ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ಜೋಕರ್”

ಜೀವನವೆಂಬ,
ನಾಟಕದ ರಂಗಮಂಟಪದಲ್ಲಿ,
ನಾವೆಲ್ಲರೂ ಒಂದೊಂದು
ಪಾತ್ರದಾರಿಗಳಷ್ಟೇ,!
ಹಾಸ್ಯಗಾರನೆಂಬ
ಕಲಾವಿದನಾಗಿಯೂ ಒಂದು ಪಾತ್ರ,
ತೋರಿಸಲಾಗದ ದುಃಖವನ್ನು
ಅಡಗಿಸಿ ನಗಿಸುವುದು ಮುಖವಾಡವಷ್ಟೇ,!
ನೋವುಗಳೇ ತುಂಬಿದ್ದರೂ
ಬಣ್ಣ ಬಣ್ಣದ ಮುಖ ಭಾವಗಳು
ಅದರಲ್ಲೊಮ್ಮೆ ಕಣ್ಣಾಡಿಸಲು
ಸಾವಿರಾರು ನೋವಿನ ಕಂತೆಗಳಷ್ಟೇ,!




