ಕಾವ್ಯ ಸಂಗಾತಿ
ಪ್ರಮೋದ ಜೋಶಿ
“ಬೆಣ್ಣೆ ಕೃಷ್ಣ”

ಎಟುಕದ ಹಾಗೆ ಇಟ್ಟ ಬೆಣ್ಣೆ
ತಿನ್ನುವೆ ಹೇಗಮ್ಮಾ
ನೆಲುವಲಿ ಇಟ್ಟ ಗಡಿಗೆ ನೋಡು
ಎಟಕುವುದೇನಮ್ಮಾ
ಸುಳ್ಳನು ಹೇಳುವ ಗೋಪಿಯ ಮಾತು
ನಿಜವೇ ಏನಮ್ಮಾ
ಮಾತನು ಕೇಳುತ ನನ್ನನು ಜರಿಯುವುದು
ಎಷ್ಟು ಸರಿಯಮ್ಮಾ
ಮುದ್ದಿನ ಕಂದ ನಿನ್ನವ ನಾ
ಮಾತನ್ನು ನಂಬಮ್ಮಾ
ಅವರ ಮಾತನು ಕೇಳುತ ಬೈದರೆ
ಹೋಗಲಿ ನಾ ಎಲ್ಲಮ್ಮಾ
ಪ್ರೀತಿಯ ಅಮ್ಮ ನನ್ನನು ನಂಬು
ಬೆಣ್ಣೆಯ ನಾನು ಕದ್ದಿಲ್ಲಾ
ಬೆಕ್ಕಿನ ಆಟ ಮೇಲಕೆ ಜಿಗಿದು
ಬೆಣ್ಣೆಯ ತಿಂದಿದೆಯಮ್ಮಾ
ತಿಳಿಸಲಿ ಹೇಗೆ ನನ್ನ ನೋವಾ
ತೆಗಳುವರೆಲ್ಲರು ನನ್ನನ್ನಾ
ನಿನ್ನ ಕೈಯಲಿ ಶಿಕ್ಷಿಸಲೆಂದೇ
ಸುಳ್ಳೇ ಹೇಳುವರಮ್ಮಾ
ಗೋಪಿಯರೇ ಹೀಗೆ ಸರಿನೇ ಇಲ್ಲಾ
ತಾವೇ ಬೆಣ್ಣೆ ತಿನಿಸುವರು
ಅವರಿರದ ಸಮಯದಿ ಬೆಣ್ಣೆ ತಿಂದರೆ
ಕದ್ದೆ ಎಂದು ದೂರುವರಮ್ಮಾ
ನೀನೇ ನೋಡು ಆಷ್ಟೊಂದು ಬೆಣ್ಣೆ
ಒಬ್ಬನೇ ಹೇಗೆ ತಿಂದೇನು
ನೀನೇ ನೀಡಿದ ಇಷ್ಟೆ ಬೆಣ್ಣೆಗೆ
ಹೊಟ್ಟೆ ತುಂಬಿದೆ ನೋಡು
ಪ್ರಮೋದ ಜೋಶಿ





It’s a devotional heart feeling poem.nice sir.
ಬೆಣ್ಣೆ ಮತ್ತು ಕೃಷ್ಣ ಮುದ ನೀಡಿತು
ಕೃಷ್ಣನ ಕವನ ತುಂಬಾ ಚೆನ್ನಾಗಿದೆ