ಕಾವ್ಯ ಸಂಗಾತಿ
ಕೆ.ಬಿ.ವೀರಲಿಂಗನಗೌಡ್ರ
ʼನೋಟೀಸ್ʼ

ನನಗೆ
ನೋಟೀಸ್ ಹೊಸತಲ್ಲ
ಆಗಾಗ ಜಾರಿಯಾಗತಿರ್ತಾವೆ
ತಣ್ಣಗೆ ಉತ್ತರವನ್ನೂ ರವಾನಿಸುವೆ
ಖುಷಿ ಅಂದ್ರೆ
ಬರೆದ ಉತ್ತರಗಳೆಲ್ಲವೂ
ಗಟ್ಟಿ ಕವಿತೆಗಳಾಗಿ ಅಚ್ಚಾಗಿವೆ
ನನ್ನನ್ನೂ ಒಳಗೊಳಗೆ ತಿಳಿಗೊಳಿಸಿವೆ
ನಿನ್ನ
ನೋಟೀಸ್‌ಗಳು
ನನ್ನನ್ನು ಬೆಂಡಾಗಿಸದೇ
ಬಂಡಾಯ ಕವಿಯಾಗಿಸಿವೆ
ಹೇಳೀಗ ‘ಹೇಗೆ ಋಣ ತೀರಿಸಲಿ?’
ನನ್ನ
ಪ್ರೀತಿಯ ಪ್ರಶ್ನೆಗೆ
ಮತ್ತೆ ನೋಟೀಸ್ ನೀಡಿದರೆ
ಅರೆಬೆತ್ತಲೆಯಾಗಿರುವ ಕಥೆಯನ್ನು
ಪೂರ್ಣ ಬೆತ್ತಲಾಗಿಸಿ ಋಣಮುಕ್ತನಾಗುವೆ.
ಕೆ.ಬಿ.ವೀರಲಿಂಗನಗೌಡ್ರ.




