ಅನುವಾದ ಸಂಗಾತಿ
“ನೀನು ಮತ್ತು ಕವಿತೆಯೂ…..!!”
ಮಲಯಾಳಂ ಮೂಲ: ರಾಧಕೃಷ್ಣನ್
ಕನ್ನಡಾನುವಾದ: ಐಗೂರು ಮೋಹನ್ ದಾಸ್ ಜಿ.


ಒಂಟಿಯಾಗಿ
ಕುಳಿತುಕೊಂಡಿರುವಾಗ ನೀನು
ನನ್ನ ಬಳಿಗೆ ಬರುತ್ತಿದ್ದೆ…!
ನೀನು ನೀಡುತ್ತಿದ್ದ
ಆಟೋಗ್ರಾಫ್ ನಲ್ಲಿ
ಒಂದು ‘ಪ್ರಣಯ’ ಕವಿತೆ
ರಚನೆ ಮಾಡುವಾಗ
ಮನದಿಂದ ಒಂಟಿತನದ
ಭಾವನೆ ದೂರವಾಗುತ್ತಿತ್ತು…!!
ನನ್ನ ‘ ಕವಿತೆ’ ಗಳಲ್ಲಿ
ಹಲವು ‘ ಹೆಸರು ‘ ಗಳಲ್ಲಿ
ನೀನು ಬಂದರೂ…….
ನಿನಗೆ ಏನೆಂದು
ನಾನು ಹೆಸರು ಇಡಲಿ….?!.
ನನಗೆ
‘ ಕವಿತೆ’ಗಳು
ನಿನ್ನ ಕಣ್ಣುಗಳಲ್ಲಿ
ಹರಡಿರುವ ಕಪ್ಪು
ಶಾಯಿಯ ಮಸಿ…!!
ನನ್ನ ಹೃದಯದಲ್ಲಿ
ಸ್ವಲ್ಪ ಕರುಣೆಯಾಗಿ
ಬಂದ ನೀನು……..
ಹೃದಯದ ಗೋಡೆಯಲ್ಲಿ
ಬರೆದ ‘ಕವಿತೆ’
ನನ್ನ ಉಳಿದ
ಜೀವನ….!!!.
——————————————————-
ಮಲಯಾಳಂ ಮೂಲ: ರಾಧಕೃಷ್ಣನ್.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.
ಸೋಮವಾರಪೇಟೆ, ಕೊಡಗು.



