ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
“ಅದ್ಭುತ!”


ನೆರಳಿಲ್ಲದ ನೆತ್ತಿಯ ಮೇಲೆ
ಬೆಳಕಿಲ್ಲದ ಚಂದ್ರ
ಕಾಗೆಯ ಗೂಡಿನಲಿ
ಕೋಗಿಲೆಯ ಮರಿ
ತುಂತುರು ಮಳೆಯಲಿ
ಮೆಲ್ಲನೆ ಮೂಡುವ ಕಾಮನಬಿಲ್ಲು
ಹಿರಿದಾದ ಬೆಟ್ಟದ ಪದರಲಿ
ಕಿರಿದಾದ ಕಪ್ಪೆ
ಬಿಂಬವೇ ಇಲ್ಲದ ಕಣ್ಣಿನಲಿ
ಸಡಗರ.ಸಲ್ಲಾಪ.ಸಂಗೀತ.
ಕೇಶವಿಲ್ಲದ ಮುಂಡದಲಿ
ಮಾರುದ್ದದ ಬೈತಲೆ
ಸುಖಃ ದಾಸೆಗೆ ಚಂಚಲವಾದ
ಮನಸ್ಸು
ದುಃಖದ ಪರಿಚಯ ವಾಗಿ
ಸತ್ತು ಹೋದ ನಿರೀಕ್ಷೆ
ಮೋಡ ಭೋರ್ಗರೆದಾಗ
ಒಡಲಗಲಿಸುವ ಅವನಿ
ಇಂಚಿನಷ್ಟಿರುವ ಚೇಳಿನ
ಕೊಂಡಿಯಲಿ ಸಾವಿರ
ವಿದ್ಯುದ್ದೀಪದ ಶಾಖ
ಮೂರಡಿಯ ಸರ್ಪದ ಹಲ್ಲಿನಲಿ ಆರಡಿಯ ಜೀವಗಳ ಅವಸಾನ
ಪುಣ್ಯದೊಡಲ ಬಿಚ್ಚಿ
ಪಾಪ ಬೀಜ ಬಿತ್ತಿ ಭಕ್ತಿಯಿಂದ ಭಸ್ಮ
ಧರಿಸುವ ಆಸ್ತಿಕ
ಹೆತ್ತಮ್ಮ ಹೆಣ್ಣೆಂದು
ಮರೆತು ಹೆಣ್ಣು ಭ್ರೂಣದ
ಹತ್ಯೆಮಾಡಿ ಮಲಗುವ
ನಾಸ್ತಿಕ
ಜಾತಿಗಳಿಲ್ಲದ ಜಗದಲಿ
ಜಾತೀಯತೆ ಹುಟ್ಟಿ
ಜೀವ ಗಳಳೀಯುವಾಗ
ಜಾಡ್ಯನಾದ ಸೃಷ್ಟಿಕರ್ತ
ಇಮಾಮ್ ಮದ್ಗಾರ




“ಅದ್ಭುತ ” ಚೆನ್ನಾಗಿದೆ
ಧನ್ಯವಾದಗಳು