ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಮಿಂಚುಳ್ಳಿಯ ಹೊಂಚು”


ಮಿಂಚುಳ್ಳಿಯ ಹೊಂಚು
ತೋಟದ ಹಲ್ಲಿಗೆ ಮರಣದ ನಂಟು
ಇದರ ಜೀವ ಭಯ
ಅದರ ಉದರ ನಿಮಿತ್ತದ ಕಾಯ!
ಸುತ್ತ ಮುತ್ತಲೂ
ಜೀವಿಸಿರುವ ಜೀವಿಗಳು,
ಒಳಗಿರುವ ಹೊಂಚು ಹಾಕುವ ಕನಸುಗಳು
ನನಸಾಗಿಸ ಬೇಡ ತಮ್ಮ
ವಿಚ್ಛಿದ್ರಕಾರಿ ಮನಸ್ಸುಗಳ,
ಆತಂಕಕಾರಿಯಾಗ ಬೇಡ ನೀ
ಸುಂದರಿ ಓಹ್ ಮಿಂಚುಳ್ಳಿ!
ಆದರೂ ನೀ ಎನ್ ಮಾಡತಿ
ಸುಂದರಿ ಓಹ್ ಮಿಂಚುಳ್ಳಿ
ಎಲ್ಲ ಅದರದರ ಪ್ರಕೃತಿ
ಮಿಂಚುಳ್ಳಿಯ ಹಲ್ಲಿಗೆ
ನಮ್ಮ ತೋಟದ ಹಲ್ಲಿ!
*ಸ್ವಾಹಾ*
——————————
ಡಾ ಡೋ ನಾ ವೆಂಕಟೇಶ




Nice
Thanks
ತುಂಬಾ ಚೆನ್ನಾಗಿ ಬಂದಿದೆ.
thank you
Super
ಅದು ಮೀಂಚುಳ್ಳಿ, ಮಿಂಚುಳ್ಳಿ ಅಲ್ಲ.