ಮಮತ ಕೆ. ಎಸ್.ಅವರ ಪುಟ್ಟ ಕವಿತೆ

ಮಡಿಲನು ತುಂಬುವ ಪುಟ್ಟ ದೇವತೆ ಇವಳು
ತುಡಿತದ ಹಂಬಲ ನೀಗಿಸುವ ಒರತೆ ಇವಳು

ಮುಗ್ಧ ಭಾವದೊಲುಮೆಯ ಮಂಜುಳ ಸುನಾದ
ಸ್ನಿಗ್ಧ ಆಕರ್ಷಕ, ಮೈಮಾಟದ ಕವಿತೆ ಇವಳು

ಅಪರಾಜಿತುತ್ಸವದ ಮೌಲ್ಯ ಭರಿತ ಶಿರಸ್ತ್ರಾಣ
ತಾಪೋಧ್ವೇಗ ರೌದ್ರತೆ ದಹಿಸುವ ದೀನತೆ ಇವಳು

ಹೃದಯ ಸಂಪನ್ನೇ ಬಾಳ ಬಂಡಿಯ ಅಧಾರ
ಉದಯೋನ್ಮುಖ ಕಲೆಗಾರರಲ್ಲಿ ಸ್ಥಿರತೆ ಇವಳು

ಕಂಗಳ ಕಾಂತಿಯಲಿ ಅಂಗಳ ಬೆಳಗುವಳು ಚೈತ್ರ
ತಿಂಗಳನ ಕಂಗೆಡಿಸುವ ಸಾಲು ಕವಿತೆ ಇವಳು

—————————————–

.

One thought on “ಮಮತ ಕೆ. ಎಸ್.ಅವರ ಪುಟ್ಟ ಕವಿತೆ”

  1. ಕಂಗಳ ಕಾಂತಿಯಲಿ ಅಂಗಳ ಬೆಳಗುವ ಮುದ್ದು ಮೊಗದ ಮಗಳು ಸುಂದರ ಕವನ
    Sripad Algudkar ✍️

Leave a Reply