ಗಜಲ್ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್

ಹೊರಳಿ ಮರಳಿ ಉರುಳಿ ನೆನಪು ಕಾಡುತಿದೆ
ಸುರುಳಿ ಬಿಚ್ಚಿ ಹಸಿಬಿಸಿ ಬಯಕೆ ಸುಡುತಿದೆ
ಮರಳ ಹಾದೀಲಿ ಇಟ್ಟ ಹೆಜ್ಜೆ ಏಳುತಿಲ್ಲ ಏಕೆ
ಕೊರಳು ಬಿಗಿದು ಹೂತ ದನಿಯು ನಡುಗುತಿದೆ
ಬೆರಳು ಜಾರಿ ಮುರಳಿಯು ಅಪಸ್ವರವನು ನುಡಿಸುತಿದೆ
ಕರುಳ ಕಿಚ್ಚು ಒಲವಿನೊಡಲ ಉರಿಸುತಲಿ ನಗುತಿದೆ
ಮರುಳ ಮನವು ಅವನು ಬರುವ ಕನಸಿನಲ್ಲಿ ಮುಳುಗಿದೆ
ಹೆರಳು ಮುಡಿದ ಮಲ್ಲಿಗೆಯು ಬಾಗಿ ಬಳುಕಿ ಕೇಳುತಿದೆ
ಮರುಳೆ ಬೇಗಂ ಅರಿಯದಾದೆ ವಂಚಕನ ಹುಸಿ ಪ್ರೇಮವ
ಕುರುಳು ಮುದುಡಿ ಕೆನ್ನೆಗೊರಗಿ ಬಿಕ್ಕುತಲಿ ಅಳುತಿದೆ
—————————
ಹಮೀದಾಬೇಗಂ ದೇಸಾಯಿ




