
ಅಂಕಣ ಸಂಗಾತಿ01
ನೆಲದ ನಿಜ
ಭಾರತಿ ಕೇದಾರಿ ನಲವಡೆ
ಮೌನದೊಡವೆ

ಮೌನದಲಿದೆ ಪರಮಸೊಗ
ಮನದಣ ಗೊಂದಲದಿ ಮೊಗ
ಅಶಾಂತಿಯ ಗೂಡಾಗದಿರಲಿ
ಎಂದು
ಮಾತುಗಳು ಕರಗಿ ಮ್ಲಾನದಿ ತಿರುಗಿದೆ ಇಂದು” ನಿಜ ಮನಸಿಗೆ ಬೇಸರವಾದಾಗ, ದುಃಖವಾದಾಗ ಮನೆಯಲಿ ಕಲಹದ ಕಂಟಕವಿರುವಾಗ ಮೌನವ ಬಯಸುವದುಮನ.ಯಾಕೆ ಹೀಗೆ? ಮನಸಿಗಾದ ಖೇದವನು ಕಳೆಯಲು, ತನ್ನನ್ನು ತಾನು ಸಾವರಿಸಿಕೊಳ್ಳಲು, ತನ್ನ ಆತ್ಮಾವಲೋಕನಕೆ ಮೌನಕೆ ತಾಳ್ಮೆಯಿಂದ ಶರಣಾಗಲೇಬೇಕು. ಗೆಳತಿ ಸವಿತಾ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತಿದ್ದಳು. ಅವಳ ಪತಿ ಕೂಡ ತಹಶೀಲ್ದಾರ ಕಛೇರಿಯಲ್ಲಿ ಪ್ರಥಮ ದರ್ಜೆಯ ಗುಮಾಸ್ತ.ಮುದ್ದಾದ ಎರಡು ಮಕ್ಕಳು ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗ ಎಂಬಂತೆ.ಇವಳು ತನ್ನ ಕಛೇರಿಯಲ್ಲಿ ಅಚ್ಚುಕಟ್ಟಾಗಿ ಕೆಲಸ ಮುಗಿಸಿ ಮನೆಗೆ ಬಂದು ಮಕ್ಕಳಿಗೆ ತಿಂಡಿಕೊಟ್ಟು ಹೋಂವರ್ಕ ಮಾಡಿಸಿ ಪತಿದೇವರು ಬಂದಾಗ ರುಚಿಯಾದ ಊಟ ಬಡಿಸಿ ತಾನೂ ಊಟ ಮಾಡಬೇಕೆನ್ನುವಷ್ಟರಲ್ಲಿ ಊಟಮಾಡಿ ಮಲಗಿದ ಮಕ್ಕಳಿಗೆ ಚಾದರನ್ನು ಹೊದಿಸಿ ಆಕಳಿಸುತ್ತಲೇ ಪತಿಗೆಊಟ ಬಡಿಸಲು ಗಡಿಯಾರ ನೋಡುತ ನಿದ್ದೆ ಹೋದ ಕ್ಷಣಗಳಿಗಂತೂ ಕಡಿಮೆ ಇಲ್ಲ.ಕುಡಿದು ತೂರಾಡುತ್ತ ಬಂದವನಿಗೆ ಊಟ ಬಡಿಸುತ್ತತಡವಾದುದಕೆ ಕಾರಣ ಕೇಳಿದರೇ ಬಾಯಿಗೆ ಬಂದಂತೆ ಕಿರುಚಾಡಿದಾಗ ಅಕ್ಕಪಕ್ಕದವರಿಗೆ ಕೇಳುತ್ತದೆ ನಮ್ಮ್ಮಿಬ್ಬರ ಮರ್ಯಾದೆ ಹೋಗುತ್ತದೆ ಎಂದು ಅವಳು ಸಮಾಧಾನ ಮಾಡಿದರೂ” ನಾನು ಇಲ್ಲಿ ಪುಕ್ಕಟೆ ಇಲ್ಲ ತಿಂಗಳ ತಿಂಗಳ ಬಿಸಾಕ್ತೀನಿ. ಎಂದು ಅರಚುವಾಗ ಅವಳು ಕೈ ಮುಗಿದು ಅಂಗಲಾಚಿದರೂ ಬಾಯಿ ಮುಚ್ಚದ ಗಂಡನ ಬಗ್ಗೆ ಅವಳಃ ಏನು ತಾನೆ ಮಾಡಲು ಸಾಧ್ಯ.ಮರುದಿನದಿಂದ ಮೌನದೊಡವೆ ಧರಿಸಿ ಸತಿಯಾಗಿ ತನ್ನ ಕರ್ತವ್ಯವನು ಚಾಚೂ ತಪ್ಪದೇ ಮಾಡುತ್ತಲಿದ್ದಾಗ ತನ್ನ ನಶೆ ಇಳಿದಂತೆ ತಾನಾಡಿದ ಮಾತುಗಳೇ ಅವಳ ಮೌನಕ್ಕೆ ಕಾರಣವೆಂದರಿತು ಅವಳನ್ನು ಸಂತೈಸಲು ಪಾರ್ಕ, ಸಿನೇಮಾ, ಹೋಟಲ್ ಹೀಗೆ ಅವಳ ಮಾತಿಗೆ ಪರಿತಪಿಸುತ ಮತ್ತೊಮ್ಮೆ ಹಾಗಾಗದಂತೆ ನಡೆದುಕೊಳ್ಳುವ ಪೊಳ್ಳುಭರವಸೆಯಿಂದ ಕಂಗೆಡದೆ ಮಕ್ಕಳ ಭವಿತವ್ಯದ ಬಗ್ಗೆ ಕನಸ ಕಟ್ಟಿ ಮೆಟ್ಟಿ ನಿಲ್ಲುವ ಛಾತಿಯ ಗಟ್ಟಿಗಿತ್ತಿ ತಾನು ದುಡಿಯುತ್ತಿಲ್ಲವೇ? ತನ್ನ ವ್ಯಥೆಯನ್ನು ನುಂಗಿ ಮಕ್ಕಳನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲಿ ಪಣ ತೊಟ್ಟಾಗ ಕಷ್ಟ ಪಟ್ಟು ಓದಿ ಪಡೆದ ನೌಕರಿ ಕೈ ಹಿಡಿಯುವದೆಂಬ ಆತ್ಮಸ್ಥೈರ್ಯ ಬದುಕಿನಾಸೆಯ ಚಿಗುರಾಗುತ್ತದೆ.
ನಿಜ ಮೌನ ಬಂಗಾರ ಎಂಬ ವಿಷಯವನ್ನು ಗಮನಿಸಿದಾಗ ಒಂದು ಮನೆಯನ್ನು ತೆಗೆದುಕೊಂಡಾಗ ಆ ಮನೆಯಲ್ಲಿ ಎಲ್ಲರೂ ಮೌನವಾಗಿದ್ದರೆ ಯಾವ ಕೆಲಸವೂ ಆಗುವದಿಲ್ಲ. “ನೀವು ಮಾತನಾಡದೇ ಸುಮ್ಮನಿದ್ದರೆ ನಿಮ್ಮ ಮನಸ್ಸಲ್ಲೇನಿದೆ ಎಂದು ನನಗೆ ಹೇಗೆ ಗೊತ್ತಾಗಬೇಕು?ಎಂದು ಮೂರು ದಿನಗಳಿಂದ ಮಾತನಾಡದೇ ಮೌನವಾಗೌರುವ ಗಂಡನನ್ನು ಹೆಂಡತಿ ತರಾಟೆಗೆ ತೆಗೆದುಕೊಳ್ಳುವದು ಅನಿವಾರ್ಯ.”ನಿನ್ನ ಕೋಪತಾಪಗಳು ಇರಲಿ,ನಿನ್ನ ಮನಸ್ಸಿನಲ್ಲಿ ಏನಿದೆ ಎಂದು ಬಾಯಿ ಬಿಟ್ಟು ಬೊಗಳಬಾರದೇ?ಪಾತ್ರೆಗಳನ್ನು ಕುಟ್ಟಿ ಬಿಸಾಕಿ ನಿನ್ನ ಕೋಪವನ್ನು ಯಾಕೆ ಪ್ರದರ್ಶಿಸುತ್ತಿದ್ದಿ?”ಎಂದು ಗಂಡ ಹೆಂಡತಿಯನ್ನು ಕೇಳುವದು ಪಾತ್ರೆಗಳ ಹಿತದೃಷ್ಟಿಯಿಂದ ಅವಶ್ಯಕ.ಯಾರಾದರೂ ಅಪರಾಧ ಮಾಡಿದ್ದನ್ನು ನೋಡಿಯೂ ಅದರ ಬಗ್ಗೆ ಏನನ್ನೂ ಮಾತನಾಡದೆ ಸುಮ್ಮನೇ ಮೌನ ವೃತ ಧರಿಸಿದರೆ ಅಪರಾಧಕ್ಕೆ ಉತ್ತೇಜನವಿತ್ತಂತೆ.ಆದ್ದರಿಂದ “ಮೌನ ಬಂಗಾರ ” ಎಂಬ ನುಡಿ ಸದಾ ಕಾಲ ಸರಿ ಎಂದು ಒಪ್ಪಿಕೊಳ್ಳಲಾಗುವದಿಲ್ಲ.

ಮಾತು ಬೆಳ್ಳಿ ಎಂದರೆ ಮೌನಕ್ಕಿಂತ ಕಡಿಮೆ ಎಂದಾದರೆ ಕಂದಮ್ಮಗಳಿಗೆ ಮಾತು ಕಲಿಸುವುದೇ ಬೇಡವೇ? ಪ್ರಪಂಚದ ವಿಷಯಗಳ ಬಗ್ಗೆ ಅರಿವು ಬರುವುದೇ ಮಾತು ಹಾಗೂ ಓದು ಬರಹದಿಂದ ಅಲ್ಲವೇ ಎಂಬುದು ಕೆಲವರ ವಿತ್ತಂಡವಾದವನ್ನು ಅಲ್ಲಗಳೆಯುವಂತಿಲ್ಲ. ಮನೆಮನದ ಶಾಂತಿಗಾಗಿ ಮೌನವು ಅಷ್ಟೇ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳುತ್ತದೆ.
ಇಂದಿನ ತಂತ್ರಜ್ಞಾನದ ಭರಾಟೆಯ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿರಬಹುದು ಪರಸ್ಪರ ಬಾಂಧವ್ಯ ದಿಂದಿದ್ದು
ಕಾರಣಾಂತರಗಳಿಂದ ಅವರ ಫೋನ ಕರೆ ಸ್ವೀಕರಿಸದಿದ್ದರೆ ಕಾರಣ ತಿಳಿಯುವ ಗೊಡವೆಗೂ ಹೋಗದೇ ಜಗಳವಾಡಿದಾಗ ಇವರ ದುಡುಕು ಬುದ್ಧಿ ಅವರ ಗೆಳೆತನಕೆ ಒಂದು ಸವಾಲಾಗಿ ಕದಡಿದ ನೀರ ತಿಳಿಯಾಗುವಂತೆ ಅವರ ಮನ ಶಾಂತವಾಗುವವರೆಗೂ ಮೌನವೃತ ಕಟ್ಟಿಟ್ಟದ್ದೇ. ತಾಳ್ಮೆಯ ಸ್ವಭಾವ ಹೊಂದಿದ ನೌಕರ ತನ್ನದಲೊಲದ ತಪ್ಪಿಗೆ ಸದಾ ತನ್ನ ಒತ್ತಡವನ್ನು ಕೆಲಸಗಾರರ ಮೇಲೆ ಹೇರುವ ಎಷ್ಟೇ ಸರಿಯಾಗಿ ಕೆಲಸ ಮಾಡಿದರೂ ಗೊಣಗುವ ಬಾಸ್ ನ ನಡುವಳಿಕೆ ಅರಿತು ಮೌನದಿಂದ ಕಾರ್ಯಮಗ್ನರಾಗುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ತಾ ಮಾಡದೇ ಇರುವ ತಪ್ಪಿಗೆ ಈ ಮೌನ ತಪಿತಸ್ಥನಾಗಿ ಕೈಕಟ್ಟಿ ನಿಲ್ಲುವ ಕ್ಷಣಗಳು ತಪ್ಪಿನ ಒಪ್ಪಿಗೆ ಎಂಬ ಅರ್ಥವನು ಕೂಡ ಕೊಡುತ್ತದೆ.ಮೌನವು ಹಿರಿಯರ ಮಾತಿಗೆ ತಲೆಬಾಗುವ ಸಮ್ಮತಿಯ ಸಂಹ್ಕಾರ ಕೂಡ ಆಗಿದೆ. ವಯಸ್ಸಾದವರನ್ನು ಅವರ ಮದುವೆಯ ಬಗ್ಗೆ ಕೇಳಿದಾಗ”ಅಯ್ಯೋ ನಾನು ಹುಡುಗನ ಮುಖ ನೋಡಿದ್ದೆ ಮದುವೆಯ ದಿನ’ ಎಂದಾಗ ಸುಕ್ಕುಗಟ್ಟಿದ ಮುಖದಲಿ ಅಳಿದುಳಿದ ಹಲ್ಲುಗಳ ತಛರಿ ಕಣ್ಣಂಚಿನ ಮಿನುಗು ಕಾಣದಿದ್ದರೂ ಕೆಳಮುಖ ಮಾಡಿದ ಭಂಗಿ ಅದೊಭುತವಾಗಿ ಕಾಣುವದು.ವರ ಮಹಾಶಯ ಕೂಡ ವಧು ಪರೀಕ್ಷೆ ನಂತರ ಮೌನದಿ ತಲೆಯಾಡಿಸಿಯೇ ಉತ್ತರ ನೀಡುತ್ತಿದ್ದನು. ಈಗಿನಂತೆ ಪ್ರೀ ವೆಡ್ಡಿಂಗ ಶೂಟ್, ಲೀವ್ ಇನ್ ರಿಲೇಷನಶೀಪ್ ಇರಲಿಲ್ಲ ಎಷ್ಟೋ ಮದುವೆಗಳು ಮದುವೆಗೂ ಮುನ್ನವೇ ರದ್ದಾಗುತ್ತಿವೆ.

ಇಂದು ಸಾಮಾಜಿಕ ಜಾಲ ತಾಣದ ಅತೀ ಬಳಕೆ. ಫೇಸ್ಬುಕ್, ಪಾಸಬುಕ್ ನೋಡಿ ಪ್ರೀತಿಸಿ ಮಜಾ ಉಡಾಯಿಸಿ ನಂತರ ಮದುವೆ ರದ್ದಾಗುವ ಮಟ್ಟಕ್ಕೆ ಬಂದ ಸಂದರ್ಭಗಳು ಇಲ್ಲವೆಂದಲ್ಲ.ಸಾರಾಸಗಟಾಗಿ ತಮ್ಮ ಒಪ್ಪಿಗೆಯನ್ನು ಬಿತ್ತರಿಸುವ ಅತಿ ಸಲುಗೆಯಿಂದ ತತ್ತರಿಸುವ ಕ್ಲೈಮ್ಯಾಕ್ಸಗೆ ಕೊರತೆ ಇಲ್ಲ. ಮೌನದ ಇತಿಮಿತಿಯನ್ನು ಮೀರಿ ಅತಿಯಾದ ತಂತ್ರಜ್ಞಾನದ ಬಳಕೆ ಯುವಜನರ ವಿದ್ಯಾರ್ಥಿಗಳ ಭವಿಷ್ಯಕೆ ಕೊಡಲಿ ಏಟಾಗುತ್ತಿದೆ.
ಮಾನದೊಡವೆ ಇರಲು
ಯಾವುದರ ಗೊಡವೆ ನಮಗೇಕೆ?
ಮೌನದ ಭಾಷೆಯಲಿದೆ ಅನಂತ ಆನಂದ
ಜನನ ಮರಣದ ನಡುವೆ ಜೀವನ
ಒಳಿತಾದ ನಡೆ ನುಡಿಯಿಂದ ಪಾವನವಾಗುತ್ತದೆ.
“ಚಾರು ದೃಶ್ಯಗಳಿಂ ಪ್ರೀತಿ ಹೃದಯಕ್ಕಾಗಿ
ಕ್ರೂರ ದೌಷ್ಟ್ಯಗಳಿಂ ವೀರಾನುಕಂಪಂ
ಭೈರವಾದ್ಭುತಗಳಿಂ ಮೌನದಂತರ್ಮನಂ
ದಾರಿ ಯುದ್ಧಕಿವು ಮಂಕುತಿಮ್ಮ”
ಎಂಬ ಕವಿವರ್ಯ ಡಿ.ವಿ.ಗುಂಡಪ್ಪನವರ ಕಗ್ಗದ ಸಾರ ಮೌನದ ಔನತ್ಯವನ್ನು ತಿಳಿಸುತ್ತದೆ. ಅಂದರೆ ಒಳ್ಳೆಯ ಸುಂದರವಾದ ದೃಶ್ಯಗಳನ್ನು ನೋಡಿದರೆ ಮನಸ್ಸು ಪ್ರಫುಲ್ಲವಾಗುತ್ತದೆ.ಕ್ರೌರ್ಯದ ಮತ್ತು ದುಷ್ಟತನವನ್ನು ನೋಡಿದರೆ ಮನದಲ್ಲಿ ವೀರಾವೇಷ ಉಕ್ಕುತ್ತದೆ.ಭೀಕರವಾದ ಅದ್ಭುತಗಳನ್ನು ಕಂಡಾಗ ಅಂತರ್ಮನ ಮೌನ ತಳೆದು ಚಿಂತನೆಗೊಳಗಾಗುತ್ತದೆ.ಈ ರೀತಿಯ ಅನುಭವಗಳು ಮಾನವನ ಉದ್ಧಾರಕ್ಕೆ ಮಾರ್ಗಗಳು ಎಂದಿದ್ದಾರೆ. ಆದ್ದರಿಂದ ದೃಷ್ಟಿಯಂತೆ ಸೃಷ್ಠಿ ತನ್ನ ಪ್ರಭಾವವನ್ನು ಮನದಾಳದಿ ಕಟ್ಟಿಕೊಡುತ್ತದೆ. ಜಗದ ಬೆಳಕಾದ ಬುದ್ಧ ಹೇಳುವಂತೆ “ಧ್ಯಾನ ಹೆಚ್ಚಿದಂತೆ ಜ್ಞಾನ ಹೆಚ್ಚಾಗುತ್ತದೆ.ಜ್ಞಾನ ಹೆಚ್ಚಾದಂತೆ ಮೌನ ಹೆಚ್ಚಾಗುತ್ತದೆ”ಎಂಬಂತೆ ಜ್ಞಾನದ ಪರಮಾವಧಿಯ ಆಪ್ತತೆ ಆತ್ಮತೃಪ್ತಿ ಶಾಂತತೆಯ ಯೋಗ ಸನ್ನಿಧಿಯಾಗುತ್ತದೆ.ಮೌನದೊಡವೆಯು ಮಧುರತೆಯನ್ನು ಬಾಂಧವ್ಯದಲ್ಲಿ ತುಂಬುತ ಆತ್ಮೀಯತೆಯ ಬಂಧವನ್ನು ಬೆಸೆಯುವಲ್ಲಿ ಸಂಶಯವಿಲ್ಲ.
ಮೊಬೈಲ್, ಟೆಲಿಫೋನ್ ಇಲ್ಲದ ಕಾಲವದು, ಮದುವೆ ಮುಗಿಸಿಕೊಂಡು ವಧು ವರನ ಮನೆಗೆ ಹೋಗುವಾಗ ನಮ್ಮ ಜನಪದರು “ಹೊತ್ತಾಗಿ ನೀಡಿದರೂ ಉಣಬೇಕು ಮಗಳೇತೌರಿಗೆ ಹೆಸರ ತರಬೇಕು ಎಂದು ಅವರನ್ನು ತಾಳ್ಮೆಯ ಮೌನ ಪಾಶದಲಿ ಕಟ್ಟಿ ಸಂಸಾರ ತೂಗಿಸಿಕೊಂಡು ಹೋಗುವಂತೆ ಕೊಟ್ಪ ಹೆಣ್ಣು ಕುಲಕ್ಕೆ ಹೊರಗು ಎಂಬಂತೆ ವಾದಿಸುತ್ತ ಅವಳ ಗಂಡನ ಮನೆ ತವರು ಮನೆಯ ಕೀರ್ತಿಗೆಬಡಿದಾಡುತ್ತಾರೆ.
ತಾಳಿ ಕಟ್ಟಿಕೊಂಡು ತಾಳಿ ಬಾಳಲು ಮೌನದ ಅಭಯವನ್ನು ಬಯಸುತ್ತಾರೆ.ಮೌನದಿ ಇರುವ ತನ್ನ ಅಭಿವ್ಯಕ್ತಿಯನ್ನು ಬರಹ ಮಾತಿನ ಮೂಲಕ ತೋನು ನುಂಗಿದ ಕಷ್ಟಕೋಟಲೆಗಳನ್ನು ಹೊರಹಾಕಿ ಮನಸನ್ನು ಖಾಲಿ ಮಾಡಿಕೊಂಡಃ ಜಾಲಿಯಾಗಿರಬಹುದು ಅಲ್ಲವೇ?
ಭಾರತಿ ಕೇದಾರಿ ನಲವಡೆ

ಭಾರತಿ ಕೇದಾರಿ ನಲವಡೆ
ಶಿಕ್ಷಕಿ ಮತ್ತು ಸಾಹಿತಿ.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ .ಮಂಗಳವಾಡ
ಹಳಿಯಾಳ(ಉ.ಕ)
ಕನ್ನಡ ನಾಡು ನುಡಿಸೇವೆಗಾಗಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಳಿಯಾಳ ಅಧ್ಯಕ್ಷೆಯಾಗಿ ಪ್ರಾಥಮಿಕದಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಕನ್ನಡ ಉಳಿಸಿ ಬೆಳೆಸುವ ಕೈಂಕರ್ಯ.
ಬಿಡುಗಡೆಯಾದ ಕೃತಿಗಳು:
ಸಂಕಲ್ಪ
ಕಾವ್ಯಕನಸು
ಅವಕಾಶವೆಂಬ ಅಮೃತ ಘಳಿಗೆ
ಚುಟುಕು ಚಿಟಿಕೆ
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ಸಾವಿತ್ರಿ ಬಾಯಿ ಫುಲೆ ರಾಷ್ಟ್ರ ಪ್ರಶಸ್ತಿ
ರಾಜ್ಯ ಮಟ್ಟದ ಪ್ರಶಸ್ತಿಗಳು
ಚಿನ್ಮಯ ಜ್ಞಾನಿ
ಶಿಕ್ಷಣ ಸೇವಾ ರತ್ನ
ಡಾ ಕಮಲಾ ಹಂಪನಾ
ಹೊಯ್ಸಳ ಸಾಹಿತ್ಯ ಪ್ರಶಸ್ತಿ
ಗುರುಕುಲ ತಿಲಕ
ಶಿಕ್ಷಣ ರತ್ನ
ವನಿತಾ
ಕರುನಾಡ ಚೇತನ
ಕಾವ್ಯಶ್ರೀ
ಗುರು ಭೂಷಣ
ಕರ್ನಾಟಕ ಮಹಿಳಾ ರತ್ನ
ಜೀವಮಾನ ಸಾಧನಾ2024
ಮಾತು ಮೌನ ಎಂಬುದರ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ