ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ
ನೀ ತಿಳಿದು ನಡೆ

ನೀನು ನೀನಾಗಿ ಬಿಡು
ನಿನ್ನರಿವಿನೊಳಗೆ ನೀ ಗೆಳತಿ
ಕುಹಕ ಬುದ್ಧಿ ನಗೆ
ಹೊಗೆ ಯಾಗಿ
ಮುಗಿಲ ಆವರಿಸಿ
ಹಿಸುಕಿ ಬಿಟ್ಟರು
ನಿನ್ನ ಕೊರಳು
ಬುದ್ಧಿ ನೆಲ
ಬಿದ್ದು ನಗುವ ಜನತೆಗೆ
ನಾ ಏನು ಹೇಳಲಿ
ನೀ ಸಿದ್ದಿ ಪಡೆದು
ಸುಖಿಸು ಗೆಳತಿ
ನಾಳೆಯ ಸಂತಸಕೆ
ತಡವಿಲ್ಲದ ದಿನಗಳು
ಕೈ ಮಾಡಿ ಕರೆದಾವು
ಮತ್ತೆ ನೀ ತಿಳಿದು ಸಾಗು
ನನ್ನ ಒಲವು ನೀ ಗೆಳತಿ
———————————–




