ಕಾವ್ಯ ಸಂಗಾತಿ
ನಿರಂಜನ ಕೆ ನಾಯಕ
“ಬೆನ್ನಟ್ಟಿದ ಮಳೆ”


ಬರುತಿರುವೆ ಮಳೆಯೇ,
ಭುವಿಯ ಬಟ್ಟಲು
ತುಂಬಿದರೂ ನೀ
ಎಡಬಿಡದೇ!!
ಎಳೆಯ ಮಗು
ರಚ್ಚೆ ಹಿಡಿದಂತೆ,
ನೀ ಸುಲಭದಿ
ನಿಲ್ಲುವವಳಲ್ಲ!!
ಕಪ್ಪು ಮೋಡದ
ಆಚೆಯ ತಿಳಿಮುಗಿಲ
ನಾ ಮರೆಯುತಿಹೆ
ನೆರಳಡಿಯಲ್ಲಿ!!
ತುಂಬುತಿಹ ನೀರು
ಸೇರಿದೆ ಶ್ವಾಸದಿ,
ಪ್ರಾಣಕೆ ಮೃತ್ಯು
ತಪ್ಪದು!!
ಕುಡಿಯುವ ನೀರು
ಜೀವಕೆ ಕುತ್ತಾದರೆ,
ಇನ್ನೆಲ್ಲಿಯ ಉಳಿಗಾಲ
ಬದುಕಿಗೆ!!
ನಿರಂಜನ ಕೆ ನಾಯಕ



