ಕಾವ್ಯ ಸಂಗಾತಿ
ರಾಶೇ..ಬೆಂಗಳೂರು ಅವರ
ಎರಡು ಕಿರು-ಕವಿತೆಗಳು

ಕಾನೂನು
ರಸ್ತೆಯ ಗುಳಿ
ಮುಚ್ಚಲು
ಸಮಯ ನಿಗಧಿ
ಪಡಿಸಿದೆ ನಮ್ಮ ಕಾನೂನು
ಗುಳಿ ಕೆನ್ನೆಯ
ಬೆಡಗಿಯ ಮೋಹಕ
ನಗುವ ಗುಂಡಿಗೆ ಬಿದ್ದರೆ
ನಮ್ಮ ರಕ್ಷಿಪುದೆ
ಈ ಕಾನೂನು
ದೇವರ ದೇವ
ಮೂಷಿಕ
ವಾಹನವೇರಿದ
ವಿನಾಯಕ
ಬೆನಕ
ದೇವರ ದೇವ
ವಿಘ್ನೇಶ್ವರ
ಗಣನಾಯಕ
ಪ್ರಥಮ ಪೂಜಿತ
ಏಕದಂತ
ಗೌರಿಸುತ
ಲೋಕ ಪೂಜಿತ
ಗಜಾನನ
ರಾಶೇ..
ಬೆಂಗಳೂರು




