ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರೀತಿಯೆಂದರೆ ಕೇವಲ ಪ್ರೀತಿ ಅಲ್ಲ ಪ್ರೀತಿ ಅನ್ನೋದು ಕರುಣೆ,ಮಮತೆ, ಅನುಕಂಪ ,ತ್ಯಾಗ  ಅನುರಾಗದ ಸಮ್ಮಿಲನ. ನಾವೆಲ್ಲರು ಪ್ರೇಮ ಸ್ವರೂಪಿಗಳು,ಪ್ರೇಮದಿಂದಲೇ ಜನಿಸಿ,ಪ್ರೇಮದಿಂದಲೇ ಬದುಕಿ,ಕೊನೆಗೆ ಪ್ರೇಮದಿಂದಲೇ ಐಕ್ಯ ವಾಗಿರೋ,ಒಬ್ಬನೇ ಸೂರ್ಯ ಹಲವು ನೀರಿನ ಪಾತ್ರೆಗಳಲ್ಲಿ ಹೇಗೆ ಪ್ರತಿಫಲನಗೊಳ್ಳುವನೋ ಅದೇ ತರ ಎರಡು ಮನದಲ್ಲಿ ಪ್ರೇಮವಿದ್ದಲಿ ಅದು ಇನ್ನೊಬ್ಬರಲ್ಲಿ ಪ್ರತಿಫಲನ ವಾಗುತ್ತದೆ ಮತ್ತೆ ನಮಗೆ ಹಿಂತಿರುಗಿ ಬರುತ್ತದೆ

ಪ್ರೇಮವೆಂದರೆ ಜವಾಬ್ದಾರಿ, ದುಡಿಮೆ ,ಕಾಳಜಿ ಹೊರತು ಮೋಹ, ತಿರಸ್ಕಾರವಲ್ಲ. ನಾವು ನಮ್ಮ ಹೃದಯದಲ್ಲಿ ಪ್ರೇಮದ ಅನುಭವ ಮಾಡಿಕೊಳ್ಳಬೇಕಾದರೆ ಮೊದಲು ನಾವು ಇತರರನ್ನು ಪ್ರೀತಿಸಲು ಆರಂಭಿಸಬೇಕು

ಮದುವೆಯೆಂದರೆ ಹೊಂದಾಣಿಕೆ.. ಮದುವೆಗೆ ಮೊದಲು ಇಬ್ಬರ ಆಸಕ್ತಿ ಏನೇ ಇರಲಿ, ಮದುವೆಯ ನಂತರ ತಮಗಿಷ್ಟವಿಲ್ಲದಿದ್ದರೂ ಸಂಗಾತಿಯ ಆಸಕ್ತಿಗೆ ಬೆಲೆ ಕೊಟ್ಟು ಪ್ರೀತಿ  ತ್ಯಾಗಗಳನ್ನು ಮಾಡಬೇಕು ಏಕೆಂದರೆ ಮದುವೆಯ ನಂತರ ನೀನು ನಾನು ಅಲ್ಲ ನಾವು,ಮತ್ತೆ ನಂದು ನಿಂದು ಅಲ್ಲ ನಮ್ಮದು ಅಂತಾಗಿರುತ್ತದೆ ನಮನ್ನು ನಂಬಿದವರಿಗೆ, ಪ್ರೀತಿಸುವವರಿಗೆ ಪ್ರೀತಿ ಮತ್ತು ಸಮಯವನ್ನು ನೀಡುವಲ್ಲಿ ಎಂದಿಗೂ ನಾವು ಶ್ರೀಮಂತರಾಗಿ ಇರಲೆ ಬೇಕಾಗಿದೆ
ಒಬ್ಬ ಪ್ರೇಮಕವಿ ಬಹಳ ಅದ್ಭುತವಾಗಿ ಬರೆಯುತ್ತಾರೆ:

ಆಡುವ ಮಾತಿನಲ್ಲಿ ಸುಳಿದ್ರೆ ಸಹಿಸ್ಕೋಬಹುದು ಆದರೆ
ತೋರಿಸುವ ಪ್ರೀತಿಯಲ್ಲಿ ಸುಳ್ಳಿದ್ರೆ ಸಹಿಸಿಕೊಳ್ಳುವುದು ಹೇಗೆ?
ಪ್ರೀತಿಗಾಗಿ ಪ್ರೀತಿ ಇರಬೇಕು ಹೊರತು
ಪ್ರೀತಿ ಹೆಸರಿನಲ್ಲಿ ಮತ್ತೊಂದನ್ನು ಪಡೆದುಕೊಳ್ಳುವ ಪ್ರಯತ್ನ ಇರಬಾರದು ಅಂತ

ಮದುವೆ-ಸಂಗಾತಿ ಯಾಗೋ ವ್ಯಕ್ತಿ ಹಾಗಿರಬೇಕು, ಹೀಗಿರಬೇಕು  ಅಂತ ಸಂಗಾತಿಯನ್ನು ಮದುವೆ ಯಾಗೋದಲ್ಲ ಮದುವೆಯಾದ ಮೇಲೆಯೂ ನಮ್ಮ ನಿರೀಕ್ಷೆಗೆ ತಕ್ಕಂತೆಯೇ ಒಂದಷ್ಟು ಆಸ್ತಿ-ಪಾಸ್ತಿ ,ಹಣ- ಅಂತಸ್ತು, ಮಾಡ್ಕೊಂಡೆ ಇರ್ಬೇಕು ಅಂತ ಅಲ್ಲ ಇವಾಗ ತಾನೇ ಜೀವನವನ್ನು ಕಟ್ಟಿಕೊಳ್ಳುವಂತಹ ಹಾಗೆಯೇ ಹಣ ಹೊಂದಿರುವ ವ್ಯಕ್ತಿಗಿಂತ ಹೊಣೆ ಹೊರುವ ಯುವಕನನ್ನು  ಮದುವೆ ಯಾದಾಗ ಜೀವನದಲ್ಲಿ ಬರುವ ಅನೇಕ ಏರಿಳಿತವನ್ನು ,ಸೋಲು ಗೆಲುವುಗಳನ್ನು ಕೋಪ ತಾಪ ಗಳನ್ನು ಸಹಮತಿಯೊಂದಿಗೆ ಪ್ರೀತಿಸಿ ನೋಡಿದ್ದಾಗ ಜೀವದಲ್ಲಿ ಬರುವ ಕೆಟ್ಟ ದಿನಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಇಬ್ಬರೂ ಸಾಮರ್ಥ್ಯಕ್ಕೆ ಅನುಗುಣವಾಗಿ ದುಡಿಯಬೇಕು ಮತ್ತು ಅವಶ್ಯಕತೆಗೆ ಅನುಗುಣವಾಗಿ ಪ್ರೀತಿಯಲ್ಲಿ ಪರಿಪೂರ್ಣತೆಯನ್ನು ಪಡೆಯಬೇಕು

 *ಭಾವನೆಗಳಿಗೆ ಬೆಲೆ ಕೊಡುವ ವ್ಯಕ್ತಿ ಬದುಕಿನಲ್ಲಿ ಬಡವನಾದರು ಆತನೊಂದಿಗೆ ಬದುಕು ಬಂಗಾರವಾಗುತ್ತದೆ .*

ಒಲವಿಲ್ಲದ ಗೆಲುವಿನಲ್ಲಿ ನಲಿವು ಸಿಗಲಾರದು
ಪ್ರೀತಿ ಇಲ್ಲದ ಅಪ್ಪುಗೆಯಲ್ಲಿ ಪ್ರೇಮ ಅರಳದು

ನಮ್ಮೆಲ್ಲರ ಜೀವನದ ಒಂದು ಮಹತ್ವದ ತಿರುವು ಈ ಮದುವೆ. ನಿಜವಾದ ಸಂಬಂಧ ಅಥವಾ ಪ್ರೀತಿ ಎಂದರೆ ಕಾಳಜಿ ,ಗೌರವ,ನೋವು,ತ್ಯಾಗ ಮತ್ತು ಪ್ರೀತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮದುವೆಗಳು ಆರಂಭದಲ್ಲಿಯೇ  ಬಿರುಕು ಮೂಡಿಸುವುದ್ಯಾಕೆ? ಜಾತಕ ಹೊಂದಿಸಿ, ಗಂಡು-ಹೆಣ್ಣು ಪರಸ್ಪರ ಒಪ್ಪಿಗೆ ನೀಡಿ ಇಷ್ಟಾನಿಷ್ಟಗಳನ್ನೆಲ್ಲ ಹಂಚಿಕೊಂಡು, ಕಷ್ಟದಲ್ಲೂ-ಸುಖದಲ್ಲೂ ಭಾಗಿಯಾಗುತ್ತೇವೆ ಅಂತ ಭಾಷೆ ಕೊಟ್ಟು ಮಾಡಿಕೊಂಡ ಮದುವೆಗಳು ಯಾಕೆ ಡೈವೋರ್ಸಿನಲ್ಲಿ ಅಂತ್ಯವಾಗುತ್ತಿವೆ? ನಮ್ಮ ಹೃದಯಗಳು ಮರುಭೂಮಿಗಳಾಗಿವೆ ಅವುಗಳಿಗೆ ಪ್ರೇಮಜಲ ಸಿಂಚನ ಮಾಡಿ ಪ್ರೇಮ ಬೀಜವನ್ನು ಬಿತ್ತಿ ಅಲ್ಲಿ  ಪ್ರೇಮದ ಪುಷ್ಪವನ್ನು ಬೆಳೆಸಬೇಕು ನೆಲಕ್ಕೆ ಪ್ರೀತಿ ಬೀಳದೆ ಇರೋ ತರ ನಾವ್ ನೊಡ್ಕೋಬೇಕು ಅಂದ್ರೆ  ಪ್ರತಿ ಕ್ಷಣ ಅದರ ಜೊತೆ ನಾವ ಆಟ ಆಡ್ತಾ ಇರಬೇಕು ಬಲೂನ್ ತರ ಪ್ರೀತಿ ಅನ್ನೋದು ಪ್ರತಿ ಕ್ಷಣ ಕಳದು ಹೋಗ್ತಾ ಇರುತ್ತೆ ಪ್ರೀತಿಯನ್ನ ಕಳ್ಕೋಳದೇ ಹೇಗೆ ಬದುಕುತ್ತೆವಿ ಅನ್ನೋದೇ ಪ್ರೀತಿ ಈ ಪ್ರೀತಿ ಎಲ್ಲರಿಗೂ ಆಗುತ್ತೆ ಪ್ರೀತಿಯನ್ನ ನಾವು ಉಳಿಸ್ಕೂಳ್ಕೋಕೆ ಎಷ್ಟು ಪ್ರಯತ್ನ ಪಡುತ್ತೆವೊ ಆ ಪ್ರೀತಿ ಕೊನೆವರೆಗೂ ಉಳಿಯುತ್ತೆ…

ಪರಿಪೂರ್ಣ ಮದುವೆ ಎಂಬುದು ತಿಳುವಳಿಕೆ, ಸ್ವೀಕಾರ ಮತ್ತು ಪರಸ್ಪರ ಗೌರವದ ನಿರಂತರ ಪ್ರಯಾಣ. ಮದುವೆ ಆಗಿದ್ವಿ ಅನ್ನೋ ಕಾರಣಕ್ಕೆ ಜೊತೆಗೆ ಇರೋದಲ್ಲ , ಜೊತೆಗೆ ಬಾಳುವುದಕ್ಕೆ ಮದುವೆ ಆಗಿದಿವಿ ಅಂತ ಬದುಕೋಣ ಅನ್ನೋದು  ಆರೋಗ್ಯಕರ ಮದುವೆಯಾಗಿದೆ. ಒಬ್ಬರಿಗೆ ಒಬ್ಬರು ಸಮಯ ಕೊಡೋದೇ ಪ್ರೀತಿ .ಪ್ರೀತಿಯಲ್ಲಿ ಕ್ಷಮಿಸುವ  ಮನೋಭಾವನ್ನು ದಂಪತಿಗಳು ಬೆಳಿಸಿಕೊಳ್ಳಬೇಕು.ಒಬ್ಬರು ಇನ್ನೊಬ್ಬರಲ್ಲಿ ಪರಸ್ಪರ ನಂಬಿಕೆ ಇಟ್ಟುಕೊಂಡಿರಬೇಕು ಲಕ್ಷ್ಮಣ ಮತ್ತು ಊರ್ಮಿಳೆಯ ಅಪ್ರತಿಮ ಪ್ರೇಮಕ್ಕೆ ರಾಮ ಸೀತೆಯರ ಪ್ರೇಮವು ಸಾಟಿಯಲ್ಲ . ಅದೇತರ ಪ್ರೀತಿಯು ಬಲವಾಗಿ ಮತ್ತು ತ್ಯಾಗಮಯ ವಾದ ಪ್ರೀತಿ ನಮ್ಮಲ್ಲಿರಬೇಕಾಗಿದೆ .

ಮದುವೆ ಎಂಬುದು ಮೂರಕ್ಷರದ ಪದವಾದರೂ
ಎರಡು ಹೃದಯಗಳ ಸಮ್ಮಿಲನ,ಎರಡು ಹೃದಯಗಳ ಬೆಸುಗೆ
ಒಲವಿಗೆ ಒಲವಾಗಿ, ಮೂರು ಗಂಟಿಗೆ ನಂಟಾಗಿ
ಒಲವೇ ಬಲವಾಗಿ ,ಒಂದಾದ ಬಾಳಿಗೆ
ಮದುವೆಯೊಂದು ಪ್ರೀತಿಯ ಆಸರೆಯಾಗಿ ಜೀವನಕ್ಕೆ ಸಾಕ್ಷಿಯಾಗಬೇಕು

“ಆಯ್ಕೆ ಸಂಪಾದನೆ ಕಡೆಗಿಂತ ಹೆಚ್ಚಾಗಿ ಆರೈಕೆ ಕಡೆ ಇದ್ರೇ ಬದುಕು ಸುಂದರವಾಗಿರುತ್ತದೆ.“


ಭೀಮಾ ಕುರ್ಲಗೇರಿ

About The Author

6 thoughts on ““ಮದುವೆ ಎಂಬುದು ಮಧ್ಯಂತರ ತಿರುವಲ್ಲ; ಜೀವನದ ನಿರಂತರ ಪ್ರಯಾಣ”ಭೀಮಾ ಕುರ್ಲಗೇರಿ”

  1. Good sentence structure sis. It’s really emotional words. I am really glad to read your good topic.. Good well continuing….. All the best

  2. ಮದುವೆ ಎಂದರೆ ಹೊಂದಾಣಿಕೆ, ಒಬ್ಬರನ್ನೊಬ್ಬರು ಅರಿತು ಬಾಳುವುದೇ ನಿಜವಾದ ಬದುಕು, ಬದುಕಿನಲ್ಲಿ ಬಡತನವಿದ್ದರೂ ಚಿಂತೆ ಇಲ್ಲಾ ಆದರೆ ಭಾವನೆಗಳಿಗೆ ಬೆಲೆ ಕೊಡಬೇಕು ಎಂದು ಸವಿವರವಾಗಿ, ಸವಿಸ್ತಾರವಾಗಿ ಸುಂದರವಾಗಿ ನಿನ್ನ ಭಾವನೆಗಳ ಬರವಣಿಗೆಯಲ್ಲಿ ಚಿತ್ರೀಸಿರುವುದು ನಿಜಕ್ಕೂ ಸುಂದರವಾಗಿದೆ

    1. ನಿಮ್ಮ ಆತ್ಮೀಯತೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಅಕ್ಕ

Leave a Reply

You cannot copy content of this page

Scroll to Top