ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೈಲಾರ ಬಸವಲಿಂಗ ಶರಣರು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದವರು. ಇವರು ಬಣಜಿಗ ಸಮುದಾಯದವರಾಗಿದ್ದು, ವ್ಯಾಪಾರ ವೃತ್ತಿಯನ್ನು ಹೊಂದಿದ್ದರು. ಹಾಲವರ್ತಿಯ ಚೆನ್ನವೀರ ಸ್ವಾಮಿಗಳು ಇವರ ಗುರುಗಳು, ಮತ್ತು ಅವರು ಹಲವಾರು ಲಿಂಗಾಯತ  ಗ್ರಂಥಗಳನ್ನು ರಚಿಸಿದ್ದಾರೆ.
ಜನನ ಮತ್ತು ಹಿನ್ನೆಲೆ: ಇವರು ವಿಜಯನಗರ ಜಿಲ್ಲೆಯ (ಈಗಿನ ಹೂವಿನಹಡಗಲಿ ತಾಲೂಕು) ಮೈಲಾರ ಗ್ರಾಮದವರು. ವ್ಯಾಪಾರಿ ಕುಟುಂಬದಿಂದ ಬಂದ ಇವರು ತಮ್ಮ ಕಾಯಕವನ್ನೇ ಮುಂದುವರೆಸಿದರು.
ಗುರುಗಳು: ಇವರ ಗುರುಗಳು ಹಾಲವರ್ತಿಯ ಶ್ರೀ ಚೆನ್ನವೀರ ಸ್ವಾಮಿಗಳು.
ಕೃತಿಗಳು: ಮೈಲಾರ ಬಸವಲಿಂಗ ಶರಣರು ರಚಿಸಿದ ಕೆಲವು ಪ್ರಮುಖ ಕೃತಿಗಳು:

ಷಟ್‌ಸ್ಥಲ ನಿರಾಭಾರ ವೀರಶೈವ ಸಿದ್ಧಾಂತ
ಗುರುಕರುಣ ತ್ರಿವಿಧಿ
ಶಿವಾ. ನುಭವ ದರ್ಪಣ
ಲಿಂಗಪೂಜಾ ವಿಧಾನ
ಭಕ್ತಿ ಬಿನ್ನಹ ದಂಡಕಗಳು

ಐದು ಕೃತಿಗಳ್ಳಲ್ಲಿ ಗುರುಕರುಣ ತ್ರಿವಿಧಿ ಮುಖ್ಯವಾದ ಕೃತಿ. ಗುರು ಚನ್ನವೀರಸ್ವಾವಿಗಳು ಕೋಪದಿಂದ ನೀನು ಬಸಪ್ಪ ಅಲ್ಲ ಮುಸಪ್ಪ ಎಂದು ಬೈದ ಸಂದರ್ಭದಲ್ಲಿ ಒಂದು ಕಾಲಿನಲ್ಲಿ ನಿಂತು ೩೩೩ ತ್ರಿವಿದ್ಧಿಗಳನ್ನು ಹೇಳಿದರು. ತ್ರಿವಿಧಿ ಎಂದರೆ ಮೂರು ಸಾಲಿನ ಪದ್ಯ. ಮೊದಲಿನ ಎರಡು ಸಾಲುಗಳು ಮುಖ್ಯ ತತ್ವ ಒಳಗೊಂಡಿರುತ್ತವೆ. ಇದರಲ್ಲಿ ಅಷ್ಟಾವರಣ , ಪಂಚಾಚಾರ,  ಷಟಸ್ಥಲ   ತತ್ವಗಳ ವಿಚಾರ ಮುಖ್ಯವಾಗಿವೇ .

ಶ್ರೀ ಗುರುವೆ ಸತ್ಕ್ರಿಯೆಯ | ಆಗರವೆ ಸುಜ಼್ಜಾನ
ಸಾಗರವೆ ಎನ್ನ ಮತಿಗೆ ಮಂಗಳವಿತ್ತು
ರಾಗದಿಂ ಬೇಗ ಕೃಪೇಯಾಗು ||೧||
ಸದ್ಗುರುವಿನ ಸ್ವರೂಪ
ಗುರುವೆ ಭಕ್ತರ ಕಲ್ಪ | ತರುವೆ ಸಜ್ಜನ ಮನೋ
ಹರವೆ ನಿಜಭಕ್ತಿ-ಜ಼್ಜಾನವೈರಾಗ್ಯಮಂ
ದಿರವೆ ಮದ್ಗುರುವೆ ಕೃಪೆಯಾಗು ||೨||
ದೇಶಿಕನೆ ಅನುಭವೋ|ಲ್ಲಾಸಕನೆ ಸಂಕಲ್ಪ ನಾಶಕನೆ ‘ಯಾಣ’ ವಾದಿ ತ್ರೈಮಲದೊಳ್ನಿ ರಾಶಕನೆ ಎನಗೆ ಕೃಪೆಯಾಗು ||೩||
ಕಾರ್ಯಕಾರಣ್ ಭಕ್ತಿ| ತುರ್ಯತಾಮಸದ ಚಿ ತ್ಸೂರ್ಯ ಎಡರಿಂಗೆ-ಧೈರ್ಯವಾಗಿಹ ಗುರು ವರ್ಯ ನೀನೆನಗೆ ಕೃಪೆಯಾಗು ||೪||

 ಬಸವ ತತ್ವವನ್ನು ಗುರು ಲಿಂಗ ಜಂಗಮ ಸಿದ್ಧಾಂತಗಳನ್ನು ನಾಡಿನುದ್ದಕ್ಕೋ ತತ್ವ ಪದಗಳ ಮೂಲಕ ಪ್ರಸಾರ ಮಾಡಿದ ದಿಟ್ಟ ಶರಣರು ನಮ್ಮ ಮಾಲಿಕೆಯಲ್ಲಿ ಮೂಡಿ ಬಂದ ಸಾವಿಲ್ಲದ ಶರಣರು.

——————————

About The Author

1 thought on “ʼಸಾವಿಲ್ಲದ ಶರಣರುʼ ಮಾಲಿಕೆಯಲ್ಲಿ”ಮೈಲಾರ  ಬಸವಲಿಂಗ   ಶರಣರು” ಕುರಿತಾದ ಲೇಖನ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ”

  1. “ಸಾವಿಲ್ಲದ ಶರಣರು” ಮೈಲಾರ ಬಸವಲಿಂಗ ಶರಣರ ಅನುಭಾವ, ಸಾಹಿತ್ಯ ಕೃತಿಗಳು, ೩೩೩ ತ್ರಿವಿಧ ಗಳು,ಹಾಗು ತತ್ವಪದಗಳ ಮೂಲಕ ಪ್ರಸಾರ ಮಾಡಿದ್ದು ತಿಳಿದುಬರುತ್ತದೆ. ಅದ್ಭುತ ಲೇಖನ ಸರ್.

Leave a Reply

You cannot copy content of this page

Scroll to Top