ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ,ಸಾಧನೆ

ನಿನ್ನ ರೆಕ್ಕೆ ಬಿಚ್ಚಿ
ಹಾರಲು ಒಮ್ಮೆ
ಯೋಚಿಸು
ಮುಗಿಲು
ನಿನ್ನ ಕೆಳಗೆ
ಕಾಣುವುದು

ಕಾರ್ಮೊಡಗಳ
ಮೇಲೆ ಸೂರ್ಯ
ಚಂದ್ರರ ಬೆಳಕು
ಚುಕ್ಕೆಗಳು
ನಿನಗೆ ಆರತಿ
ಎತ್ತುವವು

ಬವಣೆ ಬಳಲಿಕೆ
ತೊರೆದು ದೂರ ಹಾರು
ವಿಶಾಲ ಆಗಸದಲಿ
ನಿನ್ನ ಗೆಲುವು
ಸಂಘರ್ಷ ಸಮರಸ
ದಿವ್ಯ ಪಯಣವು

ಗೆದ್ದು ಬಿಡು
ಗಟ್ಟಿಗೊಳ್ಳು
ಬಿಟ್ಟು ಭಯ ಭೀತಿ
ಹುಟ್ಟಿ ಬಂದ ಜನ್ಮಕ್ಕೆ
ಪರಮ ಉಡುಗೊರೆ
ಸಾಧನೆ ಸಾರ್ಥಕ


One thought on “ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ,ಸಾಧನೆ

Leave a Reply

Back To Top