ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ರಕ್ತ ಸಿಕ್ತ ಮಾಂಸಗಳ ತೊಲೆಯಿಂದಾವೃತ ಕಾಯ
ಅಸ್ತಿ ಪಂಜರದ ಮೂಳೆಗಳ ತೊಗಟೆ
ಕಾಮ ತುಂಬಿದ ಕಂಗಳಿಗೆ ಉಬ್ಬು ತಗ್ಗುಗಳ ಗಡಿಗೆಯ ಮೇಲೇಕೆ ಇಷ್ಟು ಅಭೀಷ್ಟೇ||

ಕಾಮಕ್ಕೆ ಕಣ್ಣಿಲ್ಲ
ತೊಡುವ ಉಡುಗೆಯೊಳು ಸೆಳೆಯುವುದಲ್ಲ
ನೋಡುವ ಕಂಗಳಿಗೆ ನಾಗರೀಕತೆಯಿಲ್ಲ
ಪೊರೆವ ಭುವಿಗೆ ಸುಡುವ ಅಗ್ನಿಗೆ ಲಿಂಗ ಬೇಧವಿಲ್ಲ
ಕುರುಡಾದ ಕಾಮಕ್ಕೆ ಏಕೆ ಇದು ತಿಳಿಯುತ್ತಿಲ್ಲ ||

ಜೀವತಳೆದದ್ದು ಅದೇ ನಗ್ನ ಸೃಷ್ಠಿ ಮೂಲದಿಂದಲೇ
ಬೆಳೆವಾಗ ಉಂಡು ಜೀವಿಸಿದ್ದು ನಗ್ನವಾದ ಅದೇ ತಾಯ್ತನದ ಅಮೃತ ಕುಂಭದಿಂದಲೇ
ಮರೆಯಾದ ಅದೇ ಅಂಗಗಳೇ ನಿನ್ನ ಕಾಮಕ್ಕೆ ಪ್ರಚೋದಿಸಿದವೇ
ಕಾಮತುಂಬಿದ ಕಂಗಳಿಗೆ ಆ ತಾಯ್ತನದ ನಗ್ನತೆಯು ಕಾಣಲಿಲ್ಲವೇ ||

ಜನ್ಮವೆಂಬುದಾದರೆ ಬೇಡ ಈ ಹೆಣ್ತನವೆಂಬ ನರಕ
ಮಡಿದಾಗ ಮಣ್ಣಾಗುವ ಈ ತೊಗಲು ಕಾಯದ ದುಃಖ
ಮರುಕಳಿಸದಿರು ಈ ಆಕರ್ಷಕ ಅಂಗಗಳೆಂಬ ಕಳಂಕ
ವಿಕೃತ ಮನಗಳ ನೋಟಕ್ಕೆ ಬೇಸತ್ತು ಮನದಿ ಮೂಡಿದೆ ಮರುಕ ||

ಮತ್ತೊಮ್ಮೆ ಬೇಡವೇ ಬೇಡ ದೇವಾ
ಈ ಸ್ತ್ರೀ ಎಂಬ ಜನನದ ಜೀವ
ವಿಕೃತ ಮನದ ಕಾಮಕ್ಕೆ ಬಲಿಯಾದ ಈ ಭಾವ
ತಾಳಲಾರೆನಾ ಈ ವಿಕಾರದ ನೋವ
ಸೆಳೆಯುವ ಅಂಗಗಳ ಹೊತ್ತು ಸಹಿಸಲಾರೆ ನೀ ನೋವೆಂಬ ಸಾವ


About The Author

Leave a Reply

You cannot copy content of this page

Scroll to Top