ಯುವ ಸಂಗಾತಿ
ಸತೀಶ್ ಬಿಳಿಯೂರು
“ಯುವ ಜನತೆ ಮಾನಸಿಕ ಸ್ಥಿರತೆ
ಕಳೆದುಕೊಳ್ಳುತ್ತಿದ್ದಾರೆಯೇ?”


ಯುವ ಜನತೆ ಮಾನಸಿಕ ಸ್ಥಿರತೆ ಕಳೆದುಕೊಳ್ಳುತ್ತಿದ್ದಾರೆಯೇ?
ಯುವ ಜನತೆ ದೇಶದ ಸಂಪತ್ತು.ಯುವಕರು ಮತ್ತು ಯುವತಿಯರು ಸಮಾಜದ ಬೆನ್ನೆಲುಬು.ಯುವಶಕ್ತಿ ಒಂದಾದರೆ ಸದೃಢ ಸಮಾಜ ನಿರ್ಮಾಣವಾಗಲು ಸಾದ್ಯ.ಯುವ ಜನತೆ ರಾಷ್ಟ್ರದ ಏಳಿಗೆಗಾಗಿ ಶ್ರಮಿಸುವತ್ತ ಮಹತ್ವದ ಹೆಜ್ಜೆ.ಉದ್ಯಮಶೀಲ ಕ್ರಿಯಾತ್ಮಕ ಅಭಿವೃದ್ಧಿಯ ರಚನೆಯಲ್ಲಿ ಸೃಜನಶೀಲವಾಗಿ ಶ್ರಮಿಸುತ್ತಾರೆ.ಎಲ್ಲಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಸಕಾರತ್ಮಕ ಸ್ಪಂದಿಸಿ ದೇಶದ ಭವಿಷ್ಯವನ್ನು ರೂಪಿಸುತ ಯಶಸ್ಸಿನ ಪಥವನ್ನು ತಲುಪಲು ಯುವ ಜನತೆ ನಿರ್ಣಯಕವಾಗಿದೆ.
ಯುವ ಜನರ ಅಲೋಚನೆ , ದೃಷ್ಟಿಕೋನ ,ಹೊಸ ಹೊಸ ಯೋಜನೆ ಪ್ರಗತಿ ಹಾಗೂ ಸಮಾಜದ ಬದಲಾವಣೆಗೆ ಮಾರ್ಗದರ್ಶನ.ಎಲ್ಲ ಕಡೆಯಿಂದ ವೈವಿಧ್ಯಮಯ ಯೋಚನೆಗಳು ಅಭಿವೃದ್ಧಿಗೆ ಪೂರಕ ಅಂಶವಾಗಿದೆ.ಯಾವುದೇ ಸವಾಲುಗಳನ್ನು ಎದುರಿಸುವ ಶಕ್ತಿ ಹೊಂದಿರುತ್ತಾರೆ .ತಂತ್ರಜ್ಞಾನ, ಶಿಕ್ಷಣ,ಆರೋಗ್ಯ,ದೈಹಿಕ ಸಾಮರ್ಥ್ಯ ತನ್ನಲ್ಲಿರುವ ಉತ್ಸಾಹದಿಂದ ದೇಶವನ್ನು ಬೆಳವಣಿಗೆ ಮತ್ತು ಸಮೃದ್ಧಿಯತ್ತ ಕೊಂಡೊಯ್ಯುವುದು ಪ್ರಗತಿಪರ ರಾಷ್ಟ್ರ ನಿರ್ಮಾಣ ಮಾಡುವ ಕನಸು ನನಸಾಗಿಸುವಲ್ಲಿ ಯುವ ಜನರು ಮುಖ್ಯ ಪಾತ್ರ ವಹಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಯುವ ಜನತೆ ತನ್ನ ಜೀವನದ ಮೇಲೆ ಆತ್ಮಬಲ ,ವಿಶ್ವಾಸ,ನಂಬಿಕೆ ಕಳೆದುಕೊಳ್ಳುತ್ತಿದೆ.ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳದೆ ಯಾವುದೇ ಸಣ್ಣ ವಿಷಯಕ್ಕೂ ಕಷ್ಟ ನಷ್ಟದ ಸವಾಲುಗಳನ್ನು ಎದುರಿಸಲು ಭಯಪಡುತ್ತಿದೆಯೇ?ಸಮಸ್ಯೆಗಳು ಸುಳಿದಾಗ ಕೆಲವರು ಮಾದಕ ವ್ಯಸನಿಗಳಾಗಿ ಬಿಡುತ್ತಾರೆ.ಸಣ್ಣ ಸಣ್ಣ ಕಾರಣಕ್ಕೂ ಮನನೊಂದು ಜೀವಾಂತ್ಯಗೊಳಿಸುತ್ತಿರುವ ವಿದ್ಯಾರ್ಥಿಗಳು.ಪ್ರೇಮ ಪ್ರಣಯಗಳಿಗೆ ಬಲಿಯಾಗುತ್ತಿರುವ ಯುವಕ -ಯುವತಿಯರು,ಅನೇಕರು ಸಮಾಜದಲ್ಲಿ ಕಷ್ಟ- ನಷ್ಟ ,ಸಾಲ ,ಮಾನ ಅಪಮಾನಕ್ಕೆ ಅಂಜಿಕೆ ಪಟ್ಟು ಸಾಯುವವರ ಸಂಖ್ಯೆ ಹೆಚ್ಚಾಗಿದ್ದು.ಇದರಲ್ಲಿ 30%ದಷ್ಟು ಅಪ್ರಾಪ್ತರೇ. ಹಿಂದಿನ ಕಾಲದಲ್ಲಿ ಎಷ್ಟೇ ಸಮಸ್ಯೆಗಳು ಬಂದರು ಯೋಚಿಸಿ ಬಗೆಹರಿಸುತಿದ್ದರು ,ಈಗಿನವರು ಪ್ರತಿ ವಿಷಯಗಳಿಗೂ ಅತಿಯಾದ ಯೋಚನೆ ಅದೇ ಮಾನಸಿಕವಾಗಿ ಖಿನ್ನತೆಗೊಳಗಾಗಿ ತಾಳ್ಮೆ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವತ್ತ ಮನಸೋಲುತ್ತಾರೆ.ಇದಕ್ಕೆ ಮನೆಮಂದಿಗಳ ಒತ್ತಡ ಅಥವಾ ಸಮಾಜಿಕ ಜಾಲತಾಣಗಳೇ ಕಾರಣ ದೈಹಿಕ ಶಕ್ತಿಯ ಕೊರತೆಯೇ ತಿಳಿಯದಾಗಿದೆ .ಇದರಿಂದ ದೇಶದ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.ಯುವ ಜನತೆ ಈ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ವಿಷಾದನೀಯ.
ಯಾವುದೇ ಸವಾಲು ಬಂದರು ಎದುರಿಸುವ ಮತ್ತು ಹೆತ್ತವರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಪ್ರೀತಿಯನ್ನು ಕಳೆದುಕೊಳ್ಳುತಿದ್ದೀರಿ.ಯಾವುದೇ ಸಮಸ್ಯೆಯನ್ನು ಮನೆ ಮಂದಿ ಸಂಬಂಧಿಕರು ಹಿರಿಯರು ಅಥವಾ ಸ್ನೇಹಿತರ ಮುಂದೆ ಹೇಳಿಕೊಂಡು ಉತ್ತರ ಹುಡುಕುವ ಕೆಲಸ ಮಾಡಿದರೆ ಯಾವುದೇ ಸಮಸ್ಯೆ ದೊಡ್ಡದಾಗುವುದಿಲ್ಲ.ಪರಿಹಾರವು ಸಿಗಬಹುದು ಅದನ್ನು ಬಿಟ್ಟು ಮನಸ್ಸಿನ ತುಂಬ ಪ್ರಶ್ನೆಗಳನ್ನೇ ತುಂಬಿಕೊಂಡು ಯಾರಲ್ಲೂ ಹೇಳದೆ.ಮಾನಸಿಕವಾಗಿ ಕೊರಗಿ ಸಾಯುವುದು ಸೂಕ್ತವಲ್ಲ.
ಜೀವನದಲ್ಲಿ ನೂರಾರು ಸಮಸ್ಯೆಗಳು ಎದುರಾಗಬಹುದು ಯಾವುದೇ ಸಮಸ್ಯೆಗೂ ತಾಳ್ಮೆ ಅಗತ್ಯ.ದೃತಿಗೆಡದೆ ತಾಳ್ಮೆಯಿಂದ ಒಂದೊಂದೆ ಹೆಜ್ಜೆಯಿಟ್ಟು ಸಾಗಿದರೆ ಯಾವ ಸಮಸ್ಯೆ ಅತಿಯಾಗಿ ಕಾಡುವುದಿಲ್ಲ.ಇಲ್ಲಿ ಈ ಜಗತ್ತೇ ನಂಬಿಕೆಯಿಂದ ನಿಂತಿರುವುದು .ಬಲವಾದ ಆತ್ಮವಿಶ್ವಾಸ.ನಂಬಿಕೆ.ಮನೋಶಕ್ತಿ ದೃಢವಾಗಿದ್ದರೇ ಯಾವುದೇ ಸವಾಲು ಸುಲಭವಾಗಿ ಸ್ವೀಕರಿಸಬಹುದು.
ಎಲ್ಲದಕ್ಕೂ ಸಾವೇ ಮೂಲವಲ್ಲ.ಯುವ ಜನತೆಯ ಮನಸನ್ನು ಹತೋಟಿಗೆ ತಂದು ಮನಃಪರಿವರ್ತನೆಗೆೊಳಿಸಬೇಕಾದ ಅನಿವಾರ್ಯತೆ ನಮ್ಮ ಮೇಲಿದೆ.ದೇಶದ ಭವಿಷ್ಯ ಯುವ ಜನರ ಕೈಯಲ್ಲಿದೆ.ಹೆತ್ತವರು ಹೆತ್ತು ಸಾಕಿ ಕಷ್ಟಪಟ್ಟು ಶಿಕ್ಷಣ ಕೊಡಿಸಿ ನೀವು ದಾರಿ ತಪ್ಪಿ ಸಾಯುವ ಹಂತಕ್ಕೆ ತಲುಪಿದರೆ ಹೆತ್ತವರ ಪ್ರೀತಿ ,ವಾತ್ಸಲ್ಯ ,ಮಮತೆ ,ನಂಬಿಕೆಗೆ ಬೆಲೆಯೆಲ್ಲಿದೆ. ಸಮಾಜದಲ್ಲಿ ಗೌರವಯುತ ವ್ಯಕ್ತಿಯಾಗಿ ಕಾಣುವುದೇ ಪ್ರತಿಯೊಬ್ಬ ಹೆತ್ತವರ ಆಸೆಯಾಗಿರುತ್ತದೆ.ಅವರ ಕನಸನ್ನು ನನಸಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಮನಸನ್ನು ಯಾವತ್ತು ಬೇರೆಡೆ ಸೆಳೆಯದೆ ನಮ್ಮ ಭವಿಷ್ಯ ರೂಪಿಸುವಲ್ಲಿ ಪ್ರಮಾಣಿಕವಾಗಿ ಶ್ರಮಿಸೋಣ..
ಸತೀಶ್ ಬಿಳಿಯೂರು




ಉತ್ತಮವಾದ ಸಂದೇಶ ಸರ್
ಯುವ ಜನತೆಗೆ ಆತ್ಮವಿಶ್ವಾಸವನ್ನು ಮೂಡಿಸುವ ಲೇಖನ