ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
“ಮಹಾನ್ ಚೇತನ”

ಗುಬ್ಬಿಯದೇಹ
ಕೃಷ್ಣನ ವೇಗ
ಅರ್ಜುನನ ಗುರಿ
ಏಕಲವ್ಯನ ನಿಖರತೆ
ವಿನಯದ ಪ್ರತೀಕ
ಎದರಿನೆದೆಯಲಿ ನಡುಕ
ಅಜಾತಶತ್ರು ಸರಳಜೀವಿ
ನೇರನುಡಿ ದಿಟ್ಟಹೆಜ್ಜೆ
ಶಾರದಾ ಸಂಪನ್ನ
ಭಾರತಿ ಸಂಜಾತ
ವಶಿಷ್ಠರ ನಿರ್ಧಾರ
ಅಮೇರಿಕಾ ತತ್ತರ
ಪಾಪಿಪಾಕೀ.. ಥರಥರ
ಬೆದರದ ಭಾವ
ಬಗ್ಗದಾ ಜೀವ
ತ್ರಿವಿಕ್ರಮನ ಅವತಾರ
ಭಾರತದ ನೇತಾರ
ಜೈಜವಾನ್
ಜೈಕಿಸಾನ್
ಶಾಸ್ತ್ರೀಗಳ
ಝೇಂಕಾರ
ಮುಗಿಲಿನಲೂ
ಉದ್ಗಾರ !
ಜೈ ಜವಾನ್
ಜೈ ಕಿಸಾನ್
ಶಾಸ್ತ್ರೀಗಳ
ಅಂದಿನಾ ಕರೆ
ಈಗೀನ ಸೋಮವಾರವೂ
ಉಪವಾಸ
ವಿರುವದು ಖರೆ
—————————————————————————————————
ಮಾಮ್ ಮದ್ಗಾರ




