ಕಾವ್ಯ ಸಂಗಾತಿ
ಸವಿತಾ ದೇಶಮುಖ
ಹೊಸ ವರುಷ
ಹೊಸ ವರುಷ- ಹೊಸ ಒನಪು
ನವ ಹುರುಪಿನ ಹುಡಕಾಟವು
ದಿನಗಳ ಕಳೆದು ತಿಂಗಳು ಸರಿದವು.
ಮತ್ತೆ ಬಂದಿತು ಹೊಸ ವರುಷವು…
ವಿನುತನ ಸುಮನದ ಆಶಯವು…
ತಿರುಗಿ ನೋಡಿ ವಿದಾಯ ಹೇಳಲು
ಅದಾವುದೊ ಮನದ ಮೂಲೆ ನೋವು
ಎದೆ ಭಾರ ಕ್ಷಣಗಳ ನೆನಪುಗಳು
ಸುಖ ಭಾವದಂಬರವೇರಿ ನೋಡಲು
ನೂರಾರು ಸುಖ ಸಾಗರ ಧಾರಿಯು..
ಸಾಧಿಸಿದ ಸ್ನೇಹ-ಸಾಹಿತ್ಯ ಸಲೀಲ ಕಟ್ಟಿ
ತಪ್ಪು ಒಪ್ಪುಗಳ ಪಯಣವ ಹಿಂದಟ್ಟಿ
ಬೇಕು ಬೇಡಗಳ-ಕನಸುಗಳ ಮೆಟ್ಟಿ
ಹೊಸ ಕನಸುಗಳ ಹಂದರದ ಬೆನ್ನಟ್ಟಿ
ಅಂಬರದ ಚಂದಿರನ ನಗುವೆಂತೆ …
ನಿಲ್ಲುವುದಕ್ಕೆ ಸಜ್ಜುಗೊಂಡಿತ್ತು ತನುಮನ
ಸಾಧನೆಯ ಹಾದಿಯತ್ತ ನಡೆದಿತ ಒಳ ಮನ
ಅದೃಷ್ಟ -ದುರಾದೃಷ್ಟ ಹಳಿದ- ಸುಮ್ಮಾನ
ಅಳಿದು ಅಸಹನೆ,ಅಹಂಕಾರ,ಅಂಧಕಾರನ
ದಾಟಿ ಸಹ ಬಾಳ್ವೆ ಸಹಕಾರ ಸಂಯೋಗದಲಿ…
ಪ್ರೀತಿ ಪ್ರೇಮ ವಿಶ್ವಾಸದ ತೇರು ಎಳೆಯೋಣ
ತೊಳಲಾಟದ ಗಲಭೆಯ ಮರೆಯೋಣ
ಅಂತವಿಲ್ಲದ ನಗುವಿಗೆ ಶರಣಾಗೋಣ
ಪರಾನುಭೂತಿ- ಸಮೃದ್ಧಿ ಬೆರಗಿನ ಬೆಳಕು….
ಹೊಸ ವರುಷದಲ್ಲಿ ಹರುಷವು ತರಲಿ….
ಸವಿತಾ ದೇಶಮುಖ