ಕಾವ್ಯ ಸಂಗಾತಿ
ರತ್ನ ಜಹಗೀರದಾರ
ಮುಸ್ಸಂಜೆ ಹೊತ್ನಾಗೆ


ಕೆಂಪಾದ ಮುಗಿಲ್ಯಾಗ ನಕ್ಷತ್ರ ಮಿನಿಗ್ಯಾವ
ಚಂದ್ರಾಮ ಮೂಡ್ಯಾನ ಬೆಳಕೆಲ್ಲಾ ಚದುರ್ಯಾವ
ಅಂಗಳದ ಹಾದ್ಯಾಗ ಬೆಳದಿಂಗಳ ಸುರಿದಾವ
ಮನಸಿನ ಮೂಲ್ಯಾಗ ಕುಂತು ಚೆನ್ನಯ್ಯ ಕಾಡ್ತಾನವ
ಮಲ್ಲಿಗೆ ಬನದಾಗ ಕಣ್ಣ್ ಹೊಡೆದು ಕರೀತಾನ
ಸೊಗಲಾಡಿ ಸುಬ್ಬಿ ಸೋಗ್ಯಾಕ ಮಾಡ್ತಿ ಅಂತಾನ
ನನ್ನೆದಿಯಾಗ ಕುಂತಾಕಿ ಚೆಲುವಿ ನೀನಂತಾನ
ಮುಸ್ಸಂಜೆ ಹೊತ್ನಾಗೆ ಕಳುವಿಲಿ ಬರತಾನ
ಮಾತಿನ ಮಲ್ಲ ಸಂತ್ಯಾಗ ಹಿಂದಿಂದ ಬಂದಾಗ
ಕಣ್ಣಾಗ ಕಣ್ಣಿಟ್ಟು ಕೈಹಿಡಿದು ಕೇಳುತಾನ ಮದುವ್ಯಾಗ
ಬಂಗಾರದ ಗುಡದಾಳಿ ಮಾಡ್ಸಿನಿ ನನ್ನ ಬಂಗಾರಿಗೆ
ಸಿಂಗಾರಿ ನೀ ನನ್ನ ಒಡತ್ಯಾಗ ಬಾರಾ ನನ್ನ ಬಾಳಿಗೆ
ರತ್ನ ಜಹಗೀರದಾರ




Superb
Madem