ದೀಪಾವಳಿ ವಿಶೇಷ
ಶಾಂತಲಾ ಮಧು
ಬದುಕು ಜಟಕಾ ಬಂಡಿ

ದೀಪಾವಳಿಯ ಸಂಭ್ರಮ ನಿನ್ನೆಯಿಂದ ಎಲ್ಲೆಡೆಯೂ ತುಂಬಾ ಸಂಭ್ರಮದಿಂದ ನಡೆಯುತ್ತಿದೆ .. ಸಂತೋಷದ ವಿಚಾರ
ಮುಂಜಾನೆ ಸುಮಾರು ಏಳು ಗಂಟೆ ಆಗಿರಬಹುದು ಮೆಡಿಟೇಶನ್ ಮುಗಿಸಿ ಮನೆ ಹತ್ತಿರದ ಒಂದು ಜಿಮ್ ಗೆ ಹೋಗಿದ್ದು ಆಯ್ತು ಆ ಜಿಮ್ ನ ಸುತ್ತಮುತ್ತ ತುಂಬಾ ಜ ತಮ್ಮ ಬದುಕನು ನಡೆಸಿಕೊಂಡು ಹೋಗುತ್ತಿದ್ದಾರೆ ತಮ್ಮದೇ ಆದ ರೀತಿಯಲ್ಲಿ ಅವರವರ ನಿತ್ಯ ಬದುಕು ಅವರಿನಗೆ ಅದೇ ಸತ್ಯದ ಬದುಕು,,” ,,”ಆನೆ ನಡೆದಿದ್ದೇ ಹಾದಿ” ಎನ್ನುವಂತೆ ನಮ್ಮೆಲ್ಲರ ಬದುಕು ಅದೇ ತಾನೇ
ಕಾರ್ ಪಾರ್ಕ್ ಮಾಡಿ ಪಕ್ಕಕ್ಕೆ ತಿರುಗಿದಾಗ ಕಂಡದ್ದು ಒಂದು ನಾಯಿ ಅದರ ಸುತ್ತಮುತ್ತಲು ಕಾಲು ಹಾಕಲು ಆಗದಷ್ಟು ದೀಪಾವಳಿ ಸಂಭ್ರಮದ ಕುರುಹುಗಳು ಮನುಷ್ಯನ ಒಂದು ಕ್ಷಣದ ಖುಷಿಯ ಆಡಂಬರ ಕರಕಲು ಪಟಾಕಿಗಳು
ಪಾಪ ನಾಯಿ ಬಾಲಾ ಮುದುಡಿಕೊಂಡು ಭಯ ಆತಂಕದಿಂದ ಕುಳಿತುಕೊಂಡಿತು, ಅದರ ನೋಟ ಅಯ್ಯೋ ಎನ್ನುವಂತಿತ್ತು ಆದರ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿತ್ತು ಕಣ್ಣು ಕೆಂಪನೆಯ ಕೆಂಡ ದುಂಡೆ ಗಳಾಗಿದ್ದವು ಮುಖದಲ್ಲಿ ನೋವು ಎದ್ದು ಕಾಣುತ್ತಿತ್ತು ಒಂದೆಡೆ ಭಯ ಆತಂಕ ನೋವು ಜಿಗುಪ್ಸೆ ಮುಂದೇನು ಇದಕ್ಕೆ ಪರಿಹಾರವಿಲ್ಲವೇ ಎನ್ನುವ ಪ್ರಶ್ನೆ ಗೊಂದಲ ಆ ನೋಟದಲ್ಲಿ ಕಾಣಿಸಿತು ಬಾಲಾ ಅಲ್ಲಾಡಿಸಿಕೊಂಡು ಖುಷಿಯಾಗಿ ಬರಮಾಡಿಕೊಳ್ಳುವ ಆ ನಾಯಿ ನೋವಿನಲ್ಲಿ ನೆರಳುತ್ತಿತ್ತು ರಾತ್ರಿಯಲ್ಲ ಅತ್ತು ಗೋಗರೆದಿರುವೆ ಕೇಳಿಸದೆ ಎನ್ನುವ ದನಿ ಕಾಣಿಸುತ್ತಿತ್ತುನೋಡಿದರೆ ಕರುಳು ಕಿವುಚುವಂತಿತ್ತು. ಹಾಯ್ ಎಂದೆ ಯಾಕೋ ಹೀಗಿದ್ದೀಯಾ ಅಂತ ಕೇಳೋದ್ಬೇಕಿರಲಿಲ್ಲ ಅದರ ಸುತ್ತಮುತ್ತಲ ವಾತಾವರಣವೇ ಅದನ್ನು ಹೇಳುತ್ತಿತ್ತು ದೊಡ್ಡ ದೊಡ್ಡ ಪಟಾಕಿಯ ಸರಗಳು ಸುಟ್ಟು ಬೂದಿಯಾದ ಅವಶೇಷ ಗಳು.
ಹೇಗೆ ಒಳ್ಳೆಯ ಗಾಳಿಯನ್ನು ಕುಡಿಯುವೆ ಎಂದು ಚಾಲೆಂಜ್ ಮಾಡುವಷ್ಟು ತರಾವರಿ ನಕ್ಷತ್ರದೋಪಾದಿಯಲ್ಲಿ ಮಿಂಚಿ ಭೂಮಿಗೆ ಬಿದ್ದ ಕರುಕಲು ಬೂದಿಗಳು ಅಬ್ಬರ ಮುಗಿದು ಹನ್ನೆರಡು ಗಂಟೆಯಾದರೂ ಬರುತ್ತಿರುವ ಘಾಟು ವಾಸನೆ ಪಾಪ ನಾಯಿ ಕಣ್ಣೀರು ಹಾಕದೆ ಇನ್ನೇನು ಮಾಡೀತು?
ಪ್ರೀತಿಯ ಕರೆ ಅದಕ್ಕೆ ಬೇಕಿರಲಿಲ್ಲ ಪಾಪ ಸಂಸ್ಕಾರ ಎನ್ನುವಂತೆ ತನ್ನೊಳಗಿನ ಕೃತಜ್ಞತೆಯನ್ನು ಅಷ್ಟಿಷ್ಟು ತೋರಿಸಲು ಪ್ರಯತ್ನಿಸಿತ್ತಾದರೂ ಆ ಕೆಂಪು ಕಣ್ಣಿನಲ್ಲಿ ನೀರು ದಾರಕಾರವಾಗಿ ಬೀಳುತ್ತಲೇ ಇತ್ತು
ಆ ಮೌನದ ನೋಟ ಮಾತನಾಡಿತುಮಾನವೀಯತೆಯನ್ನು ಮರೆತ ಬದುಕಿನ ಪರಾಕಾಷ್ಟತೆ ಯನ್ನು ಅಸಹಾಯಕತೆಯಿಂದ ನೋಡುತ್ತಾ ಕಣ್ಣೀರಿಡುತ್ತಾ ಕುಳಿತಿತ್ತು ಆ ನಾಯಿ .ಅದನ್ನು ಕಂಡು ಅದೇ ಅಸಹಾಯಕತೆಯ ಕಣ್ಣೀರು ನನ್ನ ಕಣ್ಣಲು ಬಂತು ಹೇಡಿಯಂತೆ ಹೇ’ ಶಿವ’ ಎನ್ನುತ್ತಾ ಆಕಾಶದ ಕಡೆಗೆ ನೋಡಿದರೆ ಅಲ್ಲು ಕರಿ ಮೋಡ ಮುಸುಕಿತ್ತು ಆ ದೇವರು ನೊಂದುಕೊಂಡಂತೆ ಭಾಸವಾಯಿತು .

ನೊಂದ ನಾಯಿ ಮೂಕ ವೇದನೆಯಿಂದ ಮಾತನಾಡಿತು ಈ ಮನುಷ್ಯ ತನ್ನ ಬಯಕೆ ಗುರಿ ಸಾಧಿಸುವೆ ಎಂಬ ಆಕಾಂಕ್ಷೆ ಕರ್ತವ್ಯ ಎನ್ನುವ ಭಾಷಣ ತಾನೇ ಜಾಣ ಎನ್ನುವ ಅಹಂಕಾರ ಎಲ್ಲದರೊಂದಿಗೆ ತನ್ನ ಬದುಕನ್ನು ತನಗೆ ಬೇಕಾದಂತೆ ಸಾಗಿಸುತ್ತಾ ಬದುಕು ಹೀಗೆ ಬಂದು ಹಾಗೆ ಹೋಗಿಬಿಡುತ್ತದೆ ಅದನ್ನು ಎಂಜಾಯ್ ಮಾಡಬೇಕು ಎನ್ನುವ ಉತ್ಸಾಹದಲ್ಲಿ ಮಾನವೀಯತೆಯನ್ನೇ ಮರೆತುಬಿಡುತ್ತಾನೆ ಸಾಧನೆಯನ್ನು ನಾನು ಸಂತೈಸುತ್ತೇನೆ ಆದರೆ ಆತನ ಸುತ್ತಲಿನ ಬದುಕಿನ ಬಗ್ಗೆ ಒಮ್ಮೆ ಯೋಚಿಸಬೇಕಷ್ಟೇ
ಈ ಹಬ್ಬದ ಸಂಭ್ರಮದಲ್ಲಿ ನನ್ನ ಮುದ್ದಾದ ನಾಲ್ಕು ಮರಿಗಳು ನಿನ್ನೆಯಿಂದ ಕಾಣಿಸುತ್ತಿಲ್ಲ ಹಾಲು ಕೊಡಲು ನನಗೆ ಸಿಕ್ಕಿಲ್ಲ ನನ್ನ ಮೊಲೆಗಳು ತುಂಬಿ ನೋಯುತ್ತಿವೆ ನನ್ನ ಹೃದಯ ಒಡೆದು ಚೂರಾದಂತೆ ಭಾಸವಾಗುತ್ತಿದೆ ನಾನು ನನ್ನ ಪ್ರೀತಿಯ ಮರಿಗಳನ್ನು ಸಂತೈಸಲು ಹೋದಾಗ ನಾನೇ ಗಡಗಡ ನಡುಗುತ್ತಿದೆ ನನ್ನ ಅಸಹಾಯಕತೆಯನ್ನು ನೋಡಿ ಅವುಗಳ ಹೃದಯ ಹೊರಬರವಷ್ಟು ಜೋರಾಗಿ ಬಡಿದುಕೊಳ್ಳುತ್ತಿದ್ದವು,,. ಪಾಪ ತುಂಬಾ ಭಯಪಟ್ಟಿದ್ದು ಕುಯಿ ಕುಯಿ ಎಂದು ಅಳುತ್ತಿದ್ದವು ಅವು ಈಗ ನನ್ನ ಹತ್ತಿರವಿಲ್ಲ ಕಳೆದುಕೊಂಡಿರುವೆ ಇನ್ನೂ ಸಿಕ್ಕಿಲ್ಲ ಯಾವ ಕಾರ್ ಚಕ್ರಕ್ಕೆ ಸಿಕ್ಕಿದವೂ ಪಟಾಕಿ ಶಬ್ದಕ್ಕೆ ಭಯದಿಂದ ಹೃದಯ ಒಡೆದು ಜೀವ ಬಿಟ್ಟಿದೆಯೋ ಏನು ತಿಳಿಯುತ್ತಿಲ್ಲ ಯಾವಾಗ ಈ ಶಬ್ದ ಕಡಿಮೆಯಾಗುತ್ತದೆಯೋ ವಾಪಸ್ ಆಮೇಲೆ ಬರುತ್ತವೆಯೋ ಇಲ್ಲವೋ ಎಂದು ಆತಂಕದಿಂದ ಕಾಯುತ್ತಿರುವೆ
ನಾನು ಹೇಳಿದೆ
ಸ್ವಲ್ಪ ಹೊತ್ತು ಸಮಾಧಾನದಿಂದಿರು ಅವು ಬಂದೇ ಬರುತ್ತವೆ ಹೆದರಬೇಡ ಮಗು ಅಮ್ಮನಲ್ಲಿ ಬರದೆ ಇನ್ನೆಲ್ಲಿ ಹೋದೀತು’ ಕೆಟ್ಟದ್ದನ್ನು ಯೋಚಿಸಬೇಡ ಒಳ್ಳೆಯದನ್ನು ಯೋಚಿಸು ಒಳ್ಳೆಯದೇ ಆಗುತ್ತದೆ ಎಂದು ಸಮಾಧಾನ ಪಡಿಸಿದೆ
ಅದು ಮುಂದುವರಿಸುತ್ತಾ ಹೇಳಿತು ಈ ಪಟಾಕಿಯ ಘಾಟು ಉಸಿರುಕಟ್ಟಿಸುವ ಭಯ ನನಗೆತಡೆದುಕೊಳ್ಳಲಾಗುತ್ತಿಲ್ಲ ಹಸಿವಿನಲ್ಲಿ ಈ ಘಾಟಿನಲ್ಲಿ ಅ ಪ್ಪುಟ್ಟ ಮರಿಗಳು ಬದುಕಿ ಉಳಿಯುತ್ತವೆಯೆ ? ಸತ್ತೇ ಹೋದರು ಆಶ್ಚರ್ಯವಿಲ್ಲ ನಾಲ್ಕು ಮರಿಯನ್ನು ಹೆತ್ತರೆ ಒಂದನ್ನು ಉಳಿಸಿಕೊಳ್ಳಲು ನನಗೆ ಕಷ್ಟವಾಗುತ್ತದೆ ಎಂದು ತನ್ನ ನೋವನ್ನು ತೋಡಿಕೊಂಡಿತು. ಪ್ರತೀ ಈ ಸಂಭ್ರಮದ ಹಬ್ಬದಲ್ಲೂ ನನ್ನ ಪಾಡು ಇದೇ ಆಗುತ್ತದೆ …..
ನಾನು ನೆನಪಿಸಿಕೊಂಡೆ ನನ್ನ ಮನೆಯಲ್ಲಿ ನಾನು ಸಾಕಿದ ಎರಡು ಮುದ್ದಾದ ಬೆಕ್ಕುಗಳು ಮನೆಯ ಒಳಗಡೆಯೇ ಭಯದಿಂದ ಆಹಾರ ತಿನ್ನುತ್ತಿಲ್ಲ ಮೂಲೆ ಸೇರಿ ಕುಳಿತಿವೆ ಜೋರಾಗಿ ಮ್ಯಾವ್ ಎನ್ನಲು ಆಗುತ್ತಿಲ್ಲ ಅವುಗಳಿಗೆ ಸುತ್ತಮುತ್ತಲ ಅಮಾನವೀಯತೆ ನಡೆಯುತ್ತಿರುವುದನ್ನು ಗಮನಿಸುತ್ತಿವೆ ಮೂಕ ಪ್ರೇಕ್ಷಕ ರಾಗಿ….. ಇನ್ನು ಹೊರ ಪ್ರಪಂಚದ ಈ ಕ್ರೂರತೆಯಲ್ಲಿ ಬದುಕಲೆ ಬೇಕಾದ ಅನಿವಾರ್ಯತೆ ಅಯ್ಯೋ?
ನಾಯಿ ಮುಂದುವರಿಸುತ್ತಾ ಈ ಮನುಷ್ಯನ ಕರ್ತವ್ಯ ಪ್ರಜ್ಞೆಯ ಆಸೆಯ ಆಕಾಂಕ್ಷೆ ವಿದ್ಯೆ ಭಾಷಣಗಳನ್ನು ಒಪ್ಪುತ್ತೇನೆ ನನ್ನ ಕಡೆ ಪ್ರೀತಿಯಿಂದ ಎಸೆದ ತುತ್ತಿಗಾಗಿ ಕೃತಜ್ಞ ತೆಯನ್ನು ಸಲ್ಲಿಸುತ್ತೇನೆ ಆದರೆ ಮಾನವೀಯತೆಯನ್ನು ಮರೆತು ಬದುಕುವ ಬದುಕು ಬೇರೆಯವರ ಬದುಕನ್ನು ಕಿತ್ತುಕೊಳ್ಳುವುದಿಲ್ಲವೇ??
ಈ ಮನುಷ್ಯ ಊಟ ತಿಂಡಿ ಅಗಾಗ ಕೊಡುತ್ತಾನೆ ನನ್ನೊಂದಿಗೆ ಫೋಟೋ ತೆಗೆದುಕೊಳ್ಳುತ್ತಾನೆ ಅದನ್ನು ಎಲ್ಲೆಡೆ ಪೋಸ್ಟ್ ಮಾಡಿ ಸಂತಸ ಪಡುತ್ತಾನೆ ತನ್ನ ಸುತ್ತಮುತ್ತಲ ಬದುಕಿನಲ್ಲೂ ಇದನ್ನೇ ಮಾಡುತ್ತಾನೆ ಸ್ವಾರ್ಥ ರಹಿತ ವಾಗಿ ಒಂದು ಉಸಿರಾಟವನ್ನು ಆತ ಮಾಡಲಾರ ತನ್ನ ಸ್ವಾರ್ಥ ಆಕಾಂಕ್ಷೆಗಳಿಗಾಗಿ ಸುತ್ತಮುತ್ತಲಿನ ಮನಸ್ಸನ್ನು ನೋಯಿಸಿ ಕಷ್ಟಗಳನ್ನು ಕಡೆಗಣಿಸಿ ಅಹಂಕಾರಕ್ಕೆ ಖುಷಿಪಡುತ್ತಾನೆ
ಒಮ್ಮೆ ಮನುಷ್ಯತ್ವದಿಂದ ನೀವು ಯೋಚಿಸುವಿರಾ?
ನಿಮ್ಮಸಂತೋಷ ಸಾಧನೆಯಹಾದಿಯಲ್ಲಿ ಬೇರೆ ಆತ್ಮಗಳಿಗೆ ಕೊಟ್ಟ ಸಂಕಷ್ಟ ನೋವು ”’ಅದರಿಂದ ನೊಂದ ಆತ್ಮದ ಶಾಪ ನಿಮಗೆ ತಟ್ಟದೇ ಇದ್ದಿತೇ???
ಕಿಂಚಿತ್ ಪಶ್ಚಾತಾಪದಿಂದ ಪರಿತಪಿಸು ಒಮ್ಮೆ
ನಿಮ್ಮ ಪಾಪ ಕರ್ಮದ ಫಲ ಸ್ವಲ್ಪವಾದರೂ ಕಡಿಮೆಯಾದೀತು…
ಒಂದೆಡೆ ಕಣ್ಣೀರ್ ಹಾಕುತ್ತಾ ತನ್ನ ಅಳಲನ್ನು ಹೇಳಿದರೆ ಈ ಮನುಷ್ಯನಿಗೆ ಒಳ್ಳೆಯ ಬುದ್ಧಿ ಬಂದು ಒಳ್ಳೆಯದಾಗಲಿ ಎಂಬ ಹಂಬಲವನ್ನು ಅದು ವ್ಯಕ್ತಪಡಿಸಿತು
ನೀನೇ ಹೇಳು ನಾನು ಎಲ್ಲಿ ಬದುಕಲಿ ನನಗೆ ಕಾಡು ದೂರ ಈ ಮನುಷ್ಯ ಇಂದು ಬದುಕುವ ಬದುಕಿನ ಸಂಭ್ರಮದಲ್ಲೂ ನನಗೆ ಸ್ಮಶಾನ ದ ನೆನಪು
ಏನು ಮಾಡಲಿ ???
ಈ ಪ್ರಕೃತಿಯಲ್ಲಿನ ಎಲ್ಲ ಜೀವಜಂತುಗಳಿಗೂ ಪಶು ಪಕ್ಷಿಗಳಿಗೂ ಜಲ ಭೂಮಿತಾಯಿಗೂ ಉಸಿರು ಕಟ್ಟುವಂತಾ ಪರಿಸ್ಥಿತಿ ದಿನೇ ದಿನ ಹೆಚ್ಚಾಗುತ್ತಿದೆ ಎಂದು ನೊಂದು ನುಡಿಯಿತು ಪ್ರತಿಯೊಂದು ಜೀವಕ್ಕು ಬದುಕುವ ಹಕ್ಕಿದೆ
ಪ್ರತಿಯೊಂದು ಮಾತು ಉರಿವ ಕಬ್ಬಿಣದ ಸಲಾಕೆಯಂತಿತ್ತು ಅದರ ಪ್ರಶ್ನೆಗಳು ನನಗೂ ಪ್ರಶ್ನೆಯಾಗಿಯೇ ಇತ್ತು ಅದರ ಆತಂಕ ಕಾಳಜಿ ಮನಸ್ಸನ್ನು ಮೌನ ಗೊಳಿಸಿ ದುಃಖಿಸಿತು,,.
ನಾನು ಸಮಾಧಾನಪಡಿಸುತ್ತಾ ಹೇಳಿದೆ ನೀನು ಅಂದುಕೊಂಡಂತೆ ಎಲ್ಲರೂ ಹೃದಯ ಹೀನರಲ್ಲ ತುಂಬಾ ಹೃದಯವಂತರು ಇದ್ದಾರೆ. ನಿನ್ನ ಬಗ್ಗೆ ಯೋಚಿಸುತ್ತಾರೆ. ಪರಿಸರದ ಬಗ್ಗೆ ಯೋಚಿಸುತ್ತಾರೆ ಎಷ್ಟೊಂದು ಮಕ್ಕಳು ನಮಗೆ ಪಟಾಕಿ ಬೇಡ ಎಂದು ಪಟಾಕಿಯನ್ನು ನಿರಾಕರಿಸುತ್ತಾರೆ
ನಿನ್ನ ಮಕ್ಕಳು ಮೊಮ್ಮಕ್ಕಳ ಕಾಲದಲ್ಲಿ ಈ ವಿಕೃತಿ ಕಡಿಮೆಯಾಗುತ್ತದೆ ಎಂದು ಆಶಿಸೋಣ ಸಕಾರಾತ್ಮಕ ಯೋಚನೆಗಳು ಒಳ್ಳೆಯದನ್ನು ಮಾಡುತ್ತದೆ ಎಂಬುದನ್ನು ನಂಬಿಕೊಳ್ಳೋಣ ಎಂದೆ
ಶಬ್ದಗಳು ಕಡಿಮೆಯಾಗುತ್ತವೆ ನಿನ್ನ ಮಕ್ಕಳು ನಿನಗೆ ಸಿಗುತ್ತಾರೆ ಪರಿಸರ ಉಳಿಯುತ್ತದೆ
ಅದಕ್ಕೆ ಅದು ಹುಸಿನಗೆ ನಕ್ಕುಮೊದಲು ನಾನು ನಂತರ ನನ್ನ ಮಕ್ಕಳು ಬದುಕಿದರೆ ತಾನೇ ಮೊಮ್ಮಕ್ಕಳ ಯೋಚನೆ ಎಂದಿತು…..
ಬಾಲ ನಿಧಾನವಾಗಿ ಮೇಲೆತ್ತಿ ಒಮ್ಮೆ ಅಲ್ಲಾಡಿಸಿತ್ತು ಅದು
ಆಶಾವಾದವನ್ನು ಪ್ರತಿ ಬಿಂಬಿಸುವಂತೆ ಇತ್ತು….
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗನು
ಮಂಕುತಿಮ್ಮ
ಶಬ್ದ ಮಾಲಿನ್ಯ ವಾಯುಮಾಲಿನ್ಯ ಇಲ್ಲದ ಹಬ್ಬಗಳು ನಮಗೆಲ್ಲಾ ಬರಲೆಂದು ಆಶಿಸುತ್ತಾ ಪ್ರೀತಿಯಿಂದ ದೀಪಾವಳಿಯ ಶುಭಾಶಯಗಳು
ಶಾಂತಲಾ ಮಧು





ಸ್ಪಂದಿಸುವ ಗುಣ, ಅರ್ಥಮಾಡಿಕೊಳ್ಳುವ ಸೌಜನ್ಯ ಅದು ದಕ್ಕಿದವ ಅದೃಷ್ಟವಂತ. ಇಲ್ಲವಾದರೆ ಅವ ಮಾತುಗಾರ ಅಷ್ಟೇ.
So sweet thank you