ಕುದ್ದು ಕುದ್ದು……..ಆವಿಯಾಗದೇ……
ವಿಭಾ ಪುರೋಹಿತ್
ಮೂಕ ಪ್ರಾಣಿಗಳಂತೆ
ಸಂವೇದನೆಗಳ ಬಯಸಿ
ಭೂಮಿಯಂತೆ ಸಹಿಸಿ
ನದಿಯಂತೆ ಮಲಿನವಾದರೂ
ಸುಮ್ಮನಾಗಿ
ಪ್ರಕೃತಿಯಂತೆ ಹಿಂಸೆಯನ್ನು
ತಡೆದುಕೊಳ್ಳುತ್ತದೆ
ಭಾಷೆ ಅನನ್ಯ,ಅರ್ಥ ಅನೂಹ್ಯ
ಅವನ ಆವರಿಸಿದಾಗ
ಮನೆಯೆಲ್ಲಾ ದಿಗಿಲು
ಖುಷಿಪಡಿಸಲಿಕ್ಕೆ ಯತ್ನಿಸುತ್ತಾರೆ
ಆಗ ಮಹಾಬೆಲೆ !
ಅವಳ ಮುತ್ತಿಕೊಂಡಾಗ
ಮನೆಯ ಕಾಡುವುದಿಲ್ಲ
ಯಾರಿಗೂ ಗೊತ್ತಾಗುವುದಿಲ್ಲ
‘ಮಿತಭಾಷಿ’ಎಂದು ಹೊಗಳುತ್ತಾರೆ
ನಮ್ಮವಳಿಗೆ ಮಾತನಾಡಲು
ಬರುವುದಿಲ್ಲ ನಗರದವರ ಹಾಗೆ…..
ಚೂಟಿಯಲ್ಲ,ಚತುರೆಯಲ್ಲ
‘ಅಲ್ಪಮತಿ’ ಯ ಬಿರುದು ಕೊಟ್ಟು
ಅಭಿಮತದ ಆಯ್ಕೆ ಯನ್ನೇ
ಕಿತ್ತುಕೊಳ್ಳುತ್ತಾರೆ
ವಿಪರ್ಯಾಸ ವ್ಯಾಖ್ಯಾನ !
ಕೂಡಿಟ್ಟು ಕೂಡಿಟ್ಟು ಕುದ್ದು ಕುದ್ದು
ಆವಿಯಾಗಿ ಹೊರಬರದೇ
ಮತ್ತೆ ಬಸಿದು ಬಿಂದು ಬಿಂದುಗಳಾಗಿ
ಹೊಸಜನ್ಮ ಪಡೆಯುತ್ತವೆ
ನಿರೀಕ್ಷೆಯಂತೆ ಕಾಳಿಯಾಗಲಿಲ್ಲ
ಸಿಡಿಮದ್ದಾಗಿ ಸಿಡಿಯಲೂಯಿಲ್ಲ
ಯಾವ ಕಿಂಪುರುಷ ಕಿನ್ನರಿಯ ಮಾಯೆಯೂ ಅಲ್ಲ
ಅವಳೊಳಗಿನ ತ್ರಾಣ,ಸಹನ, ಮೌನ
ಚಂದದ ಕವನ… ಆತ್ಮಪೂರ್ವಕ ಅಭಿನಂದನೆಗಳು ಕವಯಿತ್ರಿ..!
ಮಮತೆಯ ಮುಸ್ಸಂಜೆ…
Thank you sir
Very nice
Thanks