ಪ್ರೀತಿಯ ಹನಿ

Droplets of Water on Black Glass Panel

ಮಳೆಯ ಹನಿಯು

ಇಳೆಗೆ ಮುತ್ತಿಕ್ಕಿ

ಆದಾಗ ತನುವಿಗೆ ಸಿಂಚನ;

ನೆನಪಾಗುವದು ಆ ನಿನ್ನ

ಮೊದಲ ಸ್ಪರ್ಶದ

ಮೈ ಮನ ರೋಮಾಂಚನ!

ನಾ ಬರೆದ ಪ್ರೀತಿಯ

ಪದ ಪುಂಜಗಳು ಒದ್ದೆಯಾಗುತಿವೆ

ಮಳೆ ನೀರಿಗೆ ಬಿದ್ದು;

ನೆನೆದು ಹೋದರೂ

ನಿನ್ನ ಧ್ಯಾನದಲ್ಲಿ ಪುಟಿದೇಳುತಿವೆ

ಪದಗಳು ಎದ್ದು!

ಬಹಿರಂಗದಿ ನಿಲ್ಲದ

ವರುಣನ ಆರ್ಭಟದ ಸದ್ದು

ಅಂತರಂಗದಿ ನಿನ್ನ ನೆನಪುಗಳ

ಮೆಲಕು ಹಾಕುತ

ಮಲಗಿರುವೆ ಪ್ರೀತಿಯ ಹೊದ್ದು!

ನಿಲ್ಲದ ಮಳೆಯಲಿ

ನೀನಿಲ್ಲಿ ಬಂದರೆ

ಅದುವೆ ಮಧುರ ಬಂಧನ!

ಜೊತೆ ಜೊತೆಗೆ

ನೀನಾಗುವೆ

ನನ್ನ ಕವನಕ್ಕೆ ಇಂಧನ!

********

ಮಹಾಂತೇಶ ಮಾಗನೂರ

Leave a Reply

Back To Top