ಕಾವ್ಯ ಸಂಗಾತಿ
ಮಮತ
“ಅಗಲಿಕೆ”

photo̲chatgpt
ಮಳೆಯ ಹನಿಯೊ
ಕಣ್ಣಂಚಿನ ಕಂಬನಿಯೊ
ಮನದಲ್ಲಿ ದುಃಖ
ಗದ್ಗದಿತ ದ್ವನಿಯೊ
ಮಾತಾಡಲಾರದೆ ಮೌನಿಯೊ
ಕಾಡಿದೆ ಹಳೆ ನೆನಪು ಸಖ
ನನ್ನದೇ ತಪ್ಪೋ
ಅವನದೇ ಅಹಂಕಾರವೋ
ತಿರುವಿ ಹೋದನು ಮುಖ
ತಪ್ಪು ಒಪ್ಪುಗಳ ಅರಿವಾಗಿದೆ
ಅಹಂಕಾರವಡಗಿದೆ
ಬಾರದು ಕಳೆದ ಸಮಯ
ಕ್ಷಮೆಗೆ ಕಾಲ ಮೀರಿದೆ
ಬದುಕು ಬದಲಾಗಿದೆ
ಅಗಲಿಕೆ ನಿರಂತರ ಇನಿಯ
ಮಮತ




