ಗಜಲ್ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್


ಜಗದೊಡೆಯ ನೀನಾಗಿದ್ದರೂ ಕರುಣೆ ತೋರಿ ಬರಲಿಲ್ಲ ಒಮ್ಮೆ
ಜೀವದೊಡೆಯ ಎನಿಸಿದ್ದರೂ ಪ್ರೀತಿ ಸವಿ ಬೀರಿ ಬರಲಿಲ್ಲ ಒಮ್ಮೆ
ಅನಂತ ಕಾಲದಿಂದ ಪರಿತಪಿಸಿ ಪರಿತಪಿಸಿ ಕಾಣದೆ ಕಂಗೆಟ್ಟಿಹೆನು
ಅನುರಾಗದ ರಮನನಾಗಿದ್ದರೂ ಪ್ರೇಮದಿ ಹಾರಿ ಬರಲಿಲ್ಲ ಒಮ್ಮೆ
ಅನವರತ ನಿನ್ನ ಧ್ಯಾನದಲಿ ಮಿಂದು ಮೌನಿಯಾಗಿ ಮಂಕಾಗಿರುವೆ
ಕರೆದೊಡನೆ ಓಡೋಡಿ ಬರುವೆ ಎಂದರೆ ದಯೆ ತೋರಿ ಬರಲಿಲ್ಲ ಒಮ್ಮೆ
ಕೃಷ್ಣಾ ಕೃಷ್ಣಾ ಎಂದು ಕೂಗಿ ಕೂಗಿ ಗಂಟಲೊನಗಿ ಮಾತು ಬಾರದು
ಸೃಷ್ಟಿಕರ್ತ ಎಲ್ಲ ಬಲ್ಲವನಾಗಿದ್ದರೂ ನನ್ನೊಳಗೆ ಸಾರಿ ಬರಲಿಲ್ಲ ಒಮ್ಮೆ
ಕರುನಾಳು ಕರಪಿಡಿದು ಮೈದಡವಿ ಸಂತೈಸುವಲ್ಲಿ ಚತುರನಲ್ಲವೇ
ಚಕ್ರ ಹಿಡಿದ ಸೂತ್ರದಾರನಾಗಿದ್ದರೂ ಬಳಿ ಸೇರಿ ಬರಲಿಲ್ಲ ಒಮ್ಮೆ
ಸರ್ವವ್ಯಾಪಿ ಸರ್ವಸಿದ್ಧನು ಸಕಲರೆಲ್ಲರ ಪೊರೆವ ಒಡೆಯನಲ್ಲವೆ
ಕಳವಳ ಕೊಂದು ಸಲ್ಲಾಪದಿ ಮೀಯಲು ತೂರಿ ಬರಲಿಲ್ಲ ಒಮ್ಮೆ
ಅನುಳ ಒಡಲ ತುಡಿತಗಳು ಬಡಿಬಡಿದು ಎದೆ ದಡ ಸಡಿಲಾಗಿದೆ
ಎಲ್ಲರ ಬಂಧುವಾಗಿದ್ದರೂ ಬಂದು ಸಂಕಟ ಹೀರಿ ಹೋಗಲಿಲ್ಲ ಒಮ್ಮೆ
ಡಾ ಅನ್ನಪೂರ್ಣ ಹಿರೇಮಠ




ಅದ್ಬುತವಾದ ಕವಿತೆ
ಗಜಲ್‌ನಲ್ಲಿ ಕಾಫಿಯಾ ರದೀಫ್ ಗಳಲ್ಲಿ ಸಮಸ್ಯೆ ಇದೆ. ರಮನ, ಕರುನಾಳು, ಹೀಗೆ ಕಾಗುಣಿತದ ತಪ್ಪುಗಳೂ ಇವೆ.
ಪ್ರಕಟಿಸುವ ಮುನ್ನ ಒಮ್ಮೆ ಪರಿಶೀಲಿಸಬಹುದಿತ್ತು.
ಅವರು ಗಜಲ್ ಸಂಭ್ರಮ ಗುಂಪಿನಲ್ಲಿ ಈ ರಚನೆಯನ್ನು ಹಾಕಿದಾಗ ತಪ್ಪುಗಳಿವೆ ಎಂದು ಹೇಳಲಾಗಿತ್ತು. ತಿದ್ದಿಕೊಳ್ಳುವುದು ಕೆಲವರ ಜಾಯಮಾನದಲ್ಲಿ ಇರುವುದಿಲ್ಲ!
ಚಂದದ ಭಾವ…ಗಜಲ್ ನಿಯಮಗಳು ನನಗರಿವಿಲ್ಲ.