ಕಾವ್ಯ ಸಂಗಾತಿ
ಸುಧಾ ಪಾಟೀಲ
ಗಜಲ್

photo_ chat gpt
ಪ್ರತಿರೋಧದ ಮಧ್ಯದಲ್ಲೂ ಆರಾಧನೆಯ ಭಾವವಿದೆ
ಅವಿರೋಧದ ನಡುವೆಯೂ ಆತ್ಮೀಯತೆಯ ಮನವಿದೆ
ಭಾವಗಳು ಆಗಾಗ ಪಲ್ಲಟಗೊಳ್ಳುತ್ತವೆ
ತದ್ವಿರುದ್ಧದ ಸಂವಾದ ದಲ್ಲಿಯೂ ತನ್ಮಯತೆಯ ಸಾಗರವಿದೆ
ನಿನ್ನ ಅಭಿಪ್ರಾಯವನ್ನೇ ಯಾವತ್ತೂ ಹಿಂಬಾಲಿಸಲಾಗದು
ಭಿನ್ನಾಭಿಪ್ರಾಯಗಳ ಅಂತರದಲ್ಲಿಯೂ ಭರವಸೆಯ ಆಳವಿದೆ
ಮೀಟಿದ ಭಾವಗಳು ಯಾವಾಗ ಲಾದರೋಮ್ಮೆ ಹಠಮಾರಿಯಾಗುತ್ತವೆ
ಭಿನ್ನತೆಯಲ್ಲೂ ಏಕತೆಯ ಒಮ್ಮನವಿದೆ
ಪ್ರತಿಕ್ಷಣ ವಿರೋಧದ ಧ್ವನಿ ಎತ್ತುತ್ತೇನೆ
ಆದರೂ ಸುಧೆಯ ನಿಲುವಿನಲ್ಲಿ ಸಹಜತೆಯ ಒಲವಿದೆ
ಸುಧಾ ಪಾಟೀಲ




