ಕಾವ್ಯ ಸಂಗಾತಿ
ಡಾ ಸುರೇಶ ನೆಗಳಗುಳಿ
ಗಜಲ್

ಹಗಲು ದಣಿಸಿ ಇರುಳು ಮಣಿಸಿ ಕಾ *ಯ* ಮಣಿಸಿ *ದೆಯಲ್ಲಾ* ನೀನು
*ಮುಗಿಲ ಸರಿಸಿ ಮಳೆಯ ಸುರಿಸಿ ಇಳೆ *ಯ” ತಣಿಸಿ *ದೆಯಲ್ಲಾ* ನೀನು*
ರವಿಯ ತಾಣ ಕಡಲಿಗಾಯಿತೇನು ನಡೆದು ಬಳಲಿ ಹಗಲಲಿ
ಸವಿಯ ತಿನಿಸಿ ಕಹಿಯ ಬಿಸುಟಿ ಗೇ *ಯ* ಕುಣಿಸಿ *ದೆಯಲ್ಲಾ* ನೀನು
ಹರೆಯವೇಕೆ ನಿಲದ ನೀರು ಬಾಳಿನೊಡನೆ ಎನುವ ಪ್ರಶ್ನೆಯೇತಕೆ
ನೆರೆದ ಕೇಶ ಹರಿಸಿ ಕರದಿ ಒಲವ ಬಲೆ *ಯ* ಇರಿಸಿ *ದೆಯಲ್ಲಾ* ನೀನು
ಮುಗಿವುದುಂಟೆ ತಾರೆ ಗಣಿತ ಮಿನುಗುತಿರಲು ಗಗನದಿ
ರಗಳೆಯಲ್ಲವೆನುತ ಮೊಗದಿ ನಗೆ *ಯ* ಹರಿಸಿ *ದೆಯಲ್ಲಾ* ನೀನು
ಬಿಡೆನು ಹರಣ ಹಾರಿ ಹೋಗುವಂಥ ಚಣವು ಬಂದರೂ
ನೆಡಲು *ಈಶ* ನೆಡೆಗೆ ಒಲವು ಕವಿ *ಯ* ಮಾಡಿ *ದೆಯಲ್ಲಾ* ನೀನು
ಡಾ ಸುರೇಶ ನೆಗಳಗುಳಿ





ಧನ್ಯವಾದ