ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
“ಮರುಗುತಿವೆ ನೆನಪು”


ನಿನ್ನಾ ಮಾತು ನಿನ್ನಾ ಮುತ್ತು ,,
ಜೀವ ಕೊಲ್ಲೊ ಆ ನಿನ್ನಾ ನೋಟ ,,
ಮರೆಯಲಾರೆ ತೊರೆಯಲಾರೆ ನಾನೆಂದೂ ,
ಕಣ್ಣೀರ ಹನಿಯಾ ತಡೆಯಲಾರೆ ,,
ವಿರಹ ಉರಿಗೆ ಉರಿದು ಉರಿದು,
ಸುಟ್ಟ ಎದೆಯಾ ತೆರೆಯಲಾರೆ ..//
ಜೊತೆ ಇಟ್ಟಾ ಆ ಹೆಜ್ಜೆ ಗುರುತು ,,
ನೀ ಬಿಟ್ಟು ಹೋದ ನೆನಪು ಕಾಡಿ,,
ನಿನ್ನೊಡನಾಟ ಜೀವ ಬೇಡಿ ಬೇಡಿ,,
ಹೂತಿಟ್ಟ ಕನಸು ಸೋತಾ ಹೃದಯಾ,,
ದುಃಖ ಉಕ್ಕಿ ದಿಕ್ಕು ತಪ್ಪಿ ,,
ಸುತ್ತಿ ಸುತ್ತಿ ಬೆನ್ನು ಹತ್ತಿ ಸೋತು ಸೋತು..//
ತೆರೆದ ತೋಳ ತಣಿಸಲಾರೆ ,,
ಮೋಹ ಸೆರೆಯಾ ಬಿಡಿಸಲಾರೆ,
ನೋವು ಇಂದು ಹೂವಲ್ಲೂ ನೊಂದು,,
ಒಲವ ಸೆಳೆತ ನಿಲ್ಲಲಿಲ್ಲ ,,
ಪ್ರೇಮ ನಶೆಯಾ ಅಮಲಿನಲ್ಲಿ,
ಮೂಕ ಮೌನ ಅದರಲ್ಲೂ ಗಾನ ..//
ಮರುಗುತ್ತಿವೆ ನಿನ್ನೆಲ್ಲಾ ನೆನಪು ,,
ಭಾವದೂರ ಸಂತೆಯೊಳಗೆ ,
ಕೊಲ್ಲುತಿವೆ ನನ್ನೆದೆಯಾ ಸೀಳಿ ಸೀಳಿ ,,
ತಂಗಾಳಿಯಲ್ಲೂ ಬೆಂಕಿ ಉಗುಳಿ ,,
ನನ್ನ ನೋಡಿ ಹಾಸ್ಯ ಮಾಡಿ ಎನೆನೋ ಹಾಡಿ,,
ಕೆಕೆ ಹಾಕಿ ನಗುತಿವೆ ಕೈ ಮಾಡಿ…..//
ಡಾ ಅನ್ನಪೂರ್ಣ ಹಿರೇಮಠ




ಚೆನ್ನಾಗಿದೆ, ಇಷ್ಟ ಆಯಿತು.
ಹೀಗೆಯೇ ಬರೆಯುತ್ತಿರಿ..!!
ಶುಭವಾಗಲಿ..!!
ವಿರಹದ ಹುಚ್ಚಿದೆ
ಪದಗಳಲಿ ಕಿಚ್ಚಿದೆ
ಕವನವ ಮೆಚ್ಚಿದೆ