ಕಾವ್ಯ ಸಂಗಾತಿ
ಶೋಭಾ ನಾಗಭೂಷಣ
ಹಾಯ್ಕುಗಳು
೧.ಸ್ನೇಹವೆಂಬುದು
ಎರಡು ದಿನಗಳ
ಕೂಟ ಆಟವೇ?
೨.ನಾನು ಎನ್ನುವ
ಭಾವ ಅಳಿದು ಒಂದು
ಎನ್ನು ಸ್ನೇಹದಿ
೩.ತಾನು ಎನ್ನುವ
ಅಹಮ್ಮಿನಲಿ ಬೀಗಿ
ಹಾಳು ಸ್ನೇಹವು
೪.ಮಾತಿನಲ್ಲಿನ
ಮಿತಿಯ ಮೀರಿದಂದು
ಅಂತ್ಯ ಸ್ನೇಹವು
೫. ನಾಲ್ಕು ದಿನದ
ಈ ಬಾಳಿನಲಿ ತೊರೆ
ಹಮ್ಮು ಬಿಮ್ಮನು
೬.ಗೆಳೆತನವ
ಕಡೆಗಣಿಸಿ ಬಾಳು
ಕಷ್ಟದ ಗೋಳು
೭. ಮೆರೆದಾಗಲೇ
ಅಂತ್ಯವಾಯಿತು ಸ್ನೇಹ
ಗೋರಿಯೊಳಗೆ
೮. ನಂಬಿಕೆಗಿಲ್ಲಿ
ಜಾಗವಿಲ್ಲ ಸ್ನೇಹವೂ
ಬೀಗಿ ಸ್ವಾರ್ಥದಿ
೯.ಸ್ನೇಹದ ಮಾಡು
ಕಳಚುತ್ತಿದೆ ಸ್ವಾರ್ಥದ
ಮಹಲಿನಲಿ
೧೦. ಕರುಬುತನ
ಬೇಡವೆಂದಿಗೂ ನಿಜ
ಸ್ನೇಹ ಭಾವದಿ
೧೧. ಕಡೆಗಣಿಸಿ
ಕೊರಗದಿರು ನಿಜ
ಸ್ನೇಹಿತರನು
೧೨.ತಾನೇ ಹೆಚ್ಚೆಂಬ
ಭಾವವು ಸ್ನೇಹದಲಿ
ಪೂರ್ಣವಿರಾಮ
ಶೋಭಾ ನಾಗಭೂಷಣ