ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 (೧೯೩೫-೨೦೧೬)
( ಮುಖ್ಯಮಂತ್ರಿಯಾದ ಅವಧಿ: ೧೨/೦೮/೧೯೭೩ ರಿಂದ ೨೭/೦೪
/೧೯೭೯ ೫ ವರ್ಷ ೨೫೮ ದಿನಗಳು)

ಗೋವಾ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಮತ್ತು ಭಾರತದ ಮೂರನೇ ಮಹಿಳಾ ಮುಖ್ಯಮಂತ್ರಿ ಶಶಿಕಲಾ ಕಾಕೋಡ್ಕರ.  ಇವರು ೭ ಜನವೆರಿ ೧೯೩೫ ರಂದು ಗೋವಾದ ಪೆರ್ನೆಮ್‌ನಲ್ಲಿ ಜನಿಸಿದರು. ಇವರ ತಂದೆ ದಯಾನಂದ ತಾಯಿ ಸುನಂದಾಬಾಯಿ ಬಂದೋಡ್ಕರ್. ಇವರು ಮನೆಯ ಹಿರಿಯ ಮಗಳು. ಇವರು ಪ್ರಾಥಮಿಕ ಶಿಕ್ಷಣವನ್ನು ಮುಶ್ಚಿಪುಂಡ್ ಸಂಸ್ಥಾನದಲ್ಲಿ ಪೂರ್ಣಗೊಳಿಸಿದರು. ನೋವಾಗೋವಾದ ಪೀಪಲ್ಸ್ ಹೈಸ್ಕೂಲ್‌ನಲ್ಲಿ ಮೆಟ್ರಿಕ್ಯೂಲೇಷನ್ ಮುಗಿಸಿದರು. ಇವರು ತಮ್ಮ ೧೧ನೇ ವಯಸ್ಸಿನಲ್ಲಿ ದೇಶ ಭಕ್ತಿ ಘೋಷಣೆ ಕೂಗುವುದರ ಮೂಲಕ ಗೋವಾ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದರು. ಆಗ ಪೋಲೀಸರಿಂದ ಹೊಡೆತ ತಿಂದರು.
ಇವರು ಬಿಎ ಪದವಿಯಲ್ಲಿ ಮಾನವಶಾಸ್ತç, ಸಮಾಜಶಾಸ್ತç, ಇತಿಹಾಸ ವಿಷಯಗಳನ್ನು ಅಧ್ಯಯನ ಮಾಡಿದರು. ಎಂಎ ಪದವಿಯನ್ನು ಬಾಂಬೆಯ ಎಲ್ಫನ್‌ಸ್ಟೋಡಿನ್ ಕಾಲೇಜಿನಿಂದ ಪಡೆದರು. ೧೯೬೩ರಲ್ಲಿ ಶಶಿಕಲಾರವರು ಗುರುದತ್ ಕಾಕೋಡ್ಕರ್ ಅವರನ್ನು ವಿವಾಹವಾದರು. ಇವರಿಗೆ ಮೂರು ಜನ ಮಕ್ಕಳು. ಶಶಿಕಲಾರವರ ತಂದೆಯವರು ಗೋವಾದ ಮೊದಲ ಮುಖ್ಯಮಂತ್ರಿಯಾಗಿದ್ದರು ಮತ್ತು ಪ್ರಭಾವಿ ರಾಜಕಾರಣಿಯಾಗಿದ್ದರು. ಶಶಿಕಲಾರವರು ೧೯೬೮ರಲ್ಲಿ ಬಂದೋಡ್ಕರ್ ಗ್ರೂಪ್ ಆಫ್ ಕಂಪನಿಗಳ ಜನರಲ್ ಮ್ಯಾನೇಜರ್ ಆಗಿ ನೇಮಕಗೊಂಡರು. ಜೊತೆಗೆ ಯುವ ರೆಡ್‌ಕ್ರಾಸ್ ಸೊಸೈಟಿ, ಅಖಿಲ ಭಾರತ ಮಹಿಳಾ ಸಮ್ಮೇಳನ ಮತ್ತು ಕೇಂದ್ರ ಸಮಾಜ ಕಲ್ಯಾಣ ಮಂಡಳಿಯ ಸದಸ್ಯರು ಕೂಡ ಆಗಿದ್ದರು.
ಶಶಿಕಲಾರವರು ೧೯೬೭ರಲ್ಲಿ ಗೋವಾ, ದಮನ ಮತ್ತು ಡಿಯು ವಿಧಾನ ಸಭಾ ಚುಣಾವಣೆಯಲ್ಲಿ ಮಹಾರಾಷ್ಟçವಾದಿ ಗೋಮಂತಕ್ ಪಕ್ಷದ ಅಭ್ಯರ್ಥಿಯಾಗಿ ಪೋಂಡಾ ಕ್ಷೇತ್ರದಿಂದ ಸ್ಪರ್ಧಿಸಿ, ಭಾರಿ ಬಹುಮತದಿಂದ ಗೆಲ್ಲುವುದರ ಮೂಲಕ ಗೋವಾ, ದಮನ ಮತ್ತು ಡಿಯು ವಿಧಾನ ಸಭೆಯ ಎರಡನೇ ಮಹಿಳಾ ಸದಸ್ಯರಾದರು. ೧೯೭೨ರಲ್ಲಿ ಗೋವಾ, ದಮನ ಮತ್ತು ಡಿಯು ವಿಧಾನಸಭಾ ಚುಣಾವಣೆಯಲ್ಲಿ ಶಶಿಕಲಾರವರು ಬಿಚೋಲಿಮ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುಣಾವಣೆಯಲ್ಲಿ ಜಯಗಳಿಸಿದರು. ನಂತರ ತಂದೆಯವರೆ ಮುಖ್ಯಮಂತ್ರಿಯಾಗಿದ್ದ  ಅವಧಿಯಲ್ಲಿ ರಾಜ್ಯ ಸಚಿವರಾಗಿ ನೇಮಕಗೊಂಡರು. ಇವರು ಶಿಕ್ಷಣ, ಸಾರ್ವಜನಿಕ ಆರೋಗ್ಯ, ಸಮಾಜ ಕಲ್ಯಾಣ, ಸಾರ್ವಜನಿಕ ನೆರವು, ಪ್ರೊವೆಡೋಲಿಯಾ ಮತ್ತು ಉಳಿತಾಯ ಖಾತೆಗಳನ್ನು ಹೊಂದಿದ್ದರು. ಶಶಿಕಲಾರವರ ತಂದೆಯವರು ತಮ್ಮ ಅಧಿಕಾರವಧಿಯಲ್ಲಿ ಮರಣ ಹೊಂದಿದರು. ಆಗ ಗೋಮಂತಕ್ ಪಕ್ಷದ ಶಾಸಕರು ಸೇರಿಕೊಂಡು ಶಶಿಕಲಾರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ, ಗೋವಾ, ದಮನ ಮತ್ತು ಡಿಯುದ ಮುಖ್ಯಮಂತ್ರಿಯನ್ನಾಗಿ ಮಾಡಿದರು. ೧೩/೦೮/೧೯೭೩ರಂದು ಗೋವಾದ ಮೊದಲ ಮಹಿಳಾ ಮುಖ್ಯ ಮಂತ್ರಿಯಾಗಿ ಅಧಿಕಾರವನ್ನು ಸ್ವಿಕರಿಸಿದರು. ಜೊತೆಗೆ ಮಹಾರಾಷ್ಟçವಾದಿ ಗೋಮಂತರ್ ಪಕ್ಷದ ಅಧ್ಯಕ್ಷರಾಗಿಯೂ ಕಾರ್ಯಭಾರವನ್ನು ನಿಭಾಯಿಸಿದರು. ಇವರನ್ನು ಮೊದಲಿಗೆ ತಮ್ಮ ತಂದೆಯ ಮೂಲಕ ಗುರುತಿಸುತ್ತಿದ್ದರು, ನಂತರ ತಮ್ಮ ಆಡಳಿತದ ಮೂಲಕ ಭಿನ್ನವಾದ ವ್ಯಕ್ತಿತ್ವವನ್ನು ಗುರುತಿಸಿಕೊಂಡರು.

ಶಶಿಕಲಾರವರು ೧೯೭೫ರಲ್ಲಿ ಗೋವಾ, ದಮನ ಮತ್ತು ಡಿಯುದ ಆರ್ಥಿಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದರು. ಹಾಗೆಯೇ ೧೯೭೫ರಲ್ಲಿ ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿಯನ್ನು ಸ್ಥಾಪಿಸಿದರು. ಇವರು ತಮ್ಮ ಅಧಿಕಾರಾವಧಿಯಲ್ಲಿ ಭೂಸುಧಾರಣೆಗಳತ್ತ ಗಮನಹರಿಸಿ ಕೆಲವು ಕಾಯ್ದೆಗಳನ್ನು ಜಾರಿಗೆ ತಂದರು. ಅಲ್ಲದೇ ಕೆಲವು ಕಾಯ್ದೆಗಳ ತಿದ್ದು ಪಡೆಗಳನ್ನು ಕೂಡ ಮಾಡಿದರು. ಗೋವಾ, ದಮನ ಮತ್ತು ಡಿಯು ಸೇರಿದಂತೆ ಹಲವು ಕಾಯ್ದೆಗಳನ್ನು ಮಾಡಿದರು. ಅವುಗಳಲ್ಲಿ ಚಿಟ್ ಫಂಡ್ಸ್ ಕಾಯ್ದೆ, ೧೯೭೩, ಚಾರ್ಜ್ ತೆರಿಗೆ ಕಾಯ್ದೆ ೧೯೭೩, ಮೋಟಾರ್ ವಾಹನ ಕಾಯ್ದೆ, ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿ ಕಾಯ್ದೆ ೧೯೭೫, ಸಾರ್ವಜನಿಕ ಜೂಜಾಟ್ ಕಾಯ್ದೆ ೧೯೭೬, ಅಭ್ಯಾಸ ಅಪರಾಧಿಗಳ ಕಾಯ್ದೆ ೧೯೭೬, ಹೀಗೆ ಅನೇಕ ಕಾಯ್ದೆ ಕಾನೂನುಗಳನ್ನು ಸುಧಾರಣೆಗಳನ್ನು ಮಾಡಿದರು.
೧೯೭೭ರಲ್ಲಿ ಎರಡನೇ ಬಾರಿ ಚುಣಾವಣೆ ಎದುರಿಸಿ ಶಶಿಕಲಾರವರು ೨ನೇ ಬಾರಿ ಗೋವಾ, ದಮನ ಮತ್ತು ಡಿಯುನ ಮುಖ್ಯಮಂತ್ರಿಯಾದರು. ಇವರು ತಮ್ಮ ಖಾತೆಯಲ್ಲಿ ಮಹತ್ವದ ಖಾತೆಗಳನ್ನು ಉಳಿಸಿಕೊಂಡ ಕಾರ್ಯವನ್ನು ನಿರ್ವಹಿಸಿದರು.
ನಿರುದ್ಯೋಗವನ್ನು ನಿವಾರಿಸಲು ಹನ್ನೊಂದು ಕೈಗಾರಿಕಾ ಎಸ್ಟೇಟ್‌ಗಳನ್ನು ಸ್ಥಾಪಿಸಿದರು. ಗೋವಾ ಫಾರ್ಮಾ ಗುಡಿಯಲ್ಲಿ ಇರುವ ಪೊಂಡಾ ಕೋಟೆಯನ್ನು ಸುಂದರಗೊಳಿಸಿ ಅಲ್ಲಿ ಛತ್ರಪತಿ ಶಿವಾಜಿಯ ಕುದುರೆ ಸವಾರಿ ಪ್ರತಿಮೆಯನ್ನು ಸ್ಥಾಪಿಸಿದರು. ಇವರ ಆಡಳಿತ ಅವಧಿಯಲ್ಲಿ ಕೆಲವು ಅತೃಪ್ತ ಶಾಸಕರು ದಂಗೆ ಎದ್ದು ರಾಜೆನಾಮೆ ನೀಡಲು ಒತ್ತಾಯಿಸಿದರು. ಸರ್ಕಾರ ಅಸ್ಥಿರಗೊಳಿಸಲ ಪ್ರಯತ್ನಮಾಡಿದರು. ಕೆಲ ಕಾರಣಗಳಿಂದ ಶಶಿಕಲಾರವರು ರಾಜಿನಾಮೆ ನೀಡಿದರು. ಇವರ ರಾಜಿನಾಮೆಯ ನಂತರ ಗೋವಾದಲ್ಲಿ ರಾಷ್ಟçಪತಿ ಆಡಳಿತವನ್ನು ಹೇರಲಾಯಿತು.

ಶಶಿಕಲಾ ಅವರು ತಮ್ಮ ರಾಜಕೀಯದಲ್ಲಿ ಹಲವು ಏರಿಳಿತವನ್ನು ಕಂಡವರು. ಇವರು ೧೯೯೪ರ ಚುಣಾವಣೆಯಲ್ಲಿ ಮಾಯೆಮ್ ಕ್ಷೇತ್ರದಿಂದ ಗೋವಾ ವಿಧಾನ ಸಭೆಗೆ ಆಯ್ಕೆಯಾದರು. ನಂತರ ೧೯೯೯ ಮತ್ತು ೨೦೦೨ರಲ್ಲಿ ಚುಣಾವಣೆಯಲ್ಲಿ ಸೋಲನ್ನು ಕಂಡರು. ನಂತರ ಚುಣಾವಣೆಗೆ ಸ್ಪರ್ಧಿಸಲಿಲ್ಲ.
ಇವರು ನಿರ್ವಹಿಸಿದ ಇತರೆ ಕಾರ್ಯಗಳೆಂದರೆ ಕಲಾ ಅಕಾಡೆಮಿಯ ಅದ್ಯಕ್ಷರಾಗಿ, ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ಕ್ರೀಡಾ ಮಂಡಳಿಯ ಅಧ್ಯಕ್ಷರಾಗಿ, ಗೋವಾ ಕ್ಯಾನ್ಸರ್ ಸೋಸೈಟಿಯ ಅಧ್ಯಕ್ಷರಾಗಿ, ರೇಡ್‌ಕ್ರಾಸ್ ಸಮಿತಿಯ ಅಧ್ಯಕ್ಷರಾಗಿ, ಮರಾಠಿ ಭವನ ನಿಮಾರ್ಣ ಸಮಿತಿಯ ಕಾರ್ಯಕಾರಿ ಅಧ್ಯಕ್ಷರಾಗಿ, ಗೋವಾ ಬಾಲಭವನದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಇನ್ನು ಹಲವು ಕಾರ್ಯಗಳನ್ನು ತಮ್ಮ ಜೀವಿತಾ ಅವಧಿಯಲ್ಲಿ ಮಾಡಿದರು. ೨೦೧೪ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಗೌರವ ಡಾಕ್ಟರೆಟ್ ಪದವಿಯನ್ನು ಪಡೆದರು.

ದೀರ್ಘಕಾಲದ ಅನಾರೋಗ್ಯದಿಂದ ೨೮ ೨೦೧೬ ರಂದು ಪಣಜಿಯಲ್ಲಿ ನಿಧನರಾದರು.


About The Author

Leave a Reply

You cannot copy content of this page

Scroll to Top