ಕೆ.ಎಂ. ಕಾವ್ಯ ಪ್ರಸಾದ್ ಅವರ ʼನನ್ನ ಮನಸಿನ ಕವಿತೆʼ

ಹೊಡೆದ ನನ್ನ ಬದುಕಿನ ಕವಲು ದಾರಿಯಲಿ
ಸಾಗಿದೆ ಪಯಣ ಮುಗಿಯದ ಅಂತ್ಯವಿಲ್ಲಿ!
ನನ್ನ ಬದುಕು ಜಟಕಾ ಕುದುರೆಯಂತೆ
ಅರಿವಿಲ್ಲದೆ ಓಡುತಿದೆ ಎಲ್ಲೂ ನಿಲ್ಲದಂತೆ!!

ಬಾಳಿನ ನೌಕೆಯ ದಾರಿಯಲಿ ದೀಪವೇ
ಹಾರುತಿದೆ ಬೆಳಗಿಸುವ ಕೈಗಳು ಎಲ್ಲಿದೆ!
ಕಾಣದ ಕಡಲನು ನಾ ತಬ್ಬಿ ಇಡಿದಿರುವೆ
ಕೇಳದೆ ಮನಸು ಹಗಲಿರುಳಿಗೆ ಸೋತಿದೆ!!

ಲೋಕದ ಕಣ್ಣಿಗೆ ನಾನೀಗ ರಾದೆಯಾದೆ
ನನ್ನವನ ಕಣ್ಣಿಗೆ ಮುಪ್ಪಿನ ಕುರುಪಿಯಾದೆ!
ಯಾವ ಮೋಹದ ಪಾಶಕ್ಕಿಲ್ಲಿ ಬಂದಿಯಾದೆ
ಕೊರಳಲಿ ಬಿದ್ದ ಉರುಳನು ಬಿಡಿಸಲಾಗದೆ!!

ನನ್ನ ಮನಸಿನ ಕವಿತೆಯನು ಬರೆಯಬೇಕಿದೆ
ನೋವಿನ ಹೃದಯದ ಮುಖವ ತಿಳಿಯದಾದೆ!
ನನ್ನ ಜೀವನ ನರಕದ ಬಾಗಿಲನ್ನೇ ಮುಟ್ಟಿದೆ
ಹೊಸ ಬಾಳಿನ ದಾರಿಯನ್ನೇ ಮರೆತು ಹೋದೆ!!


Leave a Reply