ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಾಂಧೀಜಿಯವರ ವಿಚಾರಧಾರೆಗಳು ಅಹಿಂಸೆ ಸತ್ಯ ವಿಕೇಂದ್ರಿಗಳ ಸ್ವಾತಂತ್ರ್ಯ ಮತ್ತು ಎಲ್ಲರ ಹಕ್ಕುಗಳನ್ನು ಗೌರವಿಸುವಂತಹ ಪರಿಹಾರಗಳನ್ನ ಪ್ರತಿನಿಧಿಸುತ್ತವೆ. ಹಾಗೂ ಸಮಾಜದ ಎಲ್ಲ ವರ್ಗಗಳ ಜನರು ರೈತರು ಕಾರ್ಮಿಕರು ದೀನದಲಿತರು ಮಹಿಳೆಯರು ಎಲ್ಲರ ಸುಖ ಶಾಂತಿಯಿಂದ ಬದುಕಲು ಸಮಾನ ಅವಕಾಶವನ್ನ ಒದಗಿಸುವ ಸಮಾಜವನ್ನು ನಿರ್ಮಿಸುವುದು ಸರ್ವೋದಯ ಮುಖ್ಯ ಗುರಿಯಾಗಿದೆ ಅಷ್ಟೇ ಅಲ್ಲದೆ ಸ್ವದೇಶಿ ಉತ್ಪನ್ನಗಳ ಬಳಸುವುದು ಮತ್ತು ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸುವ ಮೂಲಕ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಗಾಂಧೀಜಿಯವರು ಕರೆ ನೀಡಿದರು ಇದು ಆರ್ಥಿಕ ಸಬಲೀಕರಣಕ್ಕೆ ಮತ್ತು ನಿರುದ್ಯೋಗ ನಿರ್ವಹಣೆಗೆ ಸಹಾಯಕವಾಗಿದೆ ಅಷ್ಟೇ ಅಲ್ಲದೆ ಸ್ಥಳೀಯ ಸಮುದಾಯಗಳ ಅಧಿಕಾರವನ್ನು ಹಸ್ತಾಂತರಿಸುವ ಮೂಲಕ ಜನಸಾಮಾನ್ಯರಿಗೆ ಸಶಕ್ತ ಗೊಳಿಸುತ್ತದೆ.
ಸತ್ಯ ಮತ್ತು ಹಿಂಸೆಯ ಮೂಲಕವೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು ಅಷ್ಟೇ ಅಲ್ಲದೆ ಗಾಂಧೀಜಿಯವರು ಸತ್ಯಗ್ರಹ ಗ್ರಾಮಸ್ವರಾಜ್ ಮತ್ತು ಸರ್ವೋದಯದ ತತ್ವಗಳು ಸಮಾನತೆಯ ನ್ಯಾಯ ಮತ್ತು ಶಾಂತಿಯನ್ನು ಸ್ಥಾಪಿಸಲು ದಾರಿ ತೋರುತ್ತವೆ.

ಅಧಿಕಾರ ಕೇಂದ್ರ ಕರಣಕ್ಕೆ ಬದಲಾಗಿ ವಿಕೇಂದ್ರಿಕರಣ ಮತ್ತು ಗ್ರಾಮಸ್ವರಾಜ್ಯ ಪರಿಕಲ್ಪನೆಯನ್ನು ಅವರು ಪ್ರತಿಪಾದಿಸಿದರು. ಗಾಂಧೀಜಿಯವರ ವಿಕೇಂದ್ರೀಕರಣ ಪ್ರಕೃತಿ ಹಿತವನ್ನು ಗಮನದಲ್ಲಿಟ್ಟುಕೊಂಡು ಜೀವನ ಮತ್ತು ಸ್ಥಳೀಯ ಸಂಪನ್ಮೂಲಗಳ ಬಳಕೆ ತತ್ವಗಳು ಇಂದು ಹೆದರಿಸುತ್ತಿರುವ ಪರಿಸರ ಬಿಕ್ಕಟ್ಟುಗಳಿಗೆ ಪರಿಹಾರ ನೀಡುತ್ತದೆ ಅಷ್ಟೇ ಅಲ್ಲದೆ ಹಂಸೇ ಮತ್ತು ಸತ್ಯದ ಹಾದಿಯನ್ನು ಅನುಸರಿಸುವ ಮೂಲಕ ದ್ವೇಷ ಮತ್ತು ಹಿಂಸಾತ್ಮಕ ಪ್ರವೃತ್ತಿಗಳನ್ನು ತಡೆಯಬಹುದು ಇದು ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಿದೆ ಹಾಗೂ ಗಾಂಧೀಜಿ ಅವರ ಬೋಧನೆಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಆದರೆ ವಿಶ್ವಾದ್ಯಂತ ಅನೇಕರಿಗೆ ಸ್ಪೂರ್ತಿಯಾಗಿವೆ ಅವರ ತತ್ವಗಳು ಎಂದಿಗೂ ಪ್ರಸ್ತುತವಾಗಿವೆ ಮತ್ತು ನಾವು ಎದುರಿಸುತ್ತಿರುವ ಅನೇಕ ಸವಾಲುಗಳಿಗೆ ಪರಿಹಾರವನ್ನು  ಒದಗಿಸುತ್ತವೆ.

ಮಹಾತ್ಮ ಗಾಂಧೀಜಿ ಅವರನ್ನು ರಾಷ್ಟ್ರಪಿತ ಎಂದು ಗೌರವಿಸುತ್ತೇವೆ ಹಾಗೂ ಅವರ ಹೆಸರು ಬೋಧನೆಗಳು ನಿಸ್ ಸಂದೇಹವಾಗಿ, ಅಮರವಾಗಿ ಉಳಿಯುತ್ತದೆ ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡುತ್ತಲೇ ಇರುತ್ತವೆ ತಮ್ಮ ಪ್ರಯತ್ನಗಳ ಉದ್ದಕ್ಕೂ ಮಹಾತ್ಮ ಗಾಂಧೀಜಿಯವರು ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸುವ ಪ್ರಯಾಣದಲ್ಲಿ ಬಹಳಷ್ಟು ಕಷ್ಟಗಳನ್ನ ಅನುಭವಿಸಿದರು ಮತ್ತು ಗಮನಾರ್ಹವಾದ ವೈಯಕ್ತಿಕ ತ್ಯಾಗಗಳನ್ನು ಮಾಡಿದರು ಆದರೆ ಅಹಿಂಸಾತ್ಮಕ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು.

ಮಹಾತ್ಮ ಗಾಂಧೀಜಿ ಅವರು ಗುಜರಾತಿನ ಫೋರ ಬಂದರ್ ನಲ್ಲಿ ಅಕ್ಟೋಬರ್ 2 1869 ರಂದು ಜನಿಸಿದರು ಇವರ ತಂದೆ ಮೋಹನ್ ದಾಸ್ ಕರಮಚಂದ್ ಗಾಂಧಿ ಹಾಗೂ ತಾಯಿ ಪುತಲೀಬಾಯಿ ಇವರು ಆಳವಾದ ಧಾರ್ಮಿಕ ಮತ್ತು ದಾನಶೀಲ ಮಹಿಳೆಯರಾಗಿದ್ದರು.

 ಚಿಕ್ಕ ಬಾಲಕನಾಗಿದ್ದಾಗ ಗಾಂಧೀಜಿಯವರು ತಮ್ಮ ತಾಯಿಯ ಗುಣಗಳನ್ನು ಅಳವಡಿಸಿಕೊಂಡರು ಅವರ ಬಲವಾದ ಮೌಲ್ಯಗಳು ನೈತಿಕ ತತ್ವಗಳು ಮತ್ತು ಸ್ವಯಂ ತ್ಯಾಗದ ಮನೋಭಾವವನ್ನು ಅನುವಂಶಿಕವಾಗಿ ಪಡೆದರು.

ಮಹಾತ್ಮ ಗಾಂಧೀಜಿಯವರ ಪ್ರಭಾವವು ದೂರದವರೆಗೆ ತಲುಪಿದ್ದು ಪ್ರಪಂಚದ ಅತ್ಯಂತ ಹಲವಾರು ಅಂತರಾಷ್ಟ್ರೀಯ ನಾಯಕರಿಗೆ ಸ್ಪೂರ್ತಿಯಾಗಿದ್ದಾರೆ ಅಷ್ಟೇ ಅಲ್ಲದೆ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಜೇಮ್ಸ್ ಬೆವೆಲ್ ,ಮತ್ತು ಜೇಮ್ ಕ್ಲಾಸೆನ್ ಅವರಂತಹ ನಾಯಕರು ಅವರ ಹೋರಾಟದಲ್ಲಿ ಸ್ಪೂರ್ತಿಯನ್ನು ಕಂಡುಕೊಂಡರು ಮತ್ತು ಅವರ ತತ್ವಗಳನ್ನು ಅಳವಡಿಸಿಕೊಂಡರು ಸ್ವತಂತ್ರದ ಹುಡುಕಾಟದ ನೆಲ್ಸನ್ ಮಂಡೇಲ ಕೂಡ ಗಾಂಧೀಜಿ ಅವರ ಬೋಧನೆಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು.

ವಿಶ್ವಸಂಸ್ಥೆಯಿಂದ ಅವರಿಗೆ ದೊರೆತ ಮನ್ನಣೆಯಲ್ಲಿ ಮಹಾತ್ಮ ಗಾಂಧೀಜಿಯವರ ಪರಂಪರೆಯು ಪ್ರಭಾವ ಸ್ಪಷ್ಟವಾಗಿದೆ ಅಕ್ಟೋಬರ್ ಎರಡನ್ನು ಅಂತಾರಾಷ್ಟ್ರೀಯ ಹಿಂಸಾ ದಿನ ಎಂದು ಗೊತ್ತು ಪಡಿಸುವ ಮೂಲಕ ಅವರು ಅವರನ್ನ ಗೌರವಿಸಿದ್ದಾರೆ .

ತಮ್ಮ ಜೀವನದುದ್ದಕ್ಕೂ ಮಹಾತ್ಮ ಗಾಂಧೀಜಿ ಅವರು ಹಲವಾರು ಪ್ರಶಸ್ತಿಗಳನ್ನು ಮತ್ತು ಗೌರವಗಳನ್ನು ಪಡೆದರು ಅವರ ಕೊಡುಗೆಯನ್ನು ವ್ಯಾಪಕವಾಗಿ ಗುರುತಿಸಲಾಯಿತು ಬಹುತೇಕ ಪ್ರತಿಯೊಂದು ರಾಷ್ಟ್ರ ಅವರಿಗೆ ಗೌರವವನ್ನು ಸಲ್ಲಿಸಲಾಗಿದೆ.

ಭಾರತದ ಸ್ವತಂತ್ರ ಹೋರಾಟದಲ್ಲಿ ಹಿಂಸೆಯ ಮಹತ್ವವು ಮಹಾತ್ಮ ಗಾಂಧೀಜಿಯವರ ಪಾಲ್ಗೊಳ್ವಿಕೆಯೊಂದಿಗೆ ಮಹಾತ್ವವನ್ನ ಪಡೆಯಿತು.

*ಅಸಹಕಾರ ಚಳುವಳಿ*
1920 ರಲ್ಲಿ ಜಲಿಯನ್ ವಾಲ್ ಭಾಗ್ ಹತ್ಯಾಕಾಂಡ ಮತ್ತು ಕಠಿಣ ಬ್ರಿಟಿಷ್ ನೀತಿಗಳಿಂದ ಹುಟ್ಟಿಕೊಂಡ ಈ ಚಳುವಳಿಯು ಬ್ರಿಟಿಷ್ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಬಹಿಷ್ಕರಿಸುವಂತೆ ಮಾಡಿತು ಭಾರತೀಯ ಬ್ರಿಟಿಷ್ ನಡೆಸುತ್ತಿದ್ದ ಸಂಸ್ಥೆಗಳು ಮತ್ತು ನಾಗರಿಕ ಸೇವೆಗಳಿಂದ ಹಿಂದೆ ಸೇರಿಸಿದರು ಇದು ಹಿಂಸಾಚಾರವನ್ನು ಆಶ್ರಯಿಸದೆ ಬ್ರಿಟಿಷ್ ಆಡಳಿತದ ಮೇಲೆ ಗಮನಾರ್ಹ ಪರಿಣಾಮ ಬೀರಿತು.

*ಉಪ್ಪಿನ ಸತ್ಯಾಗ್ರಹ ಅಥವಾ ಉಪ್ಪಿನ ಮೆರವಣಿಗೆ*

1930 ರಲ್ಲಿ ಮಹಾತ್ಮ ಗಾಂಧೀಜಿಯವರು ಬ್ರಿಟಿಷರು ಮೀರಿದ ಉಪ್ಪಿನ ಏಕಸ್ವಾಮ್ಯವನ್ನು ಪ್ರತಿಭಟಿಸಿ ಗುಜರಾತ್ನ ದಂಡಿಗೆ 26 ದಿನಗಳ ಪ್ರಸಿದ್ಧ ಹಿಂಸಾತ್ಮಕ ಪಾದಯಾತ್ರೆಯನ್ನು ನಡೆಸಿದರು ಉಪ್ಪಿನ ಕಾನೂನುಗಳನ್ನು ಮುರಿದು ಸ್ಥಳೀಯ  ಉತ್ಪಾದನೆಗಳನ್ನು ಉತ್ತೇಜಿಸಿ ಒಪ್ಪಿನ ಸತ್ಯಾಗ್ರವು ಅಂತಾರಾಷ್ಟ್ರೀಯ ಗಮನ ಸೆಳೆಯಿತು ಮತ್ತು ಸ್ವಾತಂತ್ರ್ಯ ಭಾರತದ ಅಡಿಪಾಯವನ್ನು ಬಲಪಡಿಸಿದ.

ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಲ್ಲದೆ ವಿವಿಧ ಸಾಮಾಜಿಕ ದುಷ್ಕೃತ್ಯಗಳನ್ನು ತೊಡೆದು ಹಾಕಲು ಗಮನಾರ್ಹ ಕೊಡುಗೆಗಳನ್ನು ನೀಡಿದರು ಅವರ ಸಾಧನೆಗಳು ಹಲವಾರು.

*ಉದಾಹರಣೆಗೆ*

*ಭಾರತದ ಸ್ವಾತಂತ್ರ್ಯ ಹೋರಾಟದ ಪ್ರತಿಮೆ*

ಭಾರತೀಯ ಸ್ವತಂತ್ರ ಚಳುವಳಿಯ ಪ್ರಸಿದ್ಧ ನಾಯಕರಾಗಿ ಮಹಾತ್ಮ ಗಾಂಧೀಜಿಯವರು ಉದಾರವಾದಿ ವಿಧಾನವನ್ನು ಅಳವಡಿಸಿಕೊಂಡರು. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಶಾಂತಿಯುತ ಮತ್ತು ಅಹಿಂಸಾತ್ಮಕ ಪ್ರತಿಭಟನೆಗಳನ್ನು ಪ್ರತಿಪಾದಿಸಿದರು ಚಂಪಾರನ್ ಸತ್ಯಾಗ್ರಹ ನಾಗರಿಕ ಸಹಕಾರ ಚಳುವಳಿ ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳುವಳಿಗಳಲ್ಲಿ ಅವರ ನಾಯಕತ್ವವು ಜಾಗತೀಕರಣ ಮತ್ತು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಅಡಿಪಾಯವನ್ನು ಅಲುಗಾಡಿಸಿತು.

ಹಾಗೂ ನಮ್ಮ ಮಹಿಳಾ ಸಬಲೀಕರಣವನ್ನು ಪ್ರತಿಪಾದಿಸಿದರು ಶಿಕ್ಷಣವನ್ನು ಉತ್ತೇಜಿಸಿದರು ಮತ್ತು ಬಾಲ್ಯ ವಿವಾಹವನ್ನು ವಿರೋಧಿಸಿದರು ಭಾರತೀಯ ಸಮಾಜದ ಮೇಲೆ ಶಾಶ್ವತವಾದ ಪ್ರಭಾವ ಬೀರಿದರು.

ಭಾರತದಲ್ಲಿ ಮಹಾತ್ಮ ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ ಹಾಗೂ ಗಾಂಧೀಜಿಯವರ ಜೀವನ ತತ್ವಗಳು ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿವೆ ಮತ್ತು ಆದರ್ಶವಾಗಿವೆ.

1948ರ ಜನವರಿ 30ರಂದು ಮಹಾತ್ಮ ಗಾಂಧೀಜಿಯವರು ನಾಥೂರಾಮ್ ಗೋಡ್ಸೆಯಿಂದ ಎನ್ನುವ ವ್ಯಕ್ತಿಯಿಂದ ಹತ್ಯೆಗೆ ಗೀಡಾದರು.

ಗಾಂಧಿಜಿ ಅವರ ಮೌಲ್ಯಗಳು ಇಂದಿಗೂ ಸಮಾಜಕ್ಕೆ ಮಾದರಿಯಾಗಿವೆ ಅಷ್ಟೇ ಅಲ್ಲದೆ ಬದುಕಿನಲ್ಲಿ ಅಳವಡಿಸಿಕೊಂಡಂತಹ ಹಲವಾರು ವ್ಯಕ್ತಿಗಳ ಬದುಕುಗಳು ಬದಲಾದಂತ ಉದಾಹರಣೆಗಳು ಸಹ ಇವೆ. *ಉದಾಹರಣೆಗೆ*

ತುಕಾರಾಂ ಗೋಲೆ ಎನ್ನುವ ವ್ಯಕ್ತಿ ಬಾಲ್ಯದಲ್ಲೇ ತುಂಬಾ ಸರಳ ವ್ಯಕ್ತಿಯಾಗಿದ್ದು ಅವನು ಬೆಳೆದಂತಹ ಪರಿಸರದಲ್ಲಿ ಅವನ ಕೆಲ ಸಹಪಾಠಿಗಳು ನಾವು ಕ್ರೂರ ವ್ಯಕ್ತಿಯಾಗಿ ಪರಿಣಾಮ ಹೊಂದುತ್ತಾನೆ ಆಗ ಅವರ ಕುಟುಂಬದವರೆಲ್ಲ ಮನನೊಂದು ಎಂತಹ ಮಗ ಎನ್ನುವಂತಹ ಜೀವನ ಸಾಗಿಸುವ ತುಕಾರಾಂ ಗೋಲೆ ಜೈಲುವಾಸ ಅನುಭವಿಸುತ್ತಾರೆ. ಕಾಲ ಕಳೆದಂತೆ ಜೈಲು ಗಳಿಗೆ ಪ್ರತಿ ವಾರಕ್ಕೊಮ್ಮೆ ಉಪನ್ಯಾಸವನ್ನು ನೀಡಲು ಬರುತ್ತಿದ್ದ ಅಂತಹ ಗುರುಗಳೊಂದಿಗೆ ಅವನ ಸಂವಾದ ನಡೆದು ಗಾಂಧೀಜಿಯವರ ತತ್ವಗಳು ಎನ್ನುವ ಪುಸ್ತಕವನ್ನು ಆತ ಪ್ರತಿನಿತ್ಯ ಓದಿ ಇತರರಿಗೂ ಕೂಡ ಮಾದರಿಯಾಗಿ ಬದುಕು ಬದಲಿಸಿಕೊಳ್ಳುತ್ತಾನೆ ಈತನು ಪ್ರಸ್ತುತವಾಗಿ ಎಲ್ಲಾ ಕಡೆಗಳಲ್ಲಿ ತಿರುಗಾಡಿ ಗಾಂಧೀಜಿಯವರ ತತ್ವಗಳನ್ನ ಮತ್ತು ಮಹತ್ವಗಳನ್ನು ಸಾರುತಿದ್ದಾನೆ ಅಷ್ಟೇ ಅಲ್ಲದೆ ತನ್ನ ವ್ಯಕ್ತಿತ್ವವನ್ನು ಬದಲಿಸಿಕೊಂಡು ಮತ್ತೆ  ಕುಟುಂಬದೊಂದಿಗೆ ಜೀವನವನ್ನು ಸಾಗಿಸುತ್ತಿದ್ದಾನೆ.

ಪ್ರತಿಯೊಬ್ಬರೂ ಕೂಡ ಅಷ್ಟೇ ಜೀವನದಲ್ಲಿ ಗಾಂಧೀಜಿಯವರ ತತ್ವಗಳನ್ನು ರೂಢಿಸಿಕೊಂಡಾಗ ಒಳ್ಳೆಯ ಮಾರ್ಗದರ್ಶನವಾಗಿ ಪರಿಣಾಮ ಬೀರುತ್ತದೆ.ಸರ್ವಕಾಲಕ್ಕೂ ಪ್ರಸ್ತುತ ಅವರ ತತ್ವಗಳು.


ನಾಗರತ್ನ .ಎಚ್
ಹವ್ಯಾಸಿ ಬರಹಗಾರರು
ಗಂಗಾವತಿ ಕೊಪ್ಪಳ ಜಿಲ್ಲೆ

About The Author

1 thought on ““ಉನ್ನತಿ ಮತ್ತು ಕಲ್ಯಾಣವೇ ಸರ್ವೋದಯ”ವಿಶೇಷ ಲೇಖನ ನಾಗರತ್ನ .ಎಚ್”

Leave a Reply

You cannot copy content of this page

Scroll to Top