ಕಾವ್ಯ ಸಂಗಾತಿ
ಅನ್ನಪೂರ್ಣ ಸು ಸಕ್ರೋಜಿ ಪುಣೆ
“ಮುಗಿಲು ಹರಿದು ಬಿದ್ದಿದೆ”


ಮುಗಿಲು ಹರಿದು ಬಿದ್ದಿದೆ
ನೋಡಿದೆಡೆಯೆಲ್ಲಕಡೆ
ಮೇಘ ಸ್ಫೋಟ ಆಗುತ್ತಿದೆ
ಪಡೆದಳುಗಂಗೆ ಬಿಡುಗಡೆ
ಗಂಗೆ ತುಂಗೆ ಕೃಷ್ಣಾ ಕಾವೇರಿ
ಮಾತಾಡಿಕೊಂಡಿಹರು
ಸಿಂಧೂ ಸರಸ್ವತಿ ಮಂದಾಕಿನಿ
ಕೈಜೋಡಿಸಿ ಒಂದಾಗಿಹರು
ಜನರಿಗೆ ತಕ್ಕ ಪಾಠ ಕಲಿಸಲು
ಪಾಪ ಕೃತ್ಯ ತಡೆಯಲು
ರೌದ್ರ ರೂಪ ಧರಿಸಿ ಸಾಗಿಹರು
ಭೋರ್ಗರೆಯುತಲಿ
ಕಡಲತಡಿಯ ಮೀನುಗಾರರ
ಕಣ್ಣೀರು ಕೇಳುವವರಿಲ್ಲ
ಬೆಳೆದ ಬೆಳೆಗಳೆಲ್ಲ ಸರ್ವನಾಶ
ರೈತರ ಅಳುತಿಹರೆಲ್ಲ
ಶಾಂತಳಾಗು ತಾಯಿ ಗಂಗವ್ವಾ
ಏಕಿಷ್ಟು ಕೋಪ ತಾಪ
ಪ್ರಾಣಿ ಪಶು ಪಕ್ಷಿಗಳ ರೋದನೆ
ಕೇಳಿಸದೆ ಬಿಡು ಸಂತಾಪ
ಎಲ್ಲಿರುವೆ ತಂದೆ ಶಿವಶಂಕರನೆ
ಕಣ್ಣುಮುಚ್ಚಿ ಕೂಡಬೇಡ
ನಿನ್ನ ಜಲಾಭಿಷೇಕಕ್ಕೆ ಭಯಹರನೆ
ಜಲಪ್ರಳಯ ಮಾಡಬೇಡ
ಅನ್ನಪೂರ್ಣ ಸು ಸಕ್ರೋಜಿ ಪುಣೆ



