ಕಾವ್ಯ ಸಂಗಾತಿ
ಕಾನನದ ಕೋಗಿಲೆ (ರಾಜೇಶ್ ವ ಮೆಂಡಿಗೇರಿ) ಅವರ ಕವಿತೆ
“ಮತ್ತದೆ ಬಯಕೆ”


ಮತ್ತೆ ಹುಣ್ಣಿಮೆ ಚಂದ್ರನ
ನೋಡುವ ಆಸೆ….
ಚಂದ್ರಮುಖಿಯ ಪಕ್ಕದಲ್ಲಿ
ಕೈಗೆ ಕೈ ಸೇರಿಸಿ….
ಮತ್ತೆ ಶುಭ್ರ ಬೆಳದಿಂಗಳ
ಮೀಯುವ ಆಸೆ….
ಬೆಳದಿಂಗಳ ಬಾಲೆಯ
ತೆಕ್ಕೆಯೊಳಗವಿತು
ಒಂದೇ ದೋಣಿಯಲಿ
ತೇಲುವ ಆಸೆ….
ಅಂತರಾಳವ ತೆರೆದು
ಲೋಕವ ಹಿಂತೊರೆದು.
ಕಾನನದ ಕೋಗಿಲೆ(ರಾಜೇಶ್ ವ ಮೆಂಡಿಗೇರಿ)



