ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಇದ್ದು ಬಿಡು”


ನೀನು ಸಾಕು
ನೀನೊಬ್ಬಳೇ ಸಾಕು
ಎತ್ತರದ ಯಶ
ವಿಂಧ್ಯ ಪರ್ವತ ಏರಲು
ನೀನಿದ್ದರೆ ಪಕ್ಕ
ಸ್ವರ್ಗ ಸುಖ
ನೀನಿರದ ವಿರಹ
ನರಕ ಯಾತನೆ
ನಿನ್ನ ಜೊತೆಗೆ ಪಯಣ
ಹೂವು ಹಸಿರು ಕಾನನ
ನೀನಿರದ ಹೆಜ್ಜೆ
ಬರಡು ಮರ ಭೂಮಿ
ನಿನ್ನ ಸ್ನೇಹ ಪ್ರೀತಿ
ಒಲವು ಬಾಳ ರೀತಿ
ನಿನ್ನ ನೆನಪಿನ ಕ್ಷಣ
ನನ್ನ ಜೀವದ ಸ್ಪೂರ್ತಿ
ಇದ್ದು ಬಿಡು ಹೀಗೆ
ನನ್ನಲ್ಲಿ ನನ್ನೊಳಗೆ
ಸದ್ದಿಲ್ಲದೆ ಮೌನದಲಿ
ಕವನ ಕಾವ್ಯ ಭಾವವಾಗಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ




ಅರ್ಥಪೂರ್ಣ ಕಾವ್ಯ
Very beautiful poem
ಶೃಂಗಾರ & ಭಾವನಾತ್ಮಕ ಸಂಬಂಧಗಳು ಮಿಳನ
ವಾಗಿ ಸುಂದರ ಕಾವ್ಯ ಮೂಡಿಬಂದಿದೆ.
ಎಕ್ಸಲೆಂಟ್
ಶೃಂಗಾರ ಕಾವ್ಯ
Excellent poem Sir
ಅರ್ಥ ಪೂರ್ಣ ಭಾವ ಗೀತೆ ಸರ್
ಭಾವಪರವಶ ನಿಮ್ಮ ಕವನ ಸರ್
ವಿಜಯಲಕ್ಷ್ಮಿ ಹಂಗರಗಿ ಶಹಾಪುರ
Very Magnificent Poem
ಸುಂದರ ಕವಿತೆ ಸರ್
ಉತ್ತಮ ಆಶಯ ಹೊಂದಿರುವ ಮೌಲಿಕ ಸಾಹಿತ್ಯ ಸರ್
Beautiful melody of true Love