ಕಾವ್ಯ ಸಂಗಾತಿ
ಮುತ್ತು ಬಳ್ಳಾ ಕಮತಪುರ
ಗಜಲ್

ಹೇಳಬೇಕೆಂದರೂ ಪ್ರೇಮದೋಲವ ಹೇಳಲಾಗುತ್ತಿಲ್ಲ
ಸಾಯಬೇಕೆಂದರೂ ನಿನ್ನ ನೆನಪುಗಳು ಸಾಯಿಸುತ್ತಿಲ್ಲ
ಓದಬೇಕೆಂದರೂ ಹೃದಯ ಬಡಿತ ನುಡಿ ಕೇಳಲಾಗುತ್ತಿಲ್ಲ
ಕಲಿಯಬೇಕೆಂದರೂ ನಸೀಬೂ ಕೊಂಚ ಬದಲಾಗುತ್ತಿಲ್ಲ
ದೂರಬೇಕೆಂದರೂ ಕಾರಣಗಳು ಹಂಚಿಕೊಳ್ಳಲಾಗುತ್ತಿಲ್ಲ
ಮುರಿಯಬೇಕೆಂದರೂ ಭಾಷೆ ಉಳಿಸಿಕೊಳ್ಳಲಾಗುತ್ತಿಲ್ಲ
ಮಧುರಸ ಖಾಲಿಯಾದರೂ ನೋವು ಮರೆಯಲಾಗುತ್ತಿಲ್ಲ
ಪದಗಳಲಿ ಹಿಡಿದಿಡಬೇಕೆಂದರೂ ಪೆನ ಹಿಡಿಯಲಾಗುತ್ತಿಲ್ಲ
ಮುತ್ತು ಬರಸಿಡಿಲು ಬಡಿದರು ಧ್ವನಿ ಗುಣುತ್ತಿದೆಯಲ್ಲ
ಬೇಡಿಕೊಂಡರೂ ಹೃದಯದ ಭಾರ ಇಳಿಸಲಾಗುತ್ತಿಲ್ಲ

ಮುತ್ತು ಬಳ್ಳಾ ಕಮತಪುರ



