ಕಾವ್ಯಸಂಗಾತಿ
ಸ್ವತಂತ್ರರೇ ಆದರೆ .…ಶಾರದಾ ಜೈರಾಂ ಬಿ.

ಒಂದು ಹೆಣ್ಣು ಅಧ೯ರಾತ್ರಿಯಲ್ಲೂ
ಬೇಡ ಹಗಲಿನಲ್ಲೇ ಸುರಕ್ಷಿತವಾಗಿ
ಮನೆ ತಲುಪಲಿ ಆಗ ಸಂಭ್ರಮಿಸೋಣ
ಸಂಪತ್ತು ಸಮಾನ ಹಂಚಿಕೆಯಾಗಲಿ
ಆಗ ಸಂಭ್ರಮಿಸೋಣ
ಮಕ್ಕಳ ಮುಗ್ದತೆ ಕಾಪಾಡುತಾ
ಅಂಕಗಳೇ ಬದುಕೆಂದು ತುಂಬಬೇಡಿ
ಅಧಿಕಾರ, ಅಂತಸ್ತು ಏನೇ ಇರಲಿ
ಮನುಜನೆಂದು ಅರಿತು ಗೌರವಿಸಿ
ಬದುಕಿನ ಷಾಯಿ ಮುಗಿದು ಹೋಗುವ ಮುನ್ನ ಬದುಕಿಬಿಡಿ
ಜಾತಿಯ ಅಮಲಿನಿಂದ ಹೊರಬನ್ನಿ
ಮಾನವೀಯತೆಗಿಂತ ಮಿಗಿಲು ಯಾವುದಿಲ್ಲ ಎಂದು ತಿಳಿ
ಎಲ್ಲರಿಗೂ ನೆಲ ಜಲ ಗಾಳಿ ಒಂದಿಹದು
ಅಂದೇನೋ ಪರಕೀಯರ ಆಡಳಿತ
ಆದರಿಂದು ನಮ್ಮಲ್ಲಿನ ಒಳಜಗಳ
ಕೋಮುಗಲಭೆ,ಒಬ್ಬರ ಮೇಲೊಬ್ಬರ ಹೊಡೆದಾಟ ನಿಲ್ಲಲಿ
ಹಿಂದೂ, ಮುಸ್ಲಿಂ, ಕ್ರೈಸ್ತ ಸಿಖ್
ಯಾರಾದರೇನು ನಾವೆಲ್ಲ ಭಾರತೀಯರು ಒಂದೇ ತಾಯಮಕ್ಕಳಲ್ಲವೇ
ದ್ವೇಷಕ್ಕೆ ದ್ವೇಷ ಉತ್ತರವಾಗದು
ಪ್ರೀತಿಗೆ ಜಗವೇ ತಲೆ ಬಾಗುವುದು
ಹೃದಯ ಹೃದಯಗಳಲ್ಲೂ ಪ್ರೀತಿಯ
ಹಣತೆ ಬೆಳಗಲಿ
ಆಗ ನಿಜವಾದ ಸ್ವಾತಂತ್ರ್ಯ ಎಂದು
ಸಂಭ್ರಮಿಸೋಣವಲ್ಲವೇ?
ಶಾರದಜೈರಾಂ.ಬಿ



