬವಿದು.

ಸಂಪತ್ತು ಸಮೃದ್ಧಿಗಾಗಿ
ಹಪಹಪಿಸುತ ಪೂಜಿಸುವ ಹಬ್ಬವಿದು”
 ಸಂಸ್ಕೃತಿಯ ಉಳಿಸುತ್ತ ಬದುಕಿನ ಮುಂದಿನ ಬದುಕಿನ ಮುಂದಿನ ದಿನಗಳು ಸುಗಮವಾಗಿ ಸಾಗಲೆಂದು ಬೇಡುತ ಸಾಗುವ ಹಬ್ಬ
ಕುಟುಂಬದಲ್ಲಿ ಎಲ್ಲರೂ ಜೊತೆಗೂಡಿ ಉಡುಗೊರೆಯನ್ನು ನೀಡುತ ಸಂಭ್ರಮಿಸುವ ಹಬ್ಬವಿದು. ಹಳೆಯ ಕೊಳೆಯ ತೊಳೆದು ಹೊಸತನದಲ್ಲಿ ಚಿಗುರ ಮೂಡಿಸಲು ನಡೆಯುವ ದಾರಿಯ ಹಬ್ಬವಿದು.
 ಕೆಲವು ಪದಗಳಲ್ಲಿ ಹೇಳಬೇಕಂದರೆ
“ಕೆಟ್ಟಗಳಿಗೆಯನು ಕಳೆದು
ಒಳ್ಳೆಯ ಗಳಿಗೆಯ  
ಆಹ್ವಾನವೇ ದೀಪಾವಳಿ…..

ಕತ್ತಲೆಯನು ಕಳೆಯೆಂದು
ಬೆಳಕನು ನೀಡೆನುತ
ಆಚರಿಸುವ ಆಸೆಯ
ಹಬ್ಬವಿದು ದೀಪಾವಳಿ……

ಈ ಹಬ್ಬದ ಬಗ್ಗೆ ಪೌರಾಣಿಕ ಕಥೆಗಳು ಬಹಳಷ್ಟುವೇ ವಿಶೇಷವಾಗಿ ನಾವು ಮೇಲೆ ತಿಳಿದಂತೆ ಶ್ರೀ ರಾಮನು ರಾವಣನ ಸಂಹರಿಸಿ ಅಯೋದ್ಯೆಯಿಂದ ಮರಳಿದ ದಿನವೆಂದು ಆಚರಿಸುತ್ತ ದೀಪವನ್ನು ಬೆಳಗಿಸುತ್ತ ಆತನನ್ನು ಸ್ವಾಗತಿಸುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದೇ ದಿನವನ್ನು ದೀಪಾವಳಿಯ ಹಬ್ಬ ಎಂದು ಆಚರಿಸುತ್ತೇವೆ ಎಂಬುದು ನಮ್ಮ ಹಿಂದೂ ಸಂಸ್ಕಾರದಲ್ಲಿ ಅಚ್ಚೆಯಾಗಿದೆ.
 ಸೂರ್ಯನ (ಬಾಲಿ) ಸಂಹಾರವನ್ನು ಶ್ರೀ ಕೃಷ್ಣನು ಮಾಡಿದ ದಿನವಾಗಿ ಈ ಹಬ್ಬವನ್ನು ಆಚರಿಸುತ್ತಾರೆ ದಕ್ಷಿಣ ಭಾಗದಲ್ಲಿ ಅವರ ನಂಬಿಕೆಯ ಫಲವಾಗಿ ದೀಪವನ್ನು ಹಚ್ಚುತ್ತಾ ಸಂಭ್ರಮದಲ್ಲಿ ಆಚರಿಸುತ್ತಾರೆ.  ವಾಮನ ದೈತ್ಯ ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ದಿನದ ನೆನಪಿಗಾಗಿ ಬಲಿಪಾಡ್ಯಮಿಯನ್ನ ಆಚರಿಸುವುದುಂಟು.
 ಈ ಹಬ್ಬದ ಪ್ರಮುಖ ಆಚರಣೆಗಳಲ್ಲಿ ನಾವು ಕಾಣುವುದೇನಂದರೆ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರು ಸಹ ದೀಪವನ್ನು ಹಚ್ಚುತ್ತ ಸಂಭ್ರಮದಲ್ಲಿ ಮನೆಯನ್ನು ಸ್ವಚ್ಛಗೊಳಿಸಿ ಪೂಜಿಸುತ ಸಂಭ್ರಮಿಸುದುಂಟು
 ಪುರುಷರು ಸ್ತ್ರೀಯರು ಸೇರಿ ಎಲ್ಲರೂ ಮನೆಯ ಕುಟುಂಬ ಸದಸ್ಯರೆಲ್ಲ ಲಕ್ಷ್ಮಿ ಪೂಜೆಯನ್ನು ಮಾಡುವುದುಂಟು
 ಪ್ರತಿಯೊಬ್ಬರಿಗೂ ಸಿಹಿಯನ್ನು ನೀಡುತ ವಿಧವಿಧವಾದ ಅಡುಗೆ ಮಾಡಿ  ಸವಿಯುವುದುಂಟು
 ಪಟಾಕಿಗಳನ್ನು ಸಿಡಿಸುತ ಜೀವನದಲ್ಲಿ ಸಂತಸವ ನೀಡೆಂದು ಬೇಡುವುದುಂಟು ಪ್ರಪಂಚದಾದ್ಯಂತ ಈ ಹಬ್ಬವನ್ನು ಪ್ರೀತಿ, ವಿಶ್ವಾಸ, ಉತ್ಸಾಹ  ಮತ್ತು ಸಂಭ್ರಮದಲ್ಲಿ ಆಚರಿಸುತ ಒಬ್ಬರಿಗೊಬ್ಬರು ಒಳ್ಳೆಯ ಭಾವವನ್ನು ತೋರುತಲಿ ಕೆಟ್ಟ ಭಾವನೆಗಳನ್ನು ಪಟಾಕಿ ಸಿಡಿಸುವ ರೀತಿಯಲ್ಲಿ ಸುಟ್ಟಾಕುವುದುಂಟು. ದೀಪಾವಳಿ ಬರುವ ಮುಂಚೆಯೇ ನಮ್ಮ ಹೆಣ್ಣು ಮಕ್ಕಳ ಕೆಲಸಗಳು ಮನೆಯಲ್ಲಿ ಪ್ರಾರಂಭವಾಗುವುದುಂಟು ದೀಪಾವಳಿ ಹಬ್ಬದ ಬರುವ ಮುಂಚಿನಿಂದಲೇ ಮನೆ, ಅಂಗಡಿ, ಕಟ್ಟಡಗಳು, ಪ್ರತಿಯೊಂದು ಜಾಗಗಳನ್ನು ಸ್ವಚ್ಛಗೊಳಿಸುತ ಹೊಸ ಉಡುಪುಗಳನ್ನು ಸಂಭ್ರಮದಲ್ಲಿ ಖರೀದಿಸುತ ಹಬ್ಬದ ದಿನಗಳಲ್ಲಿ ಧರಿಸುತ್ತ  ಹಬ್ಬಕ್ಕೆ ಸಜ್ಜಾಗುವುದುಂಟು ದೀಪಾವಳಿ ಹಬ್ಬವು ಸಂತೋಷವನ್ನು ತರಲೆಂದು ಆಶಿಸುತ್ತಾ ಆಚರಿಸುವುದುಂಟು.
 ಈ ಹಬ್ಬದ ಪ್ರಮುಖ ಪಾತ್ರಧಾರಿಗಳು ಎಂದರೆ ಮಕ್ಕಳು  ಎಲ್ಲರೂ ಸಹ ಕಡಿಮೆ ಪಟಾಕಿಗಳನ್ನು ಬಳಸುತ್ತ, ಗಮನವನ್ನು ನೀಡುತ್ತಾ ಹಬ್ಬವನ್ನು  ಸಂತೋಷದಲ್ಲಿ ಆಚರಿಸುತ ಸಂಭ್ರಮದಲ್ಲಿ ಹಬ್ಬವನ್ನು ಆಚರಿಸಲೆಂದು ಆಶಿಸುತ್ತೇನೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು  ಜೈ ಹಿಂದ್ ಜೈ ಭಾರತ ಮಾತೆ.


About The Author

Leave a Reply

You cannot copy content of this page

Scroll to Top