ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹುಟ್ಟು ಇದು ಹುಟ್ಟಲ್ಲ
ನಿತ್ಯ ಸಾವಿನ ಪಯಣ
ಕಷ್ಟ ಸುಖ ನೋವು ನಗೆ
ಭಾವಗಳ ಸಮ್ಮಿಳನ

ಸ್ನೇಹ  ಸಮತೆ ಶಾಂತಿ ಪ್ರೀತಿ
ಮೌಲ್ಯಗಳ ಜನನ
ತಾನು ಬದುಕಿ ಜಗವ ಗೆಲಿಸುವ
ಮನುಜ ಪಥದ ಸಾಧನ

ಜಾತಿ ಮತ ಗಡಿ ಸೀಮೆ
ಏಕೆ ನಿತ್ಯ ಕದನ
ಹಸಿವು ಬಡತನ ಜನರ ಕೂಗು
ಕೂಳಿಗಾಗಿ ಆಕ್ರಂದನ

ಒಂದೇ ನೆಲದಲಿ ತಾರತಮ್ಯ
ಬಡವ ಬಲ್ಲಿದ ವರ್ಣ
ಕಪ್ಪು ಮಣ್ಣಲಿ ಮೊಳಗಲಿ
 ನವ ಕ್ರಾಂತಿಯ ಗಾನ

ಓಡುತ್ತಿದೆ ಈ ವಿಶ್ವ
ಮರೆತು ಮಾನವ ಮಾನ
ಹಸಿರಾಗಲಿ ನಾಡು ರಾಷ್ಟ್ರ
ಬೆಸುಗೆಯಾಗಲಿ ಭಾವನ

ಹಕ್ಕಿ ಪಕ್ಷಿ ಪಶು ಪ್ರಾಣಿ
ಸಂತಸದ ಕಾನನ
ಶುದ್ಧ ಗಾಳಿ ನೀರು ಶಬ್ದ
ಸಮರಸವು ಜೀವನ

ಹುಟ್ಟು ಇದು ಅಲ್ಲ ಶಾಶ್ವತ
ಸಾವು ಅಲ್ಲ ಜೀವ ಕೊನೆ
ಬಾಳಿ ಬದುಕಿ ಮುಕ್ತಿ ಹೊಂದುವ
ಬುದ್ಧ ಬಸವರ ಯಾನ

ಹುಟ್ಟಿದಾಗ ಅವರು ನಕ್ಕರು
ಸತ್ತಾಗ ಬಿಕ್ಕಿ ಅತ್ತರು
ಹುಟ್ಟು ಅರಿಯದ ಸಾವು ತಿಳಿಯದ
ಶಿವಯೋಗದ ತನು ಮನ



ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಹುಟ್ಟು ಇದು ಹುಟ್ಟಲ್ಲ””

  1. ಹುಟ್ಟು ಸಾವುಗಳು ಈ ದೇಹಕ್ಕೆ ಮಾತ್ರ, ಆತ್ಮಕ್ಕೆ ಅಲ್ಲ ಎನ್ನುವುದು ಆಧ್ಯಾತ್ಮ ಜೀವಿಗಳ ಭಾಷೆ. ಹುಟ್ಟು ಆಕಸ್ಮಿಕ ಸಾವು ಖಚಿತ ಎನ್ನುವುದು ಲೌಕಿಕರ ಪರಿಭಾಷೆ. ಇವುಗಳ ಮಧ್ಯೆ ತಾನೂ ಬದುಕಿ ಇನ್ನೊಬ್ಬರನ್ನೂ ಬದುಕಿಸುವ ಈ ಜೀವಯಾನ, ಹುಟ್ಟಿದಾಗ ನಕ್ಕವರು ಸತ್ತಾಗ ಸಾರ್ಥಕ ಜೀವದ ಅಗಲಿಕೆ ತಾಳದೆ ಅಳುವಂಥ ಭಾವ ಸೃಷ್ಟಿಯಾಗಬೇಕು ಎನ್ನುವ ಕವನವು, ಹೃದಯವನ್ನು ಸ್ಪರ್ಷಿಸುತ್ತ ಸಾರ್ಥಕ್ಯವನ್ನು ಪಡೆಯುತ್ತದೆ.

  2. ಹುಟ್ಟು,ಸಾವು ಶಾಶ್ವತ ಅಲ್ಲ ಇರುವ ತನಕ ಸುಖ,ಶಾಂತಿಯಿಂದ ಸಹಬಾಳ್ವೆಯಿಂದ ನೆಮ್ಮದಿಯಿಂದ ಜೀವನ ನಡೆಸಿ ಸಾರ್ಥಕ ಬದುಕು ಪಡೆಯುವದು. ಅದ್ಭುತ ಕವನ ಸರ್.

Leave a Reply

You cannot copy content of this page

Scroll to Top