ಕಾವ್ಯ ಸಂಗಾತಿ
ದೀಪಾ ಪೂಜಾರಿ ಕುಶಾಲನಗರ
“ನೆನಪಿನ ಉಸಿರು”

ಇಂದಿಗೆ ಎರಡು ವರ್ಷವಾದರೂ, ನಿನ್ನ ನೆನಪು ಮಾಯವಾಗಲಿಲ್ಲ,
ಹೋದೆಯಾ ನೀನು ಎಂದು ಹೃದಯ ಒಪ್ಪಲಿಲ್ಲ.
ನಿತ್ಯ ಬೆಳಗ್ಗೆ ನಿನ್ನ ಹೆಜ್ಜೆಯ ಶಬ್ದ
ಪ್ರತೀ ಸಂಜೆ ನಿನ್ನ ನೆನಪು ಮನದಲಿ ಬೆಳಗುತ್ತದೆ.
ನಿನ್ನ ಕೊನೆ ಕ್ಷಣ ಇನ್ನೂ ಕಣ್ಣ ಮುಂದೆ ನಿಂತಿದೆ,
ನಿನ್ನ ಕಡೆಯ ಉಸಿರು ಹೃದಯದೊಳಗೆ ಬೆರೆತಿದೆ.
ಆ ಉಸಿರಿನ ನಾದ ಇನ್ನೂ ಕಿವಿಯಲ್ಲಿ ಕೇಳುತ್ತದೆ,
ನಿನ್ನ ಉಸಿರು ಹೋದ ಕ್ಷಣ,
ನನ್ನ ಕಡೆಯ ಉಸಿರು ಇರುವ
ತನಕ ಮರೆಯಲಾಗುವುದೇ?
ಕೆಲಸದ ಒತ್ತಡ ಮರೆಯಲು ಯತ್ನಿಸಿದರೂ,
ಮನದ ಬಾಗಿಲು ತೆರೆದಾಗ
ಮತ್ತೆ ನೀನೆ ಕಾಣುತ್ತೀ.
ನಿನ್ನ ನಗು, ನಿನ್ನ ನೋಟ, ನಿನ್ನ ಪ್ರೀತಿ,
ನನ್ನ ಬದುಕಿನ ಬೆಳಕಾಗಿದೆ, ನಿನ್ನ ನೆನಪಿನ ಜ್ಯೋತಿ.
ನೀ ಇಲ್ಲ ಆದರೂ ಜೀವ ಹಾದಿ ಮುಂದುವರೆದಿದೆ
ಪ್ರತೀ ಉಸಿರೂ ನಿನ್ನ
ನೆನಪಿನಿಂದ ತುಂಬುತ್ತದೆ.
ನಿನ್ನ ಪ್ರೀತಿಯ ಬಣ್ಣದಲ್ಲಿ ಹೃದಯ ಸಿಂಗಾರ,
ನಿನ್ನಿಲ್ಲದ ಬದುಕು ನಿನ್ನ ನೆನಪಿನೆ ತಣಿದಿದೆ.
ದೀಪಾ ಪೂಜಾರಿ ಕುಶಾಲನಗರ





ನೋವಿನ ಚಿತ್ರ
ನೆನಪುಗಳು ಮೌನದ ಆಭರಣ ಹೊತ್ತು ಮತ್ತೆ ಮರೆಯದ ಮಾಣಿಕ್ಯ ಬೆಳಗುತ್ತಿದೆ…
ನೋವಿನ ಹಣತೆಯಲಿ ಇಲ್ಲದ ಜೀವ ಮತ್ತೆ ನೆನಪಿನಲಿ ಇರುವುದು ಸಹಜ
Sripad Algudkar ✍️
Thuma pain agotte nodoke